Thursday, April 16, 2026
Thursday, April 16, 2026

K.S.Eshwarappa ಸಿದ್ಧರಾಮಯ್ಯ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ- ಈಶ್ವರಪ್ಪ

Date:

K.S.Eshwarappa ನಾನು ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ. ಆದರೆ, ರಾಷ್ಟ್ರ ದ್ರೋಹಿಗಳು, ಅತ್ಯಾಚಾರಿಗಳು, ಭಯೋತ್ಪಾದಕ ಮುಸ್ಲಿಂರನ್ನು ದ್ವೇಷಿಸುತ್ತೇನೆ. ಲವ್ ಜಿಹಾದ್ ಹೆಸರಲ್ಲಿ ಹಿಂದು ಮಹಿಳೆಯರನ್ನು ಕೊಲೆ ಮಾಡುವ ಮುಸ್ಲಿಮರಿಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.
ಆನವಟ್ಟಿ ಪಟ್ಟಣದ ರಾಷ್ಟ್ರಭಕ್ತರ ಬಳಗದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬ ನನ್ನ ಬಗ್ಗೆ ಇಲ್ಲಸಲ್ಲ ವಂಧತಿ ಹರಡಿಸಿದ್ದರು. ಆದರೆ ಪಕ್ಷವನ್ನು ಶುದ್ಧೀಕರಿಸುವ ತಪಸ್ಸು ಕೈಗೊಂಡಿದ್ದೇನೆ. ನನ್ನ ಕಬ್ಬು ಹಿಡಿದ ರೈತನ ಗುರುತಿಗೆ ಮತ ನೀಡಿ ಮೋದಿ ಕೈ ಬಲಪಡಿಸಬೇಕು. ಬಿಜೆಪಿ ನನಗೆ ತಾಯಿ ಇದ್ದಂತೆ, ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಲೋಕಸಭೆ ಚುಣಾವಣೆಯಲ್ಲಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.
K.S.Eshwarappa ಸಿದ್ದರಾಮಯ್ಯ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಖಾಜಾನೆ ಖಾಲಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಐದು ಗ್ಯಾರಂಟಿ ಜನರಿಗೆ ನೀಡುತ್ತೇವೆ ಎಂದು ನೀಡಿರುವ ಕಾರ್ಡ್ ಎಲ್ಲಾ ಹಸಿ ಸುಳ್ಳು ಅವುಗಳನ್ನು ಸುಟ್ಟು ಹಾಕಿ. ಬಡವರ ಹೆಸರಲ್ಲಿ ರಾಜಕರಣ ಮಾಡುವ ಕಾಂಗ್ರೆಸ್ , ಬಿಜೆಪಿ ಬಡವರಿಗೆ ಏನು ಅನುಕೂಲ ಮಾಡಿಲ್ಲ. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಸಾಕಾಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಎಲ್ಲಾ ಜಾತಿ, ಧರ್ಮದಲ್ಲೂ ಬಡವರಿದ್ದಾರೆ. ಅವರಿಗೆ ನ್ಯಾಯ ಒದಗಿಸುವುದೇ ನನ್ನ ಮೊದಲ ಕೆಲಸ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Sports and Cultural Club ಬಾಕ್ಸ್ ಕ್ರಿಕೆಟ್ ಟೂರ್ನಿ: ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ಸ್

JCI Sports and Cultural Club ಜೆಸಿಐ ಸ್ಪೋರ್ಟ್ಸ್ ಮತ್ತು ಕಲ್ಚರಲ್...

B.Y. Raghavendra ಭಾರತದಲ್ಲಿ ಮಹಿಳಾ ಮೀಸಲಾತಿಯನ್ನ ಐತಿಹಾಸಿಕವಾಗಿ ಜಾರಿಗೆ ತರಲಾಗುತ್ತಿದೆ- ಬಿ.ವೈ.ರಾಘವೇಂದ್ರ

B.Y. Raghavendra ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಬುತ್ವವಾದ ಭಾರತದಲ್ಲಿ ಐತಿಹಾಸಿಕ ಮಹಿಳಾ...

B.Y. Raghavendra ಶಿವಮೊಗ್ಗದ ಸಂಚಾರ ವ್ಯವಸ್ಥೆ ಸುಧಾರಣೆ ಮಾಸ್ಟರ್ ಪ್ಲಾನ್: ಪ್ರಗತಿ ಪರಿಶೀಲನ ಸಭೆ

B.Y. Raghavendra ಶಿವಮೊಗ್ಗ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆಗಳ...