Saturday, July 18, 2026
Saturday, July 18, 2026

” ಪುಟ್ಟ ಅಂಧಮಕ್ಕಳ ಸೇವೆಮಾಡಲು ಸಿಕ್ಕ ಅವಕಾಶ .ನನ್ನ ಸುಕೃತ- ಶ್ರೀದೇವಿ.

Date:

ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತದಲ್ಲಿರುವ ಬಿ.ವಿ.ಎಸ್ ಫ್ಯಾಮಿಲಿ ಸಲೂನ್ ವತಿಯಿಂದ ಇಂದು ಅತ್ಯಂತ ಶ್ಲಾಘನೀಯ ಸಮಾಜಮುಖಿ ಕಾರ್ಯ ನಡೆಯಿತು.

ಗೋಪಾಳದಲ್ಲಿರುವ ಶಾರದ ದೇವಿ ಅಂಧರ ವಿಕಾಸ ಶಾಲೆಯ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಕಟಿಂಗ್ ಸೇವೆಯನ್ನು ನೀಡಲಾಯಿತು.

ಸಲೂನ್ ವ್ಯವಸ್ಥಾಪಕಿ ಶ್ರೀಮತಿ ಶ್ರೀದೇವಿ ಹಾಗೂ ಅವರ ಸಹಾಯಕರು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಅತ್ಯಂತ ಪ್ರೀತಿ, ಕಾಳಜಿ ಮತ್ತು ಶ್ರದ್ಧೆಯಿಂದ ಕಟಿಂಗ್ ಮಾಡಿದರು. ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು, ಮಾತನಾಡಿ, ಅವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀದೇವಿ ಅವರು ಭಾವುಕರಾಗಿ,
“ಇಂದು ನನ್ನ ಬದುಕಿನ ಅತ್ಯಂತ ಸಾರ್ಥಕ ದಿನ. ಈ ಪುಟ್ಟ ಅಂಧ ಮಕ್ಕಳಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸುಕೃತ. ಅವರ ಮುಗ್ಧ ಮಾತುಗಳು, ಪರಸ್ಪರ ಮೇಲಿನ ಪ್ರೀತಿ, ಸ್ನೇಹವನ್ನು ಕಂಡಾಗ ಹೃದಯ ತುಂಬಿ ಬಂತು. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ಇಂತಹ ಮಕ್ಕಳೊಂದಿಗೆ ಕಳೆದ ಪ್ರತಿ ಕ್ಷಣವೂ ನನಗೆ ಆಶೀರ್ವಾದ. ಸೌಂದರ್ಯ ಎಂದರೆ ಕೇವಲ ಹೊರ ನೋಟವಲ್ಲ, ಒಳಗಿನ ಪ್ರೀತಿ ಮತ್ತು ಕಾಳಜಿಯೇ ನಿಜವಾದ ಸೌಂದರ್ಯ ಎಂದು ಈ ಮಕ್ಕಳಿಂದ ನಾನು ಕಲಿತೆ” ಎಂದರು.

ಕಟಿಂಗ್ ಮಾಡಿಸಿಕೊಂಡ ಮಕ್ಕಳು “ವಿಷ್ಣು ತರ ಕಾಣ್ತಿಯ, ಅಂಬಿ ತರ ಇದ್ದೀಯ” ಎಂದು ಪರಸ್ಪರ ತಲೆ ಸವರಿ ಸಂಭ್ರಮಿಸಿದಾಗ ಹೃದಯ ತುಂಬಿ ಬಂತು. ಅಂತರಂಗದ ಕಣ್ಣಿನಿಂದಲೇ ಬೆಳಕು ಮೂಡಿಸಿದಂತಹ ಆ ಕ್ಷಣಗಳು ಎಲ್ಲರ ಮನಸ್ಸನ್ನು ತಟ್ಟಿದವು.

ಹತ್ತನೇ ತರಗತಿ ಓದುತ್ತಿರುವ ಹೆಣ್ಣು ಮಕ್ಕಳ ಆಸೆಯಂತೆ ಮುಂದಿನ ದಿನಗಳಲ್ಲಿ ಅವರಿಗೆ ಉಚಿತ ಮೇಕಪ್ ಮತ್ತು ಸೌಂದರ್ಯ ತರಬೇತಿ ನಡೆಸಿಕೊಡುವುದಾಗಿ ಶ್ರೀದೇವಿ ಅವರು ಭರವಸೆ ನೀಡಿದರು.

ಈ ಮಹತ್ವದ ಸೇವಾ ಕಾರ್ಯಕ್ಕೆ ಶಾರದ ದೇವಿ ಅಂಧರ ವಿಕಾಸ ಶಾಲೆಯ ಮುಖ್ಯಸ್ಥರಾದ ಈಶ್ವರಭಟ್ ಮತ್ತು ಧರ್ಮದರ್ಶಿ ಅನಿತಾ ಅವರು ಬಿ.ವಿ.ಎಸ್ ಫ್ಯಾಮಿಲಿ ಸಲೂನ್ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದರು.
“ಶ್ರೀದೇವಿ ಅವರ ಈ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ವ್ಯಾಪಾರದ ಜೊತೆಗೆ ಇಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ” ಎಂದು ಅವರು ಶ್ಲಾಘಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಮೂಲ ಸೌಕರ್ಯ,ಸುಸಜ್ಜಿತ ರಸ್ತೆ ಸಂಪರ್ಕಕ್ಕೆ ಆದ್ಯತೆ- ಬಿ.ವೈ.ರಾಘವೇಂದ್ರ

B.Y. Raghavendra ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ...

Sahyadri Narayana Multispeciality Hospital, Shimoga ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗೋಪಾಳದಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ.

Sahyadri Narayana Multispeciality Hospital, Shimoga ನಗರದ ಗೋಪಾಳದಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ...

Pragathi Composite School ಪ್ರಬಂಧ ರಚನಾ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಪ್ರತಿಭಾ ಅನಾವರಣದ ಜೊತೆ ಆತ್ಮವಿಶ್ವಾಸ ವೃದ್ಧಿ – ಡಾ.ಪ್ರಭಾಕರ ರಾವ್.

Pragathi Composite School ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ವಿದ್ಯಾಭ್ಯಾಸದಲ್ಲಿ ಅಂಕಗಳಿಕೆ,...