Tuesday, August 25, 2026
Tuesday, August 25, 2026

ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

Date:

ಉಡುಪಿ ಜಿಲ್ಲೆಯ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯ ಬಾರ್ಕೂರು ಪ್ರಾ.ಆ.ಕೇಂದ್ರದ ಎದುರು ಸುಮಾರು 62 ವರ್ಷದ ಮಹಿಳೆಯು ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದು, ಈಕೆಯನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.15 ರಂದು ಮೃತಪಟ್ಟಿರುತ್ತಾರೆ. ಈಕೆ ತನ್ನ ಹೆಸರು ಲೀಲಾ ಅಲಿಯಾಸ್ ಶಾರದಾ ಅಲಿಯಾಸ್ ಕೆಂಚಮ್ಮ ಎಂದು ಹಾಗು ಗಾಜನೂರು, ಆಯನೂರು ಕಡೆಯವಳೆಂದು ಹೇಳಿಕೊಂಡಿರುತ್ತಾರೆ. ಈಕೆಯ ವಾರಸುದಾರರು ಪತ್ತೆಯಾಗದ ಕಾರಣ ಮರಣೋತ್ತರ ಶವಪರೀಕ್ಷೆ ಮಾಡಿಸಿ, ಕ್ರಮದಂತೆ ಮೃತದೇಹವನ್ನು ದಫನ ಮಾಡಲಾಗಿರುತ್ತದೆ.
ಮೃತ ಮಹಿಳೆಯ ಚಹರೆ 5.3 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಬಲಭುಜದ ಕಾಲರ್ ಬೋನ್‌ನಲ್ಲಿ ಹಾಗೂ ಎಡಗೈ ಕಪ್ಪು ಮಚ್ಚೆ ಇದ್ದು, ಎಡಗೈ ಮಣಿಗಂಟಿಗೆ ಕಪ್ಪು ದಾರ ಕಟ್ಟಿರುತ್ತಾರೆ. ಮೃತ ಮಹಿಳೆಯ ವಾರಸುದಾರರ ಬಗ್ಗೆ ಸುಳಿವು ಇದ್ದಲ್ಲಿ, ಬ್ರಹ್ಮಾವರ ಪೋಲಿಸ್ ಠಾಣೆಯ ದೂ. ಸಂ: 9480805453/ 9480805432, ಅಥವಾ ಇ-ಮೇಲ್ : brahmavaraudp@ksp.gov.in ಹಾಗೂ cpibrahmavaraudp@ksp.gov.in ಉಡುಪಿ ಜಿಲ್ಲೆಯ ಕಂಟ್ರೋಲ್ ರೂಮ್ ದೂ.ಸಂ: 0820-2526709/ 2526444 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...