Saturday, April 26, 2025
Saturday, April 26, 2025

Chamber of Commerce Shivamogga ನಾವೀನ್ಯ ಆಲೋಚನೆಗಳಿಂದ, ಸಮಸ್ಯೆಗಳ ಸುಲಭ ಪರಿಹಾರ & ಕೌಶಲ್ಯ ವರ್ಧನೆಗೆ ನೆರವು-ಪ್ರೊ.ವೈ.ವಿಜಯಕುಮಾರ್

Date:

Chamber of Commerce Shivamogga ಸಂಶೋಧನಾ ಸಹಯೋಗಗಳು ಮತ್ತು ಸೃಜನಶೀಲ ಚತುರತೆಯನ್ನು ರಕ್ಷಿಸಲು ಬೌದ್ಧಿಕ ಆಸ್ತಿ ಹಕ್ಕುಗಳು ಪ್ರಮುಖ ಸಾಧನವಾಗಿದೆ ಎಂದು ಜೆಎನ್‌ಎನ್‌ಸಿಇ ಪ್ರಾಚಾರ್ಯ ಪ್ರೊ. ವೈ.ವಿಜಯಕುಮಾರ್ ಹೇಳಿದರು.

ವಿಶ್ವ ಬೌದ್ಧಿಕ ಆಸ್ತಿ ದಿನದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ “ಉದ್ಯಮಿಗಳು ಹಾಗೂ ಎಂಎಸ್‌ಎಂಇ ಸಬಲೀಕರಣಗೊಳಿಸಲು ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿ, ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಲ್ಲಿ ಮತ್ತು ಕೈಗಾರಿಕೆಗಳಿಗೆ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುವಲ್ಲಿ ನವೀನ ಆಲೋಚನೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.

ತಜ್ಞರು, ಸಂಶೋಧಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಶಿವಮೊಗ್ಗದ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ಸಹಯೋಗದ ಪ್ರಯತ್ನಗಳನ್ನು ಹೊಂದುವುದು ಅತ್ಯಂತ ಅವಶ್ಯಕ. ಇದರಿಂದ ಭವಿಷ್ಯದ ದಿನಗಳಲ್ಲಿ ಸಹಾಯಕವಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾದ ಎಸ್ ಸಿಕೆ ಅಸೋಸಿಯೇಟ್ಸ್ ವಕೀಲೆ ಸಾಧ್ವಿ ಸಿ.ಕಾಂತ್ ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 26 ರಂದು ಆಚರಿಸಲಾಗುವ ವಿಶ್ವ ಐಪಿ ದಿನದ ಮಹತ್ವದ ಕುರಿತು ಮಾತನಾಡಿದರು. ನವೀನ ಮತ್ತು ಸೃಜನಶೀಲ ಉತ್ಪನ್ನಗಳನ್ನು ಕಾನೂನುಬದ್ಧವಾಗಿ ರಕ್ಷಿಸಲು ಮತ್ತು ಆರ್ಥಿಕ ಲಾಭವನ್ನು ಪಡೆದುಕೊಳ್ಳಲು ಬೌದ್ಧಿಕ ಆಸ್ತಿ ಹಕ್ಕುಗಳು ಸಾಧನವಾಗಿರುತ್ತವೆ ಎಂದು ಹೇಳಿದರು.

ಉಲ್ಲಂಘನೆಯ ವಿರುದ್ಧ ಕಾನೂನು ಪರಿಹಾರಗಳು ಮತ್ತು ಸ್ವಂತ ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಹೇಗೆ ರಕ್ಷಿಸಿಕೊಳುವುದರ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದರು. ಬೌದ್ಧಿಕ ಆಸ್ತಿ ಫೈಲಿಂಗ್ ಸೌಲಭ್ಯವು ಈಗ ಶಿವಮೊಗ್ಗದಲ್ಲಿ ಅವರು ಒದಗಿಸುತ್ತವೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಉದ್ಯಮದಲ್ಲಿ ನವೀನ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಪ್ರಗತಿ ಹೊಂದಬೇಕು. ಭವಿಷ್ಯದ ಕಾಯ್ದೆಗಳಿಗೆ ಅನುಗುಣವಾಗಿ ಉದ್ಯಮ ನಡೆಸಲು ಪೂರಕ ತಿಳವಳಿಕೆ ಹೊಂದುವುದು ಅವಶ್ಯಕ ಎಂದು ಅಭಿಪ್ರಾಯ ಪಟ್ಟರು.

Chamber of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿ ಎಂ.ರಾಜು, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ನಿರ್ದೇಶಕರಾದ ಇ.ಪರಮೇಶ್ವರ, ರಮೇಶ್ ಹೆಗಡೆ, ಸ್ಕಿಲ್ ಅಕಾಡೆಮಿಯ ಸವಿತಾ ಮಾಧವ್, ಸಚಿನ್ ಹೆಗಡೆಕುಡ್ಗಿ, ಶಶಿಕಾಂತ್ ನಾಡಿಗ್, ಪ್ರೊ. ಯು.ಅರ್ಜುನ್, ದೀಪಕ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮದ ಸಿಬ್ಬಂದಿ, ಎಂಎಸ್‌ಎಂಇ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ವಕೀಲರು, ಐಪಿ ಉತ್ಸಾಹಿಗಳಿಂದ ಹಿಡಿದು ವಿವಿಧ ಹಿನ್ನೆಲೆಯಿಂದ ಬಂದವರು ಹಾಗೂ ಐಪಿ ಹೊಂದಿರುವವರು, ಕೈಗಾರಿಕಾ ಉದ್ಯಮಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...