Dr. Mallikarjuna Murugarajendra ಮಲೆನಾಡಿನ ಜನಜೀವನ, ಪರಿಸರ ,ಬದುಕನ್ನು ತಮ್ಮ ಕತೆ ,ಕಾದಂಬರಿ ಮೂಲಕ ಅನನ್ಯವಾಗಿ ಕಟ್ಟಿಕೊಟ್ಟ ನಾ.ಡಿಸೋಜ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಮಿಗಳವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕುವೆಂಪು ಅವರು ಸಮಗ್ರ ಮಲೆನಾಡನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಾಡು, ಪ್ರಾಣಿ-ಪಕ್ಷಿ ಸಂಕುಲ, ಬದುಕನ್ನು ಸಾಹಿತ್ಯದಲ್ಲಿ ಕಟ್ಟಿಕೊಡುವ ಪರಂಪರೆಯ ಮುಂದುವರೆದು ಉತ್ತರದಾಯಿಗಳಾದ ನಾ.ಡಿಸೋಜ ಅವರ ಬರಹ -ಬದುಕು ಮಲೆನಾಡಿನೊಂದಿಗೆ ಅವಿನಾಭಾವವಾಗಿ ಬೆರೆತು ಹೋಗಿತ್ತು. ಪರಿಸರ ಹಾಗೂ ಮಾನವೀಯ ಕಾಳಜಿಯನ್ನು ಮೂಲದ್ರವ್ಯವನ್ನಾಗಿಸಿಕೊಂಡು ಕತೆ,ಕಾದಂಬರಿಗಳನ್ನು ಸೃಜನಶೀಲವಾಗಿ ರಚಿಸಿದ ಅಪರೂಪದ ಲೇಖಕ ನಾ.ಡಿಸೋಜ ಅವರು.
Dr. Mallikarjuna Murugarajendra ಜನಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಮಲೆನಾಡಿನ ಪರಿಸರ ಉಳಿವು ಹಾಗೂ ಅಭಿವೃದ್ಧಿಯನ್ನು ಸದಾ ಧೇನಿಸುತ್ತಿದ್ದ ನಾಡಿಯವರು ಸರ್ವಧರ್ಮದವರೊಂದಿಗೆ ಬೆರೆತು ಭಾವೈಕ್ಯತೆಯ ಸೇತುವೆಯಾಗಿದ್ದರು .
ಶ್ರೀಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಶ್ರೀ ಮಠ 1991 ರಲ್ಲಿ ಆಯೋಜಿಸಿದ್ದ ಕೆಳದಿ ಅರಸರ ಸಮಗ್ರ ಅಧ್ಯಯನ ವಿಚಾರ ಸಂಕಿರಣದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಲಹೆ ,ಸಹಕಾರವನ್ನು ನೀಡಿದ್ದರು ತಮ್ಮ ಸಾಮಾಜಿಕ ಬದ್ಧತೆ ಮೂಲಕ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ನಾಡಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ದು:ಖ ಭರಿಸುವ ಶಕ್ತಿ ದೊರೆಯಲೆಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸಿದ್ದಾರೆ.