ಸಾಗರ ತಾಲ್ಲೂಕಿನ ನಾಡಮಂಚಾಲೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬೃಹತ್ ವಿದ್ಯುತ್ ಪ್ರಸರಣ ಮಾರ್ಗಗಳು ಜುಲೈ 25 ಅಥವಾ ಅದರ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಚಾಲನೆಗೊಳ್ಳಲಿವೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ.
ನಾಡಮಂಚಾಲೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 2×100 MVA, 220/110 KV ಹಾಗೂ 1×10 MVA, 110/11 KV ಶಕ್ತಿ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಮತ್ತು ಉದ್ದೇಶಿತ 220 KV (1.35 ಕಿ.ಮೀ) ಹಾಗೂ 110 KV ಲಿಲೋ (1.08 ಕಿ.ಮೀ) ವಿದ್ಯುತ್ ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 25 ರಿಂದ ಮಾರ್ಗಗಳನ್ನು ಚಾಲನೆಗೊಳಿಸಲಾಗುತ್ತಿದೆ.
ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆಗಳು:
ಅಪಾಯಕಾರಿ ವಿದ್ಯುತ್ ಮಾರ್ಗಗಳು ಚಾಲನೆಗೊಳ್ಳುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
ಗೋಪುರಗಳನ್ನು ಹತ್ತುವುದು ನಿಷೇಧಿಸಲಾಗಿದೆ. ವಿದ್ಯುತ್ ಕಂಬಗಳು ಅಥವಾ ಬೃಹತ್ ಗೋಪುರಗಳನ್ನು (ಟವರ್) ಯಾರು ಹತ್ತಬಾರದು.
ದನಕರುಗಳನ್ನು ಕಟ್ಟಬಾರದು. ವಿದ್ಯುತ್ ಗೋಪುರಗಳ ಆವರಣದಲ್ಲಿ ಅಥವಾ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ.
ವಸ್ತುಗಳನ್ನು ಎಸೆಯಬಾರದು, ವಿದ್ಯುತ್ ವಾಹಕ ತಂತಿಗಳಿಗೆ ತಗುಲುವಂತೆ ಯಾವುದೇ ವಸ್ತುಗಳು ಅಥವಾ ತಂತಿಗಳನ್ನು ಎಸೆಯಬಾರದು.
ಈ ನಿಯಮಗಳನ್ನು ಮೀರಿ ನಡೆಯುವ ಕೃತ್ಯಗಳಿಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಸಾರ್ವಜನಿಕರೇ ನೇರ ಹೊಣೆಗಾರರಾಗಿರುತ್ತಾರೆ. ಉಂಟಾಗುವ ಆಸ್ತಿ-ಪಾಸ್ತಿ ಅಥವಾ ಜೀವ ಹಾನಿಗೆ ಕೆವಿಪ್ರನಿನಿಯು ಯಾವುದೇ ಜವಾಬ್ದಾರಿ ವಹಿಸುವುದಿಲ್ಲ ಹಾಗೂ ಪರಿಹಾರ ನೀಡಲಾಗುವುದಿಲ್ಲ ಎಂದು ಶಿವಮೊಗ್ಗ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಚ್ಚರಿಕೆ…..ಸಾಗರ ತಾಲ್ಲೂಕಿನ ನಾಡಮಂಚಾಲೆಯ ಹೊಸ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಜುಲೈ 25 ರಂದು ಚಾಲನೆ.! ಕೆಪಿಟಿಸಿಎಲ್ ಪ್ರಕಟಣೆ
Date:
