Thursday, June 18, 2026
Thursday, June 18, 2026

Prajwal Revanna ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಮೂಲ ವ್ಯಕ್ತಿ ವಿಡಿಯೋ ಮೂಲಕ ಹೇಳಿಕೆ ಜಾಲತಾಣದಲ್ಲಿ ದಾಖಲು

Date:

Prajwal Revanna ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಪೆನ್‌ ಡ್ರೈವ್‌ನಿಂದ ಲೀಕ್‌ ಆದ ವಿಡಿಯೋಗಳ ಮೂಲ ಎನ್ನಲಾದ ಡ್ರೈವರ್‌ ಕಾರ್ತಿಕ್‌ ವಿಡಿಯೋ ಹೊರಬಿದ್ದಿದೆ.

ರೆಕಾರ್ಡ್‌ ಮಾಡಲಾದ ವಿಡಿಯೋ ಹೇಳಿಕೆಯಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇಡೀ ಪ್ರಕರಣದಲ್ಲಿ ವಿಡಿಯೋ ಲೀಕ್‌ ಹೇಗಾಯ್ತು ಎಂಬ ವಿಚಾರಕ್ಕೆ ಸಂಬಂಧಿಸದಿಂತೆ ಕಾರ್ತಿಕ್‌ ಮಾತನಾಡಿದ್ದಾರೆ.
ಯಾವುದೋ ಅಜ್ಞಾತ ಸ್ಥಳದಲ್ಲಿ ಸೆರೆ ಹಿಡಿಯಲಾದಂತಿರುವ ವಿಡಿಯೋದಲ್ಲಿ ಕಾರ್ತಿಕ್‌, ತಮಗೆ ನ್ಯಾಯ ಸಿಗುವ ಕಾರಣಕ್ಕೆ ಪೆನ್‌ ಡ್ರೈವ್‌ ವಿಡಿಯೋ ,ಫೋಟೋಗಳ ಕಾಪಿಯೊಂದನ್ನ ದೇವರಾಜ ಗೌಡರರಿಗೆ ನೀಡಿದ್ದೇನೆ. ಅವರು ವಕಾಲತ್ತು ವಹಿಸಿಕೊಂಡ ಕಾರಣಕ್ಕೆ ಅವರಿಗೆ ಕೊಟ್ಟಿದ್ದೆ ಹೊರತು ಮತ್ಯಾರಿಗೂ ಕೊಟ್ಟಿಲ್ಲ ಎಂದಿದ್ದಾರೆ.

ತಾವು ಕೊಟ್ಟ ವಿಡಿಯೋಗಳನ್ನು ಅವರು ಹೇಗೆ ಬಳಸಿಕೊಂಡರು? ಅಥವಾ ಅದನ್ಯಾರಿಗಾದರೂ ಹಂಚಿದರೇ ಎಂಬ ವಿಚಾರಗಳು ತಮಗೆ ಗೊತ್ತಿಲ್ಲ. ಇದರಲ್ಲಿ ಕಾಂಗ್ರೆಸ್‌ ನಾಯಕರ ಪಾತ್ರಗಳಿಲ್ಲ. ಕಾಂಗ್ರೆಸ್‌ನವರು ನನಗೆ ಅನ್ಯಾಯವಾದಾಗಲೂ ನನ್ನ ನೆರವಿಗೆ ಬಂದಿಲ್ಲ. ಅವರಿಗೆ ನಾನ್ಯಾಕೆ ವಿಡಿಯೋ ಕಾಪಿ ಕೊಡಲಿ ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಎಸ್‌ಐಟಿ ಮುಂದೆ ಹಾಜರಾಗಿ ವಿವರ ನೀಡುವುದಾಗಿ ಕಾರ್ತಿಕ್‌ ತಿಳಿಸಿದ್ದು, ಆನಂತರ ಮಾಧ್ಯಮಗಳ ಎದುರು ಬಂದು ಮಾತನಾಡುತ್ತೇನೆ ಎಂದಿದ್ದಾರೆ.

ಯಾರು ಈ ಕಾರ್ತಿಕ್?‌

Prajwal Revanna ಸದ್ಯ ಹೊರಬಿದ್ದಿರುವ ಹಾಸನ ಪೆನ್‌ ಡ್ರೈವ್‌ ವಿಡಿಯೋ ಲಿಂಕ್‌ ಕೇಸ್‌ನಲ್ಲಿ ಕಾರ್ತಿಕ್‌ ರಿಂದ ಎಲ್ಲಾ ದೃಶ್ಯಗಳು ಹೊರಬಿದ್ದಿರುವ ಬಗ್ಗೆ ಮಾಹಿತಿ ಹೊರಬಂದಿತ್ತು. ಪ್ರಜ್ವಲ್‌ ರೇವಣ್ಣರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಕಳೆದ ವರ್ಷ ರೇವಣ್ಣರ ಕುಟುಂಬದ ಜೊತೆಗೆ ವೈಮನಸ್ಯ ಹೊಂದಿದ್ದರು.

ರೇವಣ್ಣರ ಕುಟುಂಬ ತಮ್ಮ ಭೂಮಿಯನ್ನು ಕಿತ್ತುಕೊಂಡು ಟಾರ್ಚರ್‌ ಕೊಟ್ಟಿದೆ ಅಂತಾ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದ್ದರು. ಆನಂತರ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಮೆಟ್ಟಿಲೇರಲು ಮುಂದಾಗಿದ್ದರು. ಇದೇ ಹೊತ್ತಿನಲ್ಲಿ ರೇವಣ್ಣರ ಕುಟುಂಬ ಕೋರ್ಟ್‌ನಿಂದ ವಿಡಿಯೋ ಹರಿದಾಡದಂತೆ ಸ್ಟೇ ತಂದಿತ್ತು. ಈ ಎಲ್ಲಾ ವಿಚಾರ ಹಂಚಿಕೊಂಡಿರುವ ಕಾರ್ತಿಕ್‌ ಇದೀಗ ಎಸ್‌ಐಟಿ ಮುಂದೆ ಹೋಗಲು ನಿರ್ಧರಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...