ಜ್ಞಾನ ವೃದ್ಧಿಗೆ, ಏಕಾಗ್ರತೆ ಮತ್ತು ತಾಳ್ಮೆಯನ್ನು ಕಲಿಸುವ ಚದುರಂಗದಾಟವನ್ನು ಪ್ರತಿಯೊಬ್ಬ ಮಕ್ಕಳೂ ಕಲಿಯಬೇಕು ಎಂದು ಸಣ್ಣ ಕೈಗಾರಿಕಾ ನಿಗಮದ ಮಾಜಿ ಉಪಾಧ್ಯಕ್ಷ ಎಸ್. ದತ್ತಾತ್ರಿ ಹೇಳಿದರು.
ಶಿವಮೊಗ್ಗ ನಗರದ ಲೈಕ್ ಚೆಸ್ ವತಿಯಿಂದ ಮುಖ್ಯ ಚರ್ಚ್ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಚೆಸ್ ಆಡುವುದರಿಂದ ಓದಿನಲ್ಲಿ ಏಕಾಗೃತೆ ಹೆಚ್ಚಾಗುತ್ತದೆ. ಶಿಸ್ತನ್ನು ಕಲಿಸುವ ಬುದ್ದಿವಂತಿಕೆಯ ಆಟವಾಗಿದೆ ಎಂದು ಅವರು ತಿಳಿಸಿದರು.
ಪಂದ್ಯಾವಳಿಗೆ ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 275 ಮೇಲ್ಪಟ್ಟು ಸ್ಪರ್ಧಿಸಿ ದ್ದರು. ಇದರಲ್ಲಿ ಆಯ್ಕೆಯಾದ ಆಟಗಾರರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಚೆಸ್ ತರಬೇತುದಾರ ಚಿರಂತ್, ದೀಪಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಚೆಸ್, ಕಲಿಕೆಯಿಂದ ಏಕಾಗ್ರತೆ ಮತ್ತು ಜೀವನದಲ್ಲಿ ಶಿಸ್ತು ಮೂಡುತ್ತದೆ- ಎಸ್.ದತ್ತಾತ್ರಿ
Date:
