ಡಾ.ಸುಧೀಂದ್ರ.
ಪ್ರಧಾನ ಸಂಪಾದಕ.
ಕೆ ಲೈವ್ ನ್ಯೂಸ್
Klive Special Article ಸಂವಿಧಾನಾತ್ಮಕ ಹುದ್ದೆಯಾಗಿರುವ ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ಈಗೀಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಜಮ್ಮು & ಕಾಶ್ಮೀರ , ತಮಿಳುನಾಡು, ಕರ್ನಾಟಕ ,ದೆಹಲಿ ರಾಜ್ಯಗಳಲ್ಲಿನ. ರಾಜ್ಯಪಾಲರ ಕರ್ತವ್ಯಗಳ ಬಗ್ಗೆ ಬಹಳ ಟೀಕೆ ಟಿಪ್ಪಣಿ ಬಂದಿವೆ.
ಕೇಂದ್ರ ಮತ್ತು ರಾಜ್ಯಗಲ್ಲಿ ಒಂದೇ ಪಕ್ಷದ ಸರ್ಕಾರವಿದ್ದಾಗ ಈ ವಿವಾದ ಏಳದು. ಆದರೆ ಮುಖ್ಯವಾಗಿ
ವಿಪಕ್ಷ ಸರ್ಕಾರಗಳಿರುವ ಸನ್ನಿವೇಶದಲ್ಲಿ ಮಾತ್ರ ಈ ಸಮಸ್ಯೆ ಉದ್ಭವಿಸಿರುವುದನ್ನ ಗಮನಿಸಬಹುದು.
ರಾಷ್ಟ್ರಪತಿಗಳ ಪ್ರತಿನಿಧಿಯಾಗಿ, ಸಂವಿಧಾನದ ತಳಹದಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬ ವಿವೇಚನೆಗಳಿಂದ
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ವ್ಯವಸ್ಥೆ ರೂಪಿತವಾಗಿದೆ.
ಜನತೆಯ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರದ ನಡೆಯನ್ನ
ರಾಜ್ಯಪಾಲರ ಕಛೇರಿ
ನೋಡುತ್ತಿರುತ್ತದೆ.
ರಾಜಕೀಯ ಮತ್ತು ಮತ ಬ್ಯಾಂಕ್ ಗಳ
ಸೀಮಿತ ಸರಹದ್ದಿನಲ್ಲೇ ರಸಜ್ಯ ಸರ್ಕಾರ ನಡೆಯುತ್ತಿದ್ದರೆ ರಾಜ್ಯಪಾಲರು ಎಲ್ಲ ಅವಕಾಶಗಳ ಮೂಲಕ ಸರ್ಕಾರದ
ಬಿಲ್ ಗಳಿಗೆ ಸಹಿಹಾಕದೇ ,ಸವಿವರ ಕೇಳಿ ಹಿಂದಕ್ಕೆ ಕಳಿಸಬಹುದಾಗಿದೆ.
ಈಗ ಉದ್ಭವಿಸಿರುವ ಸಮಸ್ಯೆ ಜಟಿಲವಾಗಿದೆ. ದೀರ್ಘ ಅವಧಿ ಯಾವುದೇ ಬಿಲ್ ಗಳನ್ನ ಸಹಿಹಾಕದೇಇಟ್ಟುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೊರ್ಟ್ , ತಮಿಳುನಾಡು ಪ್ರಕರಣದಲ್ಲಿ ಅಭಿಪ್ರಾಯ ಪಟ್ಟಿದೆ.
ಅದರ ಬಗ್ಗೆ ಮಾಧ್ಯಮವೊಂದರಲ್ಲಿ ಹೀಗೆ ವರದಿಹೇಳುತ್ತದೆ
ʼರಾಜ್ಯಪಾಲರು, ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರಾಕರಿಸುವಂತಿಲ್ಲ. ಅವರು ಸಂಪೂರ್ಣ ವೀಟೋವನ್ನು ಹೊಂದಿರುವಂತೆ ವರ್ತಿಸುವಂತಿಲ್ಲ. ವಿಧಿ 200ರ ಪ್ರಕಾರ, ರಾಜ್ಯಪಾಲರು ಚುನಾಯಿತ ರಾಜ್ಯ ಸರಕಾರದ ಸಲಹೆ ಮತ್ತು ಬೆಂಬಲದ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕುʼ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು”
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಜಟಾಪಟಿಗೆ ಇಲ್ಲಿ ಪುಟ್ಟ ಮತ್ತು ಸ್ಪಷ್ಟ
ಅಭಿಪ್ರಾಯ ದೊರೆತಿದೆ.
ತಾನು ಮಾಡಿದ್ದಕ್ಕೆಲ್ಲಾ
ರಾಜ್ಯಪಾಲರು ಸಹಿ ಹಾಕಬೇಕು ಎಂಬ ಧೋರಣೆ ರಾಜ್ಯ ಸರ್ಕಾರಗಳಿಗೆ ತಕ್ಕುದ್ದಲ್ಲ. ಏಕೆಂದರೆ
ರಾಜಕೀಯ ಆಧಾರಿತ ತೀರ್ಮಾನ ಮತ್ತು ಸಂವಿಧಾನಾತ್ಮಕ ಆಧರಿತ ತೀರ್ಮಾನಗಳೇ ಬೇರೆ ಬೇರೆ.
ಈ ಅಂಕುಶಹಾಕಲು ರಾಜ್ಯಪಾಲರ ವಿವೇಚನೆ ಅಗತ್ಯವಿದೆ. ಅವರು ಸಂವಿಧಾನ ರಕ್ಷಿಸುವಲ್ಲಿ ರಾಜ್ಯದ ಪ್ರಥಮ ಪೀಠಸ್ಥರು.
ತಮಿಳುನಾಡು ಸರ್ಕಾರದ. ಆಡಳಿತ ಪಕ್ಷವು ಸದಸನದಲ್ಲಿ
ರಾಷ್ಟ್ರಗೀತೆಗೆ ಗೌರವ ನೀಡಲಿಲ್ಲ ಎಂಬ ಕಾರಣಕ್ಕೆ ರಾಜ್ಯಪಾಲರಾದ ರವಿ ವಿಚಲಿತರಾಗಿದ್ದರು.
ಈ ಕುರಿತು ದೇಶದಾದ್ಯಂತ ಬಲಿಷ್ಠ ಪ್ರತಿಕ್ರಿಯೆಗಳು ಬರಲೇ ಇಲ್ಲ.ಇದೊಂದು ಪರಮಾಶ್ಚರ್ಯ.
ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಪ್ರಸ್ತುತ ರಾಜ್ಯಪಾಲರ
ಕಾರ್ಯವೈಖರಿ ಬಗ್ಗೆ ಅಸಮಾಧಾನ ತಾಳಿದೆ. ವಿವಿಗಳಲ್ಲಿನ ನೇಮಕಾತಿ, ಮತ್ತು ಇತರೆ ನಿರ್ಧಾರಗಳು ರಾಜ್ಯಪಾಲರ ವಿವೇಚನಾ ಪರಿಧಯಿಂದ ಹೊರಗೆ ಬರಬೇಕು ಎಂದು ರಾಜ್ಯದಲ್ಲಿ ಅಧಿಕಾರ ಪಡೆದಿರುವ ಕಾಂಗ್ರೆಸ್ ಹೇಳುತ್ತಿದೆ.
ಇಂತಹ ಸಂಗತಿಗಳು ಮತ್ತೆ ಸಂಸತ್ತಿನಲ್ಲಿ ಆಳ ಚರ್ಚೆಗೊಳಪಡಬೇಕಿದೆ. ಇಂತಹ ಸಮಸ್ಯೆ ಹಲವಿವೆ.ಅದುಬಿಟ್ಟುಸಂಸತ್ತಿನಲ್ಲಿ ಬಹಳ ತೆಳುವಾದ ವಿವಾದಗಳನ್ನೇ ದೊಡ್ಡದು ಮಾಡಿ ಕಾಲವ್ಯರ್ಥಮಾಡುವುದು ಸಲ್ಲದು.