Sunday, April 20, 2025
Sunday, April 20, 2025

K.S. Eshwarappa ಹುಬ್ಬಳ್ಳಿ ನೇಹಾ ಕೊಲೆ, ರಾಜ್ಯ ಸರ್ಕಾರ ದಿಂದ ನಿರ್ಲಕ್ಷ್ಯದ ಉತ್ತರ- ಕೆ.ಎಸ್.ಈಶ್ವರಪ್ಪ

Date:

K.S. Eshwarappa ನಾವೇನೇ ಕೊಲೆ ಮಾಡಿದರೂ, ಯಾರಿಗೆ ಚಾಕು ಹಾಕಿದರೂ ಕಾಂಗ್ರೆಸ್‌ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಧೈರ್ಯ ಮುಸ್ಲಿಂ ಗೂಂಡಾಗಳಿಗೆ ಬಂದಿದೆ. ಇದರಿಂದ ಅವರು ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೆ, ಹಿಂದು ಸಮಾಜ ಜಾಗೃತಿ ಆದರೆ ಈ ಸರ್ಕಾರ ಉಳಿಯಲ್ಲ ಎಂದು ಲೋಕಸಭಾ ಚುನವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಗಳ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಹಿಂದು ಯುವತಿ ಮೇಲೆ ಮುಸ್ಲಿಂ ಗೂಂಡಾ ಚಾಕುನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯದ ಉತ್ತರ ನೀಡುತ್ತಿದೆ. ಕಾಲೇಜು ಆವರಣಕ್ಕೆ ಹೋಗಿ ಹಿಂದು ಯುವತಿಯನ್ನು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಸರ್ಕಾರ ಕೊಲೆಗಾರನಿಗೆ ಒಂದು ನೇಣಿಗೆ ಹಾಕಬೇಕು, ಇಲ್ಲ ಗುಂಡಿಟ್ಟು ಕೊಲ್ಲಬೇಕು. ಆಗ ಮಾಡಿದರೆ ಮಾತ್ರ ಹಿಂದುಗಳಿಗೆ ಸ್ವಲ್ಪ ಸಮಾಧಾನ ಆಗುತ್ತದೆ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಈ ರೀತಿಯ ದುರ್ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದು ವಿರೋಧಿ ಎಂಬಂತೆ ವರ್ತಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂದುಗಳ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಈಗ ಸರ್ಕಾರ ನಿಮ್ಮ ರಕ್ಷಣೆಗೆ ಇದ್ದೇವೆ ಎಂದು ಧೈರ್ಯ ಕೊಡದಿದ್ದರೆ ಕಷ್ಟ ಆಗುತ್ತದೆ. ಹಿಂದು ಸಮಾಜದವರು ಹರಿಸುವ ಒಂದು ಹನಿ ರಕ್ತವೂ ನಿಮ್ಮ ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

K.S. Eshwarappa ನಾವು ರಾಜಕೀಯ ಮಾಡಲ್ಲ:
ಹುಬ್ಬಳ್ಳಿಯಲ ನೇಹ ಕೊಲೆಯಿಂದ ಯಾರಿಗೆ ಹಿನ್ನಡೆಯಾಗುತ್ತದೆ. ಯಾರಿಗೆ ಮುನ್ನಡೆಯಾಗುತ್ತದೆ ಎಂಬ ರಾಜಕಾರಣವನ್ನು ನಾನು ಮಾಡಲ್ಲ. ನಮ್ಮ ಹೆಣ್ಣು ಮಗಳ ಜೀವ ಹೋಗಿದೆ.

ಇದರಲ್ಲಿ ರಾಜಕೀಯ ಮಾಡಲ್ಲ‌. ಕಾಂಗ್ರೆಸ್ ನವರು ಇದರ ಬಗ್ಗೆ ರಾಜಕೀಯ ಮಾಡುತ್ತಿದೆ‌. ಗೃಹ ಸಚಿವ ಜಿ.ಪರಮೇಶ್ವರ್‌ ಅವರು ತನಿಖೆಗೂ ಮುನ್ನವೇ ಲವ್‌ ಜಿಹಾದ್‌ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಎಂ.ಬಿ.ಪಾಟೀಲ್ ಹುಬ್ಬಳ್ಳಿ ಪ್ರಕರಣವನ್ನ ಧರ್ಮದ ಲೇಪನ ಮಾಡಬೇಡಿ ಎಂದು ಹೇಳಿದ್ದಾರೆ. ಅವರ ಮಗಳಿಗೆ ಈ ರೀತಿ ಚಾಕು ಹಾಕಿದ್ದರೆ ಅವರು ಸುಮ್ಮನೆ ಇರ್ತಿದ್ದರಾ? ಇಬ್ಬರೂ ಬೇಜವಬ್ದಾರಿ ಸಚಿವರು ಎಂದು ಹರಿಹಾಯ್ದರು.

ಇನ್ನು ಕಾಂಗ್ರೆಸ್‌ ನಾಯಕ ಸುರ್ಜೆವಾಲ ಅವರು ಕೊಲೆಗಾರನ್ನು ತಕ್ಷಣವೇ ಬಂಧಿಸಿದ್ದೇವೆ ಎಂದಿದ್ದಾರೆ. ಇದು ಸಮಜಾಯಿಸಿ ಕೊಡುವ ರೀತಿಯೇ? ಅಕಸ್ಮಾತ್‌ ಇವರ ಮಗಳಿಗೆ ಈ ರೀತಿ ಆಗಿ ಕೇಂದ್ರ ಗೃಹ ಅಮಿತ್‌ ಶಾ ಅವರು 5 ನಿಮಿಷದಲ್ಲಿ ಕೊಲೆಗಾರರನ್ನು ಬಂಧಿಸಿದ್ದೇವೆ ಎಂದರೆ ಏನ್‌ ಅರ್ಥ.

ನಾವು ಕೊಲೆಯಾಗದಂತೆ ನೋಡಿಕೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Karnataka Sports Karate Association ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀಹರ್ಷ ಉತ್ತೀರ್ಣ

Akhila Karnataka Sports Karate Association ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಖಿಲ...

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ

ಶಿವಮೊಗ್ಗ ಕನಕ ಭಜನಾ ಮಂಡಳಿಯವರು ದಶಮಾನೋತ್ಸವ ಕಾರ್ಯಕ್ರಮವನ್ನು ಜಯಂತಿ ಪರಮೇಶ್ವರ್ ರವರ...

Madhu Bangarappa ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ಖಂಡನೀಯ- ಸಚಿವ‌ ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ...