ಒಂದು ಹಂತಕ್ಕೆ ಬಂದರೆ ಓದು ಮುಂದುವರಿಸಲು ಸಾಧ್ಯವಾಗುವು ದಿಲ್ಲ. ಅದರಲ್ಲೂ ಮಹಿಳೆಯರಿಗೆ ಒಂದು ಸರ್ಕಾರಿ ನೌಕರಿ ಸಿಕ್ಕರೆ, ಮದುವೆ ಹಾಗೂ ಮಕ್ಕಳಾದರೆ ಅವರಓದುಅಲ್ಲಿಗೆ ಮುಗಿಯಿ ತೆಂದೆಅರ್ಥ.ಆದರೆ, ಇಲ್ಲೊಬ್ಬ ಅಪ್ಪಟ್ಟಗ್ರಾಮೀಣ ಹಿನ್ನೆಲೆಯಿಂದ ಬಂದ ಸರ್ಕಾರಿ ಶಾಲೆ ಶಿಕ್ಷಕಿಗೆ ಓದಿನ ದಾಹವೇ ತೀರಿದಂತಿಲ್ಲ. ಹೌದು ಅವರೇ ಉಮಾಶ್ರೀ ಕುಲಕರ್ಣಿ (ಉಮಾ ನಾಗರಾಜ ಚರಂತಿಮಠ ವಿವಾಹ ನಂತರ), 18 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಉಮಾ, ತನ್ನ ವೃತ್ತಿಯೊಂದಿಗೆಉನ್ನತ ವ್ಯಾಸಂಗ ಪೂರ್ಣಗಳಿಸಿದ್ದಲ್ಲದೇ ಈಗ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.
ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ, ದಿನವೊಂದಕ್ಕೆ ಎರಡು ನೂರು ಕಿಮೀ ಕ್ರಮಿಸುವ ಮೂಲಕ ವೃತ್ತಿಯಲ್ಲಿ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಇಂತಹ ಸಾಧನೆ ಮಾಡಿದ ಕೆಲವೇ ಕೆಲವರಲ್ಲಿ ಉಮಾ ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣವನ್ನ ಮೊಟಕುಗೊಳಿಸುವ ಅನಿವಾರ್ಯತೆ ನಡುವೆಯೂತಾಯಿ ಮಹದೇವಮ್ಮ ಹಾಲಯ್ಯ ಕುಲಕರ್ಣಿ ಅವರ ಪ್ರೋತ್ಸಾಹ ಹಾಗೂ ಛಲದಿಂದಾಗಿ ಪ್ರೌಢ ಶಿಕ್ಷಣ ಪೂರೈಸಿದರು.
ಆ ನಂತರ ಉತ್ತಮ ಅಂಕಗಳಿಸುವ ಮೂಲಕ ತಾವೇ ಇತರರಿಗೆ ಪ್ರೇರಣೆಯಾಗಿ ಶಿಕ್ಷಕರ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದರು. ಇದರ ಜೊತೆಗೆ ಸಂಗೀತಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಿದ ಉಮಾ, ಉತ್ತಮ ಗಾಯಕಿ ಯಾಗಿ ಹಲವು ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಒಂದು ಸರ್ಕಾರಿ ನೌಕರಿ, ಮದುವೆ ಮಕ್ಕಳು ಅಂತಾ ಆದರೆ ಅಲ್ಲಿಗೆ ಓದಿಗೆ ಪೂರ್ಣ ವಿರಾಮ ಇಡುವ ಇಂದಿನ ಬಹುತೇಕ ಮಹಿಳೆಯರಿಗೆ ರೈತ ಹಾಗೂ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದ ಉಮಾ ಒಂದು ಪ್ರೇರಣೆ. ಕೇವಲ 500 ಜನಸಂಖ್ಯೆ ಇರುವ ಹಾವೇರಿ ತಾಲೂಕಿನ ಗ್ರಾಮ ಕೆಸರಳ್ಳಿ ಅರಳಿದ ಕಮಲ ಈ ಉಮಾ. ನಂತರ ವೃತ್ತಿಗಾಗಿ ಧಾರವಾಡ ಜಿಲ್ಲೆಯ ಬಿ. ಹುಲಿಕಟ್ಟಿಯಲ್ಲಿ 13 ವರ್ಷಗಳ ಕಾಲ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಆಗುಂಬೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಪ್ರತಿಭಾನ್ವಿತರಿಗೆ ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ತಮ್ಮ ವಿದ್ಯಾದಾನದ ಸೇವೆಗೆಂದು ಪ್ರತಿದಿನ ಅಂದಾಜು 200 ಕಿಮೀ ಸಂಚಾರ ಇದು ಉಮಾ ಅವರ ದೈನಂದಿನ ದಿನಚರಿಯಾಗಿದೆ.
ಇದರ ಮಧ್ಯೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಬಿ.ಇಡ್ ಪದವಿಯನ್ನೂ ಮುಗಿಸಿದ್ದ ಉಮಾ ಅವರಿಗೆ ಓದಿನ ದಾಹ ತೀರಲಿಲ್ಲ. ನಂತರ ಹಂಪಿ ಕನ್ನಡವಿಶ್ವ ವಿದ್ಯಾಲಯದಲ್ಲಿ ಸಂಶೋಧನೆಗೆ ನೋಂದಣಿ ಮಾಡಿಸಿಯೇ ಬಿಟ್ಟರು. ನಂತರ ತಮ್ಮ ಬಿಡುವಿಲ್ಲದ ದಿನಚರಿಯಲ್ಲಿಯೇ ಮನೆ, ಮಕ್ಕಳನ್ನ ಆರೈಕೆ ಮಾಡಿಕೊಂಡು ಸತತ ಐದು ವರ್ಷಗಳ ಕಾಲ ಸಂಶೋಧನೆ ಮಾಡಿ ಇತ್ತಿಚಿಗೆ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದಾರೆ. ಸಮಾಜಶಾಸ್ತ್ರ ವಿಭಾಗದಲ್ಲಿ ಆರಂಭ ದಿಂದಲೂ ಆಸಕ್ತಿ ಹೊಂದಿದ ಇವರು, ಕೊಳಚೆ ಪ್ರದೇಶದ ಮಹಿಳೆ ಯರು ಎಂಬ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.
ಈ ಪ್ರಬಂಧ ಮಂಡಿಸುವುದಕ್ಕೂ ಮೊದಲು ಉಮಾ ಹಲವಾರು ಕೊಳಗೆರೆ ಮಹಿಳೆಯರನ್ನು ಭೇಟಿ ಮಾಡಿ ಅವರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಕುರಿತು ಅಧ್ಯಯನ ಮಾಡಿದ್ದರು. ಕೊಳಗೆರೆ ಮಹಿಳೆಯರ ಜೀವನದ ಎಲ್ಲ ಆಯಾಮಗಳ ಕುರಿತು ಮನವರಿಕೆ ಮಾಡಿಕೊಂಡಿದ್ದರಲ್ಲದೇ, ಅವರು ಎದುರಿಸುವ ಹಲವಾರು ಸಮಸ್ಯೆಗಳ ಕುರಿತುತಮ್ಮ ಮಹಾ ಪ್ರಬಂಧದಲ್ಲಿ ಬೆಳಕು ಚೆಲ್ಲಿದ್ದಾರೆ.
ಉಮಾ ಅವರ ಓದು ಬರಹ ಇಲ್ಲಿಗೆ ನಿಲ್ಲುವುದಿಲ್ಲ. ಹಲವಾರು ಕನ್ನಡ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.ಇವರ ಕವನಗಳು ಪತ್ರಿಕೆಗಳಲ್ಲಿ ಪ್ರಕಟ ವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಬಿಡುವಿಲ್ಲದಜೀವನ ಶೈಲಿಯಲ್ಲಿಯೂ ಸಾಂಸ್ಕತಿಕ ಚಟು ವಟಿಕೆಗಳ ಹಿಂದೆಉಮಾ ಬಿದ್ದಿರು ತ್ತಾರೆ. ಆದರೆ, ತಮ್ಮ ಈ ಸಂಶೋಧನೆಗೆ ಬೆನ್ನೆಲುಬಾಗಿ ನಿಂತಿದ್ದ ತಮ್ಮ ಪತಿ ನಾಗರಾಜ ಚರಂತಿಮಠ ಅವರನ್ನ ಉಮಾ ಸ್ಮರಿಸದೇ ಇರಲಿಲ್ಲ. ತಮ್ಮ ಪ್ರತಿ ಹೆಜ್ಜೆಯಲ್ಲಿಯೂ ಪತಿ ನಾಗರಾಜಅವರ ಪ್ರೋತ್ಸಾಹ ಹಾಗೂ ಬೆಂಬಲವೇ ಕಾರಣ ಎಂಬುದು ಉಮಾ ಅವರ ಮಾತು. ಅದೇ ರೀತಿ ತಮ್ಮ ಈ ಸಾಧನೆಗೆ ತಮ್ಮ ಅತ್ತೆ ಶಾರದಮ್ಮ ಚರಂತಿಮಠ, ಮಕ್ಕಳಾದ ಪ್ರಾರ್ಥನಾ ಹಾಗೂ ಸ್ಪಂದನಾ, ತಾಯಿ ಮಹದೇವಮ್ಮ, ತಂದೆ ಹಾಲಯ್ಯ, ತಮ್ಮ ಸಹೋದರರು ಚಿಕ್ಕಪ್ಪ ಚಿಕ್ಕಮ್ಮಂದಿರು ನಮ್ಮ ಶಾಲೆಯ ಸಹೋದ್ಯೋಗಿಗಳು ಹಾಗೂ ಇಲಾಖೆಯ ಮೇಲಾಧಿಕಾರಿಗಳ ಸಹಕಾರವನ್ನು ಇಲ್ಲಿ ಸ್ಮರಿಸುತ್ತಾರೆ.
ಇವರ ಸಾಧನೆಗೆ ಬಿ ಹುಲಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಗೊಂಬೆ ಪ್ರಾಥಮಿಕ ಶಾಲೆಯ ಮಕ್ಕಳು, ಸಿಬ್ಬಂದಿ ಹಾಗೂ ಶಾಲಾ ಆಡಳಿತ ಮಂಡಲಿಯವರು, ಗ್ರಮಾಸ್ಥರು ಹೆಮ್ಮೆ ಪಟ್ಟಿದ್ದಾರೆ. ಜೊತೆಗೆ ಓದಿನ ದಾಹ ಮುಂದು ವರೆಯಲಿ ಎಂದು ಆಶಿಸಿದ್ದಾರೆ.