Monday, August 24, 2026
Monday, August 24, 2026

ಕೋಟೆ ಶ್ರೀಮಾರಿಕಾಂಬ ದೇವಿಗೆ ಜುಲೈ 3 ರಂದು ಸ್ವರ್ಣಮುಖ ಕವಚ ಹಾಗೂ ರಜತದ್ವಾರದ ಸಮರ್ಪಣೆ

Date:

ಶಿವಮೊಗ್ಗ ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತಾದ್ವಾರ ಸಮರ್ಪಣಾ ಸಮಾರಂಭ ಜು.3 ರಂದು ಬೆಳಿಗ್ಗೆ 12 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನೆರವೇರಲಿದೆ.

ಹೊರನಾಡು ಅನ್ನಪೂರ್ಣ ದೇವಸ್ಥಾನದ ಧರ್ಮದರ್ಶಿ ಡಾ.ಜಿ ಭೀಮೇಶ್ವರ ಜೋಷಿ ರವರ ದಿವ್ಯಾ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ದೇವಿಗೆ ಸಮರ್ಪಣಾ ಕಾರ್‍ಯಕ್ರಮ ನಡೆಯಲಿದೆ.

ಕಾರ್‍ಯಕ್ರಮದ ಪೂರ್ವಭಾವಿಯಾಗಿ ಜೂ.30 ರಿಂದ ಜು.2ರವರೆಗೆ ವಿವಿಧ ಧಾರ್ಮಿಕ ಕಾರ್‍ಯಕ್ರಮಗಳು , ಗಣಪತಿ ಪೂಜೆ , ಪೂಣ್ಯಾಹ ವಾಚನ ಸೇರಿದಂತೆ ವಿವಿಧ ಕಾರ್‍ಯಕ್ರಮಗಳು ನೆರವೇರಲಿದೆ.
ಜು.3 ರಂದು ಬೆಳಿಗ್ಗೆ 8:30ಕ್ಕೆ ಗಣಪತಿ ಪೂಜೆಯೊಂದಿಗೆ ಸಮರ್ಪಣಾ ಕಾರ್‍ಯಕ್ರಮ ಆರಂಭವಾಗಲಿದ್ದು ಸಾಮೂಹಿಕ ಲಲಿತ ಹೋಮವನ್ನ ದೇವಸ್ಥಾನದ ಪ್ರದಾನ ಆರ್ಚಕ ಸಂತೋಷ್ ಭಾರದ್ವಾಜ್ ನಡೆಸಿಕೊಡಲಿದ್ದಾರೆ.

ಬೆಳಿಗ್ಗೆ 11:30 ಕ್ಕೆ ಪೂರ್ಣಾಹುತಿ ಹಾಗೂ ಅಮ್ಮನವರಿಗೆ ಬಂಗಾರದ ಮುಖ ಕವಚ ಸಮರ್ಪಣೆ ,ಗರ್ಭಗುಡಿಯ ರಜತದ್ವಾರ ಸಮರ್ಪಣೆ ನಡೆಯಲಿದ್ದು ಮಧ್ಯಾಹ್ನ ೧ ಗಂಟೆಗೆ ಮಹಾ ಮಂಗಳಾರತಿ , ಸಭಾ ಕಾರ್‍ಯಕ್ರ ಮ ನೆರವೇರಲಿದೆ.ನಂತರ ಭಕ್ತಾದಿಗಳಾಗಿ ಪ್ರಸಾದ ವಿತರಣೆ ನೆರವೇರಲಿದೆ.
ಸಭಾ ಕಾರ್‍ಯಕ್ರಮದಲ್ಲಿ ಡಾ.ಭೀಮೇಶ್ವರ ಜೋಷಿ ಆರ್ಶೀವಚನ ನೀಡಲಿದ್ದು , ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ . ಕೆ . ಮರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಶಾಸಕ ಎಸ್ . ಎನ್ . ಚನ್ನಬಸಪ್ಪ ,ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ,ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ , ಸಮಾಜ ಸೇವಕ ಎಂ.ಶ್ರೀಕಾಂತ್ , ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪ್ರಧಾನ ಕಾರ್‍ಯದರ್ಶಿ ಎನ್ . ಮಂಜುನಾಥ್ ತಿಳಿಸಿದ್ದಾರೆ.
ಈ ಕಾರ್‍ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.
ಜೂ.30 ರಿಂದ ಬೆಳಿಗ್ಗೆ 10:30ಯಿಂದ 12:30ವರೆಗೆ ಸಂಜೆ 5:30 ರಿಂದ 7:30 ರವರಗರೆಗೆ ಲಲಿತಾ ಸಹಸ್ರ ನಾಮ ಲಕ್ಷ ಕುಂಕುಮಾರ್ಚನೆ ಮಹಿಳೆಯರಿಗಾಗಿ ನೆರವೇರಲಿದ್ದು ,ಇದರಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...