CM Siddharamaiah ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಲಾಯ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ನಿಗಮದ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ಶ್ರೀ ನಾಗೇಂದ್ರರವರೇ ಸಂಪೂರ್ಣ ಸೂತ್ರಧಾರಿ, ಅವರ ಆದೇಶದಂತೆಯೇ ಹಣ ವರ್ಗಾವಣೆಯಾಗಿದೆ ಎಂದು ಇ.ಡಿ ಖಚಿತ ಪಡಿಸಿದೆ. ನಾಗೇಂದ್ರ ಹಾಗೂ ಸುಮಾರು 24ಮಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಎಂ.ಜಿ ರೋಡ್‌ನಲ್ಲಿ ಯೂನಿಯನ್ ಬ್ಯಾಂಕಿನಿಂದ 187 ಕೋಟಿ ವರ್ಗಾವಣೆಯಾಗಿದ್ದು, ಈ ಹಣವು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿಸಿ ತದನಂತರ ಈ ಹಣದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಗಾಗಿ20.19 ಕೋಟಿ ಹಣವನ್ನು ದುರ್ಬಳಕೆಯಾಗಿರುವುದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಇ.ಡಿ ಸ್ಪಷ್ಟಪಡಿಸಿದೆ.
ನಾಗೇಂದ್ರರವರ ಅಪ್ತ ಶ್ರೀ ವಿಜಯಕುಮಾರ್ ರವರ ಪೋನ್‌ನಲ್ಲಿ ಇದ್ದ ಮಾಹಿತಿಯನ್ನು ರಿಟ್ರೀವ್ ಮಾಡಿದಾಗ ಹಣ ಹಂಚಿಕೆಯ ಅವ್ಯವಹಾರ ಕಂಡು ಬಂದಿದೆ. ನಾಗೇಂದ್ರರವರು ವೈಯಕ್ತಿಕ ಉದ್ದೇಶಕ್ಕೆ ನಿಗಮದ ಹಣ ಉಪಯೋಗಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ರಾಜ್ಯ ಸರ್ಕಾರದ ಅದರಲ್ಲಿಯೂ ವಿಶೇಷವಾಗಿ ಈ ರಾಜ್ಯದ ಲಕ್ಷಾಂತರ ಬಡ ಪರಿಶಿಷ್ಟ ಪಂಗಡಗಳ ಜನ ಕಲ್ಯಾಣ ಯೋಜನೆಗೆ ಮೀಸಲಾಗಿದ್ದ ಹಣವನ್ನು ಈ ರೀತಿ ದುರ್ಬಳಕೆ ಯಾಗಿರುವುದು ತಮ್ಮ ಗಮನಕ್ಕೆ ಬಂದಿದ್ದರು ಕೂಡ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮೌನ ವಹಿಸಿ, ಪರೋಕ್ಷವಾಗಿ ಈ ಅಕ್ರಮಕ್ಕೆ ಸಹಕರಿಸುವುದರ ಮೂಲ ಪರಿಶಿಷ್ಟ ಪಂಗಡಗಳಿಗೆ ದ್ರೋಹವೆಸಗಿದ್ದಾರೆ.
ರಾಜ್ಯದ ಹಣಕಾಸು ಖಾತೆಯನ್ನು ವಹಿಸಿಕೊಂಡು ಸುಮಾರು 14 ಬಾರಿ ಬಜೆಟ್ ಮಂಡಿಸಿದ್ದೇನೆOದು ಬೀರುವ ಮಾನ್ಯ ಸಿದ್ದರಾಮಯ್ಯನವರು ಈ ರೀತಿಯ ಸರ್ಕಾರದ ಹಣವೇ ಚುನಾವಣೆಗೆ ಉಪಯೋಗಿಸಿರುವುದನ್ನು ಇ.ಡಿ ನಿರ್ದೇಶನಾಲಯ ಸಾಕ್ಷಿಗಳ ಸಮೇತ ಸ್ಪಷ್ಟಪಡಿಸಿದ್ದರು, ತಾವು ಇನ್ನು ಮಂಡತನದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ ಹಾಗೂ ದುರ್ಬಳಕೆಯ ಜವಾಬ್ದಾರಿಯ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ಈಗಾದರೂ ರಾಜಿನಾಮೆ ನೀಡಿ, ತಮ್ಮ, ರಾಜಕೀಯ ಮುತ್ಸದ್ದಿತನವನ್ನು ಈ ರಾಜ್ಯದ ಜನತೆಗೆ ತೋರಿಸಬೇಕಾಗಿ ಅಗ್ರಹಿಸುತ್ತೇನೆ.
CM Siddharamaiah ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಹಿನ್ನೆಲೆ. ಸಿದ್ಧರಾಮಯ್ಯ ರಾಜಿನಾಮೆ ನೀಡಿ- ಎಸ್.ದತ್ತಾತ್ರಿ
Date: