ನಾಡಿನ ಖ್ಯಾತ ಸಾಹಿತಿ ಮತ್ತು ಲೇಖನಗಳಿಂದ ಜನಮನ ಸ್ಪಂದಿಸಿದ
ಡಾ.ನಾ.ಡಿಸೋಜಾ ಅವರ ನಿಧನದಿಂದ
ಮಲೆನಾಡಿನ ಬಹುಮುಖ್ಯ ಸಾಹಿತ್ಯಕ ಎಳೆಯೊಂದು ಕಡಿದಂತಾಗಿದೆ.
ತಮ್ಮ ಕತೆ ಕಾದಂಬರಿಗಳ ಮೂಲಕ ವರ್ತಮಾನದ ಸಾಮಾಜಿಕ ಬಿಗುವುಗಳಿಗೆ ಕಾರಣ ಮತ್ತು ಪರಿಣಾಮಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಬಿಂಬಿಸಿದ್ದರು.
ಮಲೆನಾಡಿನ ಬನಿ ಅವರ ಬರವಣಿಗೆಗಳಲ್ಲಿ ಸದಾ ಒಳಧಾರೆಯಾಗಿ ವ್ಯಕ್ತವಾಗಿವೆ.
Na. D’Souza ಪತ್ರಿಕೆಗಳೇ ಅಲ್ಲದೆ ರೇಡಿಯೊ, ದೂರದರ್ಶನ ಮತ್ತು ಸಿನಿಮಾ ಮಾಧ್ಯಮಗಳಲ್ಲಿ
ಅವರ ಕೃತಿಗಳು ಪ್ರಕಟ,ಪ್ರಸಾರ ಮತ್ತು ಪ್ರೇಕ್ಷಕರ ಮನಗೆದ್ದಿವೆ.
ಭದ್ರಾವತಿ ಆಕಾಶವಾಣಿ ಕೇಂದ್ರದ ಮೂಲಕ ಅವರ ಹಲವು ಚಿಂತನ ಭಾಷಣಗಳು ಪ್ರಸಾರವಾಗಿವೆ.
ಅವರ ಪ್ರಖ್ಯಾತ ಕಾದಂಬರಿ ‘ಮುಳುಗಡೆ” ಭದ್ರಾವತಿ ಕೇಂದ್ರದ ಮೂಲಕ ರೇಡಿಯೋ ರೂಪವಾಗಿ ಪ್ರಸಾರವಾಗಿದೆ.
ಅಸಂಖ್ಯ ಕೇಳುಗರ ಮೆಚ್ವುಗೆಯನ್ನೂ ಪಡೆದಿದೆ.
“ನಾಡಿ” ಈ ಬಗ್ಗೆ ಆಕಾಶವಾಣಿ ಭದ್ರಾವತಿ ಕೇಂದ್ರದ
ಬಗ್ಗೆ ಮೆಚ್ಚುಗೆ ಸೂಸಿ ಮಾತಾಡಿದ್ದರು.
ನಾಡಿನ ಸಾಹಿತ್ಯಕ ವಲಯದಲ್ಲಿ
ಅವರೊಬ್ಬ ಎಲ್ಲಧರ್ಮಗಳನ್ನೂ ಮೀರಿದ ಬರಹಗಾರರಾಗಿದ್ದರು ಎಂದು ಕೆ ಲೈವ್ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ
ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ ಅವರು ನಾ.ಡಿಸೋಜಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.