Wednesday, September 16, 2026
Wednesday, September 16, 2026

ಕುಂಸಿ- ಆನಂದಪುರ ರೈಲು ಮಾರ್ಗದ ಡ್ರೈನೇಜ್ ದುರಸ್ತ: ವಾಹನ ಓಡಾಟಕ್ಕೆ ಬದಲಿ ಮಾರ್ಗ: ಡಿಸಿ ಆದೇಶ

Date:

ಶಿವಮೊಗ್ಗ ಜಿಲ್ಲೆಯ ಕುಂಸಿ-ಆನಂದಪುರ ನಡುವೆ ಬರುವ ಎಲ್.ಹೆಚ್/ ಎಲ್‌ಸಿ.ನಂ: 105 ರಲ್ಲಿ ಡ್ರೈನೇಜ್ ಸರಿಪಡಿಸಲು ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಜು.20 ರಿಂದ 30 ರವರೆಗೆ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿದ್ದು, ಈ ಆದೇಶವನ್ನು ಆ. 05 ರವರೆಗೆ ಮುಂದೂಡಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ‌ ಆದೇಶಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆರೆದು ಡ್ರೈನೇಜ್ ಸರಿಪಡಿಸುವ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ಕಲಂ 115ರನ್ವಯ
ಎಲ್‌ಸಿ 105- 117/000-100 ಕುಂಸಿ-ಆನಂದಪುರ ರೈಲ್ವೆ ನಿಲ್ದಾಣಗಳ ನಡುವೆ ದಿ:01/08/2026 ರ ಮಧ್ಯಾಹ್ನ 1 ರಿಂದ ದಿ: 05/08/2026 ರ ರಾತ್ರಿ 12.59 ರವರೆಗೆ ತಾತ್ಕಾಲಿಕವಾಗಿ ಯಡೇಹಳ್ಳಿ ಯಿಂದ ರಿಪ್ಪನ್‌ಪೇಟೆ ರಸ್ತೆ – ಹಾಲಗದ್ದೆ-ಬಟ್ಟೆಮಲ್ಲಪ್ಪ-ಹೊಸನಗರ ಹಾಗೂ ಆನಂದಪುರ-ಯಡೆಹಳ್ಳಿ-ಹೆಬೈಲ್ ರಸ್ತೆ-ಆಡೂರು-ಕೋಣನತಲೆ-ಹೊಸೂರು-ಸಾಗರ ಈ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದ್ದು, ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...