ಮತದಾರರು ಭರ್ತಿ ಮಾಡಿದ ಗಣತಿ ನಮೂನೆ ಬಿ ಎಲ್ ಒ ಗಳಿಗೆ ಹಿಂದಿರುಗಿಸದೆ ಹೋದರೆ ಅಂಥವರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಆದ್ದರಿಂದ ಜನರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸದೆ ಜವಾಬ್ದಾರಿಯಿಂದ ಸಹಕರಿಸಬೇಕು ಎಂದು ಫ್ರೆಂಡ್ಸ್ ಸೆಂಟರ್ ನ ವಿಶೇಷ ಸಲಹೆಗರರು ಹಾಗೂ ಪೂರ್ವಾಧ್ಯಕ್ಷರಾದ ಎಸ್.ದತ್ತಾತ್ರಿಯವರು ಹೇಳಿದರು.
ಫ್ರೆಂಡ್ಸ್ ಸೆಂಟರ್ ಗೋಪಾಳದಲ್ಲಿ ಏರ್ಪಡಿಸಿದ್ದ “ಗಣತಿ ನಮೂನೆ ಮಾಹಿತಿ” “ಮತದಾರರ ಪಟ್ಟಿ ಪರಿಷ್ಕರಣೆ” ಕುರಿತು ಮಾತನಾಡಿ ಅವರು, ಮತದಾರರ ಪಟ್ಟಿಯ ಪರಿಸ್ಕರಣೆ ಸಂಬಂಧ ಬಿ ಎಲ್ ಒ ಗಳು ಮನೆ ಮನೆಗೆ ಭೇಟಿ ನೀಡಿ, ಎನ್ನುಮರೇಷನ್ ಫಾರಂನ್ನು ನೀಡುತ್ತಿದದ್ದು, ಭರ್ತಿ ಮಾಡಿದ ಆ ಅರ್ಜಿಗಳನ್ನು ವಾಪಾಸ್ ಅವರಿಗೆ ನೀಡುವಂತೆ ತಿಳಿಸಿದರು.
ಮತದಾರರ ನಮೂನೆಯನ್ನು ಹೇಗೆ ಭರ್ತಿ ಮಾಡಬೇಕು ಎಂದು ತಿಳಿಸಿದ ಅವರು, ಹಂತ ಹಂತವಾಗಿ ಫಾರಂಗಳನ್ನು ತೋರಿಸುತ್ತ ವಿವರಣೆ ನೀಡಿ, ಮತದಾರರು ಎಸ್ ಐ ಆರ್ ಕುರಿತಂತೆ ಹಾಗೂ ಮತದಾರರ ಪಟ್ಟಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್ ಮಾತನಾಡಿ, ಎಲ್ಲರೂ ಫಾರಂಗಳನ್ನು ಬಿ ಎಲ್ ಒ ಗಳ ಹತ್ತಿರ ತೆಗೆದುಕೊಂಡಿದ್ದೀರಾ, ಆದರೆ ಭರ್ತಿ ಮಾಡಲುಬಾರದೆ ಹೋದಲ್ಲಿ ಈ ದಿನ ನಮಗೆ ಇದರ ಮಾಹಿತಿಯನ್ನು ತಿಳಿಸಿದ್ದಾರೆ. ಮತ್ತೊಮ್ಮೆ 2002 ರ ಮತದಾನದ ಪಟ್ಟಿಯನ್ನು ನೋಡಿ ತಿಳಿದುಕೊಂಡು, ಈ ಫಾರಂನ ಜರಾಕ್ಸ್ ಪ್ರತಿ ಮಾಡಿಸಿ, ಫಾರಂ ತುಂಬಿ ಪರಿಶೀಲಿಸಿ ನಂತರ ಒರಿಜಿನಲ್ ಅರ್ಜಿಗೆ ಬರೆದು ತಡ ಮಾಡದೆ ಬೂತ್ ಲೆವೆಲ್ ಆಫೀಸರ್ (ಬಿ ಎಲ್ ಒ) ಗಳಿಗೆ ಮರಳಿ ಹಿಂದಿರುಗಿಸಿ, ಮತದಾನದಿಂದ
ವಂಚಿತರಾಗಬೇಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿ.ನಾಗರಾಜ್ ಪ್ರಾಸ್ತವಿಕವಾಗಿ ಮಾತಾಡಿದರು, ಕಾರ್ಯದರ್ಶಿ ರಮೇಶ್ ಬಾಬು ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕುಮಾರ್ ರವರು ಎಲ್ಲರನ್ನು ವಂದಿಸಿದರು. ಜಿ.ವಿಜಯಕುಮಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷಿಣಿ ಸುನೀತ ಚೇತನ್, ಖಜಾಂಚಿ ಉಮಾ ವೆಂಕಟೇಶ್, ಗುರುನಾಥ್, ಸತ್ಯನಾರಾಯಣ.ಜಿ., ರವೀಂದ್ರನಾಥ್ ಐತಾಳ್, ಪಂಚಾಕ್ಷರಯ್ಯ ಹಿರೇಮಠ್, ಟಿ.ಎಲ್.ಸುರೇಶ್, ರಾಜೇಶ್.ಆರ್, ಸಂದ್ಯಾ ಸತ್ಯನಾರಾಯಣ, ವೀಣಾ ಗುರುನಾಥ್, ಶ್ರೀನಿವಾಸ್ ಕಾಮತ್, ಮನೋಹರ್, ಅನಿತಾ ಸುರೇಂದ್ರ ಕಾಸಲ, ಬಿಂದು ವಿಜಯಕುಮಾರ್, ಉಷ ರಮೇಶ್, ಸುವರ್ಣ ವಿಜಯ ಕುಮಾರ್, ಲಕ್ಷ್ಮೀ ಸತ್ಯನಾರಾಯಣ, ಸುನಂದಾ ವೆಂಕಟೇಶ್, ರಜನಿ ಅಶೋಕ್, ಲತಾ ಶಂಕರ್, ಫ್ರೆಂಡ್ಸ್ ಸೆಂಟರ್ ನ ಸದಸ್ಯರು ಉಪಸ್ಥಿತರಿದ್ದರು.
