Tuesday, July 21, 2026
Tuesday, July 21, 2026

ಸಹ್ಯಾದ್ರಿ ವಿಜ್ಞಾನ ಮತ್ತು ಕಲಾ ಕಾಲೇಜುಗಳ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ ಪುನರಾರಂಭಿಸಲು ಶಾಸಕರ ಒತ್ತಾಯ

Date:

ಶಿವಮೊಗ್ಗದ ಹೆಮ್ಮೆಯ ಶೈಕ್ಷಣಿಕ ಸಂಸ್ಥೆಗಳಾದ ಸಹ್ಯಾದ್ರಿ ವಿಜ್ಞಾನ ಮತ್ತು ಕಲಾ ಕಾಲೇಜುಗಳ ಸ್ನಾತಕೋತ್ತರ (PG) ಕೋರ್ಸ್‌ಗಳ ಪ್ರವೇಶಾತಿಯನ್ನು ಈ ವರ್ಷದ ಅಧಿಸೂಚನೆಯಿಂದ ಕುವೆಂಪು ವಿಶ್ವವಿದ್ಯಾಲಯವು ದಿಢೀರನೆ ಕೈಬಿಟ್ಟಿರುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಈ ಕುರಿತು ಮಾನ್ಯ ಕುಲಪತಿಗಳಿಗೆ ಭೇಟಿ ಮಾಡಿ ಪ್ರವೇಶಾತಿಯನ್ನು ಪುನರಾರಂಭಿಸಲು ಪರಿಷ್ಕೃತ ಅಧಿಸೂಚನೆ ಹೊರಡಿಸುವಂತೆ ಒತ್ತಾಯ ಮಾಡಲಾಯಿತು.

ನಮ್ಮ ಪ್ರಮುಖ ಆಕ್ಷೇಪಣೆಗಳು ಹಾಗೂ ವಾಸ್ತವಾಂಶಗಳು:

75 ವರ್ಷಗಳ ಇತಿಹಾಸ: ಮಲೆನಾಡು ಭಾಗದ ಸಾವಿರಾರು ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಬೆಳಕಾಗಿರುವ ಈ ಘಟಕ ಕಾಲೇಜುಗಳು ನಗರದ ಹೃದಯಭಾಗದಲ್ಲಿದ್ದು, ಸಾರಿಗೆ ಸಂಪರ್ಕಕ್ಕೆ ಮೊದಲ ಆದ್ಯತೆಯಾಗಿದೆ.

ಅತ್ಯುತ್ತಮ ಶೈಕ್ಷಣಿಕ ದಾಖಲೆ: ಇತ್ತೀಚೆಗಷ್ಟೇ ಬಯೋಟೆಕ್ನಾಲಜಿಯಲ್ಲಿ 10 ಕ್ಕೆ 5 ರಾಂಕ್ ಹಾಗೂ ರಾಜ್ಯಶಾಸ್ತ್ರದಲ್ಲಿ ಸಾಲು ಸಾಲು ರಾಂಕ್‌ಗಳನ್ನು ತಂದುಕೊಟ್ಟ ಇತಿಹಾಸ ಈ ಸಂಸ್ಥೆಯಾಗಿದ್ದು, ನ್ಯಾಕ್ (NAAC) ಸಮಿತಿಯು ಸಹ ಇಲ್ಲಿ ಪಿಜಿ ವಿಭಾಗಗಳನ್ನು ನಡೆಸಲು ಶಿಫಾರಸು ಮಾಡಿದೆ.

ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆಯಿಲ್ಲ: ಇಲ್ಲಿ ಬೋಧಿಸುವ ಶೇ. 99 ರಷ್ಟು ಅಧ್ಯಾಪಕರು ಖಾಯಂ ಆಗಿದ್ದು, ಡಾಕ್ಟರೇಟ್ ಪದವಿ ಹೊಂದಿದ್ದಾರೆ. ಇವರಿಂದ 24 ವಿದ್ಯಾರ್ಥಿಗಳು ಈಗಾಗಲೇ ಪಿಎಚ್.ಡಿ ಪಡೆದಿದ್ದಾರೆ.

ಹೀಗಿದ್ದರೂ, ಯಶಸ್ವಿಯಾಗಿ ನಡೆಯುತ್ತಿರುವ ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಫಿಸಿಕ್ಸ್ ಹಾಗೂ ರಾಜ್ಯಶಾಸ್ತ್ರದಂತಹ ಪ್ರಮುಖ ಪಿಜಿ ಕೋರ್ಸ್‌ಗಳನ್ನು ದಿಢೀರನೆ ಸ್ಥಗಿತಗೊಳಿಸುವುದು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳುವ ನಿರ್ಧಾರವಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕುವೆಂಪು ವಿಶ್ವವಿದ್ಯಾಲಯವು ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆದು, ಸಹ್ಯಾದ್ರಿ ಕಾಲೇಜುಗಳಲ್ಲಿ ಪಿಜಿ ಕೋರ್ಸ್‌ಗಳ ಪ್ರವೇಶಾತಿಯನ್ನು ಪುನರಾರಂಭಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...

Rotary Club of Shivamogga ಮಹಿಳಾ ಉದ್ಯಮಿಗಳೆ, ನಿಮ್ಮ ಕನಸುಗಳನ್ನ ಆತ್ಮ ವಿಶ್ವಾಸದಿಂದ ಹಂಚಿಕೊಳ್ಳಿ : ಎನ್.ಗೋಪಿನಾಥ್

Rotary Club of Shivamogga ಆತ್ಮವಿಶ್ವಾಸದಿಂದ ಕನಸುಗಳನ್ನು ಹಂಚಿಕೊಳ್ಳಿ ಎಂದು ರೋಟರಿ...