Thursday, November 21, 2024
Thursday, November 21, 2024

Klive Special Article ಕೆ ಲೈವ್ ವಿಶೇಷ. ನೃತ್ಯಗುರು ಸಹನಾ ಚೇತನಾ ನಾಟ್ಯಾರಾಧನಾ 13

Date:

ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.

Klive Special Article ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹ ಶಿವಮೊಗ್ಗ ಸ್ವತಃ ತಾನೂ ಕೂಡ ಅತ್ಯಂತ ಶ್ರೇಷ್ಠ ಮಹನೀಯರನ್ನು ಹೊಂದಿದೆ. ಕಲೆ, ಸಾಹಿತ್ಯ, ನೃತ್ಯ, ಯಕ್ಷಗಾನ, ನಾಟಕ ಹೀಗೆ ಎಲ್ಲ ಪ್ರಕಾರಗಳಲ್ಲೂ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಎಲ್ಲ ರಂಗಕ್ಕೂ ನೀಡುತ್ತಲೇ ಬಂದಿದೆ. ಶಿವಮೊಗ್ಗದಿಂದ ಹೊರಹೊಮ್ಮಿದ ಪ್ರತಿಭೆಗಳು ಜಗದಗಲ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆಂದರೆ ತಪ್ಪಾಗಲಾರದು. ಈ ಶಿವಮೊಗ್ಗ ಹೇಗೆ ಇಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತದೆಯೋ ಹಾಗೆ ಹೊರಗಿನಿಂದ ಬದವರಿಗೂ ಸಹ ನೀಡುತ್ತಲೇ ಬಂದಿದೆ ಎಂದರೆ ತಪ್ಪಾಗಲಾರದು.
Klive Special Article ಅದೇ ರೀತಿಯಲ್ಲಿ ಶಿವಮೊಗ್ಗ ಅನೇಕ ಪ್ರತಿಭೆಗಳ ಜನ್ಮತಾಣವಾಗಿ ಮಾರ್ಪಡಾಗುವಲ್ಲಿ ಇಲ್ಲಿನ ಹಿರಿಯ ಗುರುಗಳ ಮಾರ್ಗದರ್ಶನ ಬಹುಮುಖ್ಯ. ಆ ನಿಟ್ಟಿನಲ್ಲಿ ನೃತ್ಯದ ಆಸಕ್ತಿಯ ಪ್ರತಿಭೆಗಳನ್ನು ಎಲ್ಲೆಡೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದರಲ್ಲಿ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೂಡ ಒಂದಾಗಿದೆ. ಇಲ್ಲಿನ ನೃತ್ಯಗುರು ಶ್ರೀಮತಿ ಸಹನಾ ಚೇತನ್ ಅವರು ತಮ್ಮ ಹೊಸರೀತಿಯ ಆಲೋಚನೆಗಳಿಂದ ಕ್ರಿಯಾತ್ಮಕ ಕ್ರಿಯಾಶೀಲಭರಿತರಾಗಿ ಹಲವಾರು ನೃತ್ಯರೂಪಕಗಳನ್ನು ಸಂಯೋಜಿಸಿ ನಿರ್ಮಿಸಿದ್ದಾರೆ. ಅದರಲ್ಲಿ ಡಿ. ವಿ. ಜಿ ಯವರ ಅಂತಃಪುರ ಗೀತೆಗಳು, ಕುವೆಂಪುರವರ ಕಲಾಸುಂದರಿ, ವಚನ ಸಾಹಿತ್ಯದ ಮಹಾದೇವಿಯ ದಕ್ಷಿಣಾರ್ಧತೆ ತಪಸ್ವಿನಿ ಹಿಂದಿ ಸಾಹಿತ್ಯದ ಕವಿಕೇಶವ ದಾಸರ ಋತುರಂಗ ರಾಮಾಯಣ ಮಹಾಭಾರತ ಕಾವ್ಯಗಳು ಫ್ಯೂಶನ್ ಶಾಸ್ತ್ರೀಯ ಹಾಗೂ ಪಾಸ್ತಾತ್ಯ ನೃತ್ಯ ಶೈಲಿಗಳ ಸಮ್ಮಿಲನಗಳು ಸೇರಿದಂತೆ ವಿಶೇಷ ನೃತ್ಯ ರೂಪಗಳಾದ ಕರುಣೆಗೆ ಜೈ ಹಾಗೂ ಹೂವಿನ ಹಾಡು ಹಲವು ಪ್ರದರ್ಶನಗಳನ್ನು ಕಂಡಿವೆ. ಕಳೆದ 24 ವರ್ಷಗಳಿಂದ ಸಹಚೇತನ ನಾಟ್ಯಾಲಯ ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆಗೆ, ಅದರ ಉನ್ನತಿ ಮತ್ತು ಏಳಿಗೆಗಾಗಿ ಶ್ರಮಿಸುವುದು ಹಾಗೂ ಶಾಸ್ತ್ರೀಯ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜೊತೆಗೆ ಪ್ರಾದೇಶಿಕ ನೃತ್ಯ ಶೈಲಿಯಲ್ಲಿ ಪರಿಣತಿ ಹಾಗೂ ಪಾಂಡಿತ್ಯ ಹೆಚ್ಚಿಸಿ ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಸಾಂಪ್ರದಾಯಿಕ ನೃತ್ಯ ಕಲೆ ಪ್ರಚಾರ ಮಾಡುವುದು ಈ ನಾಟ್ಯಾಲಯದ ಆಶಯವಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಮಕ್ಕಳು, ಸರ್ಕಾರಿ ಶಾಲಾ ಮಕ್ಕಳು, ಮಾಧವ ನೆಲೆಯ ಮಕ್ಕಳು ಇವರುಗಳಲ್ಲಿಯೂ ಸಹ ನೃತ್ಯಗಳನ್ನು ಬೆಳೆಸುವ ಉದ್ದೇಶ ಇದರದ್ದಾಗಿದೆ.
ಸಾಮಾಜಿಕ ಸೇವೆಯ ದೃಷ್ಟಿಯಿಂದ ಹಲೋ ಹಿಂದುಳಿದ ಬಡಾವಣೆಯ ಮಕ್ಕಳಿಗೆ ಉಚಿತ ನೃತ್ಯ ತರಬೇತಿ ನೀಡಿ ಜನವರಿಯಲ್ಲಿ ಭಾರತೀಯಂ ಹೆಸರಿನಡಿಯಲ್ಲಿ ಕಾರ್ಯಕ್ರಮ, ಇದರೊಂದಿಗೆ ಸಮಾಜದಲ್ಲಿ ಪ್ರತಿಮ ಸೇವೆ ಸಲ್ಲಿಸುತ್ತಿರುವ ಸಮಾಜಮುಖಿ ಜೀವಿಗಳಿಗೆ ಅದೇ ತರ ಪುಣ್ಯ ಸ್ಮರಣೆಯ ಅಂಗವಾಗಿ ಅಜಿತಶ್ರೀ ಪುರಸ್ಕಾರ ಪ್ರಶಸ್ತಿ, ಅಲ್ಲದೆ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ನಾಟಿಯರಾಧನಾ ಎನ್ನುವ ರಾಷ್ಟ್ರೀಯ ನೃತ್ಯ ಮಹೋತ್ಸವವನ್ನು ಕೂಡ ನಡೆಸಿಕೊಂಡು ಬಂದಿದ್ದಾರೆ.
ಕಲೆ ಎಲ್ಲರಿಗಾಗಿ ಎನ್ನುವ ಉದ್ದೇಶದಿಂದ ನೃತ್ಯ ಗುರು ಸಹನಾ ಚೇತನ ಅವರು ಈಗಾಗಲೇ 6500ಕ್ಕೂ ಹೆಚ್ಚು ಮಂದಿ ಶಿಷ್ಯರಿಗೆ ತಮ್ಮ ನೃತ್ಯ ಜ್ಞಾನವನ್ನೆರೆದಿದ್ದಾರೆ. ವಿವಿಧ ವೇದಿಕೆಗಳಲ್ಲಿ ತಾವು ಸಹ ನೃತ್ಯ ಮಾಡಿ ತಮ್ಮ ಶಿಷ್ಯರಿಗೂ ನೃತ್ಯ ಮಾಡಿಸಿದ್ದಾರೆ. ಅಲ್ಲದೆ ಕಳೆದ ವರ್ಷ ಉಚಿತ ಸಾಮೂಹಿಕ ರಂಗ ಪ್ರವೇಶ ತಮ್ಮ ಶಿಷ್ಯರಿಗೆ ಮಾಡಿಸಿ ಹೊಸ ಕಾರ್ಯಕ್ಕೆ ನಾಂದಿ ಹಾಡಿದವರಾಗಿದ್ದಾರೆ.
ಸದಾ ಕ್ರಿಯಾಶೀಲರಾಗಿರುವಂತಹ ಇವರು ಈ ಬಾರಿ ಮತ್ತೆ ಅಂತರಾಷ್ಟ್ರೀಯ ನೃತ್ಯ ಮಹೋತ್ಸವಕ್ಕೆ ಸಜ್ಜಾಗಿದ್ದಾರೆ. ಆಗಸ್ಟ್ 30 ಶುಕ್ರವಾರ ಸಂಜೆ 6:30ಕ್ಕೆ ‘ರುದ್ರಾಭಿಸಾರ’ ನಟರಾಜ ಕೀರ್ತನಗಳ ನೃತ್ಯ ಸರಮಾಲೆಯನ್ನು ತಮ್ಮ ನಾಟ್ಯಾಲಯದ ಎಲ್ಲ ವಿದ್ಯಾರ್ಥಿಗಳಿಂದ ಮಾಡಿಸಲಿದ್ದಾರೆ. 31ರ ಶನಿವಾರ ಸಂಜೆ 6:30ಕ್ಕೆ ಶ್ರೀ ಲಲಿತಾಷ್ಟಕದ ನರ್ತನ ರೂಪವಾದ ‘ಲಲಿತಾರ್ಣವ’ ಎಂಬ ನೃತ್ಯ ರೂಪಕವನ್ನು ನೃತ್ಯ ಗುರು ಸಹನಾ ಚೇತನ ಅವರು ಏಕವ್ಯಕ್ತಿ ಪ್ರದರ್ಶನ ನೀಡಲಿದ್ದಾರೆ. ಅಂದೆ ಸಂಜೆ ಏಳಕ್ಕೆ ಹರಿದಾಸರ ಭಕ್ತಿ ಮಾರ್ಗವಾದ ದಾಸರ ದಾಸರ ಪದಗಳಿಂದ ಕೂಡಿದಂತಹ ನಾಟ್ಯ ಲಯದ ಹಿರಿಯ ವಿದ್ಯಾರ್ಥಿಗಳು ನರ್ತಿಸುವ ‘ಹರಿದಾಸ ಕೂಟ’ ವಾದರೆ ಮೂರನೆಯ ಹಾಗೂ ಕೊನೆಯ ದಿನ ಸೆಪ್ಟೆಂಬರ್ 1 ಭಾನುವಾರ ಸಂಜೆ 6.30ಕ್ಕೆ ಚೆನ್ನೈನ ವಿಶ್ವವಿಖ್ಯಾತ ಶ್ರೀದೇವಿ ನೃತ್ಯಲಯ ಇವರಿಂದ ಭರತನಾಟ್ಯ, ಹಾಗೂ ಮಹಾರಾಷ್ಟ್ರದ ಪುರಸ್ಕಾರ ಡಾನ್ಸ್ ಅಕಾಡೆಮಿ ಅವರಿಂದ ಲೋಕ ನೃತ್ಯವನ್ನು ಏರ್ಪಡಿಸಿದ್ದಾರೆ. ಬೇರೆ ಕಡೆಗಳಲ್ಲಿ ಹಣ ಕೊಟ್ಟು ಹೋಗುವಂತಹ ಈ ನೃತ್ಯ ರೂಪಗಳನ್ನು ನಾವಿಲ್ಲಿ ಉಚಿತವಾಗಿ ನೋಡುತ್ತಿರುವುದು ಸಹಚೇತನ ನಾಟ್ಯಾಲಯದ ಈ ಕಾರ್ಯಕ್ರಮಗಳಿಂದ. ಅತಿ ಹೆಚ್ಚಿನ ಜನರು ಇದಕ್ಕೆ ಆಗಮಿಸಿ ಕಣ್ಮನ ಹೃನ್ಮನ ತುಂಬಿಕೊಳ್ಳುವುದನ್ನು ಮರೆಯಬೇಡಿ.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು ಪೇಸ್ ಪಿಯು ಕಾಲೇಜ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...