Tuesday, August 25, 2026
Tuesday, August 25, 2026

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

Date:

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ ಸಂಕೇತ್‌ನ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯ ಮತ್ತು ಅಸಹನೀಯವಾಗಿದ್ದು, ಇದು ವಿಕೃತ ಮನಸ್ಥಿತಿಯ ಪರಮಾವಧಿಯಾಗಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಘಟನಾ ಸ್ಥಳವಾದ ಊರುಗಡೂರನ ರುದ್ರಭೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಮೃತ ಬಾಲಕನ ತಂದೆಗೆ ಧೈರ್ಯ ತುಂಬಿದರು.

ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, “ಸತ್ತ ಮೇಲೆಯೂ ಹಗೆತನ ಸಾಧಿಸುವ ಇಂತಹ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ಸಂಕೇತ್ ತಂದೆಯ ಬೆನ್ನಿಗೆ ನಿಂತು ನಾನು ಸ್ಪಷ್ಟವಾಗಿ ಹೇಳಿದ್ದೇನೆ — ನಿಮ್ಮೊಂದಿಗೆ ನಾವಿದ್ದೇವೆ ಮತ್ತು ಇಡೀ ಹಿಂದೂ ಸಮಾಜವಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು,” ಎಂದು ತಿಳಿಸಿದರು.

ಸಂಕೇತ್ ಹತ್ಯೆಯಾದ ಸಮಯದಲ್ಲಿ ಸಾಂತ್ವನ ಹೇಳಲು ‘ಕ್ಯಾಂಡಲ್ ಮಾರ್ಚ್’ ನಡೆಸಿದ್ದ ಮುಸ್ಲಿಂ ಸಮಾಜದ ಮುಖಂಡರು, ಇಂದು ಸಮಾಧಿ ಧ್ವಂಸವಾಗಿರುವ ಈ ಹೇಯ ಕೃತ್ಯಕ್ಕೆ ಏನು ಉತ್ತರ ನೀಡುತ್ತಾರೆ? ಸಂಕೇತ್‌ನನ್ನು ಹತ್ಯೆ ಮಾಡಿದವರು ನಶೆಯಲ್ಲಿದ್ದರು ಎಂದು ಹೇಳಲಾಗಿತ್ತು, ಅವರು ಈಗ ಜೈಲಿನಲ್ಲಿದ್ದಾರೆ. ಆದರೆ, ಈಗ ಈ ಸಮಾಧಿಯನ್ನು ಹಾಳು ಮಾಡಿದವರ ತಲೆಯಲ್ಲಿದ್ದ ಆ ‘ಕೋಮುವಾದಿ ನಶೆ’ ಯಾವುದು?” ಎಂದು ಶಾಸಕರು ಪ್ರಶ್ನಿಸಿದರು.

S.N. Channabasappa ಶಿವಮೊಗ್ಗದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಲು ಯತ್ನಿಸುವ ಇಂತಹ ಪುಂಡಾಟಿಕೆಗಳನ್ನು ಹತ್ತಿಕ್ಕಲು ನಾವು ಬದ್ಧರಾಗಿದ್ದೇವೆ. ಈ ಘಟನೆಯ ಹಿಂದೆ ಇರುವ ತಪ್ಪಿತಸ್ಥರನ್ನು ತಕ್ಷಣವೇ ಗುರುತಿಸಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...