Ambegalu Short Movie ಶಿವಮೊಗ್ಗ ಚಿತ್ರ ಸಮಾಜ ಆಯೋಜಿಸಿದ್ದ ಅಂಬೆಗಾಲು-೬ ಕಿರುಚಿತ್ರ ಸ್ಪರ್ಧೆಯಲ್ಲಿ ಪೃಥ್ವಿಗೌಡ ನಿರ್ದೇಶನದ ಕಬಂಧ ಹಾಗೂ ವಿಘ್ನೇಶ್ ಗೌಡ ನಿರ್ದೇಶನದ
ಹೊಳೆ ನೀರಿನ ಕಾವು’ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಗಳಿಸಿದೆ.
ಜಿಲ್ಲಾ ಕೈಗಾರಿಕಾ ಸಂಘ ಮತ್ತು ವಾಣಿಜ್ಯ ಸಂಘದ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಶಾಸಕ ಚನ್ನಬಸಪ್ಪ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರಾಗಿದ್ದು, ಈಗ ಚಲನಚಿತ್ರ ಕ್ಷೇತ್ರದಲ್ಲಿಯೂ ಕೂಡಾ ದಾಪುಗಾಲಿರಿಸಿದೆ. ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಅನುಕರಣೀಯವಾದದ್ದು. ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದೆ. ಇದು ಶ್ಲಾಘನೀಯ. ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಈ ಹಿಂದೆ ವಿಜೇತರಾದವರು ಚಲನಚಿತ್ರ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವುದು ಕೂಡಾ ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಸಕ ಧನಂಜಯ ಸರ್ಜಿ ಮಾತನಾಡಿ, ಹಿಂದೆ ೩ ಗಂಟೆಗಳ ಕಾಲ ಚಲನಚಿತ್ರ ಪ್ರದರ್ಶನ ನಡೆಯುತ್ತಿತ್ತು. ಈಗ ಅದು ನಿಮಿಷಗಳ ಲೆಕ್ಕಕ್ಕೆ ಬಂದಿದೆ. ಇದು ಪರೋಕ್ಷವಾಗಿ ಪ್ರೇಕ್ಷಕ ಸಮೂಹದಲ್ಲಿ ವ್ಯವದಾನ ಇಲ್ಲ ಎಂಬುದರ ಸಂಕೇತ. ಆದರೆ, ಪರಿಣಾಮಕಾರಿ ಅಭಿವೃದ್ಧಿಗೆ ಸದಭಿರುಚಿಯ ಚಿತ್ರಗಳು ಅತ್ಯಗತ್ಯವಾಗಿದ್ದು, ಇದಕ್ಕೆ ಕಾಲಮಿತಿ ಹಾಕುವುದು ಸರಿಯಲ್ಲ ಎಂದರು.
ಇದೇ ಸಂದರ್ಭದಲ್ಲಿ ಡಿ. ಸತ್ಯಪ್ರಕಾಶ್ ನಿರ್ದೇಶನದ ಗಿ-್ಗ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಅನಾವರಣಗೊಳಿಸಿದರು.
ಚಿತ್ರದ ಕಲಾವಿದರಾದ ಬೃಂದ ಆಚಾರ್ಯ, ಆಯನ, ನಾಯಕ ನಟ ಅಥರ್ವ ಪ್ರಕಾಶ್, `ಅಮರ ಪ್ರೇಮಿ ಅರುಣ್’ ಚಿತ್ರದ ನಾಯಕ ನಟ ಹರಿ ಶರ್ವ, ಡಾ. ರಜನಿ ಪೈ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿನಿಮೊಗೆ ಚಿತ್ರ ಸಮಾಜದ ಅಧ್ಯಕ್ಷರು, ಶಾಸಕರೂ ಆದ ಡಿ.ಎಸ್. ಅರುಣ್ ವಹಿಸಿ, ಅಂಬೆಗಾಲು-೬ ಕಿರುಚಿತ್ರ ಸ್ಪರ್ಧೆಗೆ ಸಹಕಾರ ನೀಡಿದ ಎಲ್ಲರನ್ನು ಗೌರವಿಸಿದರು.
ಸ್ಪರ್ಧೆಯಲ್ಲಿ ಈ ಬಾರಿ ೨೫ ಕಿರು ಚಿತ್ರಗಳು ಕಣದಲ್ಲಿದ್ದು, ೧೫ ಚಿತ್ರಗಳನ್ನು ಆಯ್ಕೆ ಸಮಿತಿ ಪರಿಗಣಿಸಿ, ೧೧ ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಸಂಚಾಲಕ ವೈದ್ಯನಾಥ್‌ರವರು ನಿರೂಪಿಸಿದರು.
ಬಾಕ್ಸ್
Ambegalu Short Movie ಉಳಿದ ವಿಭಾಗಗಳ ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ: ಶ್ರೇಷ್ಟ ನಟ: ವಿಕಾಸ ನಾಯ್ಕ (ತಂದೆಯ ಪಾತ್ರಧಾರಿ) / ಟಾನಿಕ್, ಶ್ರೇಷ್ಟ ನಟಿ: ಐಶ್ ಆರಾಧ್ಯ / ಎಂಥಾ ಲೋಕವಯ್ಯ, ಶ್ರೇಷ್ಟ ಪೋಷಕ ನಟ: ಸೋನ್ಯಾ ನಾಯ್ಕ (ಅಜ್ಜನ ಪಾತ್ರಧಾರಿ) ಋಣ / ರಾಮು ಎನ್. ರಾಥೋಡ್, ಶ್ರೇಷ್ಟ ಪೋಷಕ ನಟಿ: ಮಾನ್ಯ / ನೂರೂ ಜನ್ಮಕೂ… ನೂರಾರು ಜನ್ಮಕೂ… / ವಜ್ರ ಮೂವೀ ಕ್ರಿಯೇಷನ್ಸ್, ಶ್ರೇಷ್ಟ ಚಿತ್ರಕಥೆ : ಜನ್ಯರಾಗ / ಬಿ.ಪಿ. ರಾಹುಲ್, ಶ್ರೇಷ್ಟ ಸಂಗೀತ : ಸುಮೇದ್/ಆರ್ಟಿಸ್ಟ್ /ಇನ್-Áರಂ ಥಿಯೇಟರ್, ಶ್ರೇಷ್ಟ ಛಾಯಾಗ್ರಹಣ: ಗಣೇಶ್ ಭಟ್/ಹೊಳೆ ನೀರಿನ ಕಾವು/ ವಿಘ್ನೇಶ್ ಗೌಡ, ಶ್ರೇಷ್ಟ ಸಂಕಲನ : ಅನುರಂಜನ್ / ಅನಂತರ / ಶಿವಕುಮಾರ್ ಬುದೇಪ್ಪ ರಾಥೋಡ್, ತೀರ್ಪುಗಾರರ ಮೆಚ್ಚುಗೆಯ ಚಿತ್ರ ಮಜ್ನು ಮ್ಯಾರೇಜ್ / ಮಧು ಶಿವಮೊಗ್ಗ, ದ್ವಿತೀಯ ಬಹುಮಾನ ವಿಜೇತ ಚಿತ್ರ: ಹೊಳೆ ನೀರಿನ ಕಾವು / ವಿಘ್ನೇಶ್ ಗೌಡ, ಪ್ರಥಮ ಬಹುಮಾನ ವಿಜೇತ ಚಿತ್ರ : ಕಬಂಧ / ಪೃಥ್ವಿ ಎನ್. ಗೌಡ.
Ambegalu Short Movie ಅಂಬೆಗಾಲು – 06 ಕಿರುಚಿತ್ರ ಸ್ಪರ್ಧೆ ಫಲಿತಾಂಶ.ಕಬಂಧ ಚಿತ್ರಕ್ಕೆ ಪ್ರಥಮ ಪುರಸ್ಕಾರ.” ಹೊಳೆ ನೀರಿನ ಕಾವು ” ಚಿತ್ರಕ್ಕೆ ದ್ವಿತೀಯ ಸ್ಥಾನ
Date: