Monday, September 21, 2026
Monday, September 21, 2026

Online Fraud ಆನ್ ಲೈನ್ ಮೂಲಕ ನೌಕರಿ ಭರವಸೆಯಿಂದ ಮೋಸ ಹೋದ ಯುವತಿ

Date:

Online Fraud ಇಲ್ಲೊಬ್ಬ ಯುವತಿ ಆನ್ ಲೈನ್ ಮೋಸಕ್ಕೆ ಬಲಿಯಾಗಿದ್ದಾಳೆ. ಟೆಲಿಗ್ರಾಂ ಆ್ಯಪ್ ಮೂಲಕ ಬಂದ ಉದ್ಯೋಗದ ಭರವಸೆ ಅರಸಿಕೊಂಡು ಹೋಗಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾಳೆ.
ಆನ್ ಲೈನ್ ನಲ್ಲಿ ಉದ್ಯೋಗ ಹುಡುಕುತ್ತಾ ಬರೋಬ್ಬರಿ 11,82,208 ರೂ. ಕಳೆದುಕೊಂಡಿದ್ದಾಳೆ.
ಡ್ರೀಮ್ ಹೊಟೆಲ್ ಗ್ರೂಪ್ ಸಂಸ್ಥೆಯನ್ನು ಪ್ರಮೋಷನ್ ಮಾಡಲು ತಿಳಿಸಿದ್ದ ಆಗಂತುಕರು, ಶಿವಮೊಗ್ಗದ ಈ ಯುವತಿಯಿಂದ ಲಕ್ಷಾಂತರ ಹಣವನ್ನು ಪೀಕಿಸಿಕೊಂಡು ಮರೆಯಾಗಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರ್ ನ ತುಳಜಾ ಭವಾನಿ ರಸ್ತೆಯಲ್ಲಿರುವ ಈ ಯುವತಿಯೊಬ್ಬರು ಕಳೆದ ಹಲವಾರು ದಿನಗಳಿಂದ ಆನ್ ಲೈನ್ ನಲ್ಲಿ ಕೆಲಸ ಸರ್ಚ್ ಮಾಡುತ್ತಿದ್ದರು. ಇವರಿಗೆ ಟೆಲಿಗ್ರಾಂ ನಲ್ಲಿ ಸ್ವಾತಿ ಮಿಶ್ರಾ ಎಂಬ ಅಪರಿಚಿತ ಟೆಲಿಗ್ರಾಂ ಐಡಿಯಿಂದ ಮೆಸೆಜ್ ಬಂದಿದೆ. ಬಳಿಕ ಅರಬೆಲ್ಲಾ ಎಂಬ ಅಕೌಂಟ್ ನಿಂದ ಡ್ರೀಮ್ ಹೊಟೆಲ್ ಗ್ರೂಪ್ ನ ಪ್ರಮೋಟರ್ ಆಗಿ ಕರ್ತವ್ಯ ನಿರ್ವಹಿಸಲು ಹೇಳಿದ್ದರಂತೆ.

Online Fraud ವೆಬ್ ಸೈಟ್ ನ ಅಡ್ರೆಸ್ ಹಾಗೂ ಅದರ ಐಡಿ ಹಾಗೂ ಪಾಸ್ ವರ್ಡ್ ನೀಡಿದ್ದು, ಅದರಲ್ಲಿನ ಹೊಟೆಲ್ ನ್ನು ಪ್ರಮೋಟ್ ಮಾಡಿ ಮಾಡಿದ ಕೆಲಸಕ್ಕೆ 700 ಕೂಡ ನೀಡಿದ್ದರಂತೆ. ಬಳಿಕ ಇವರಿಗೆ ಕಸ್ಟಮರ್ ಸರ್ವಿಸ್ ಫಾರ್ ಯೂ ಎಂಬ ಟೆಲಿಗ್ರಾಂ ಐಡಿಯಿಂದ 10 ಸಾವಿರ ರೂ. ಹಣ ಹಾಕಲು ತಿಳಿಸಿದ್ದರಿಂದ ಹಣ ಹಾಕಿದ್ದರಂತೆ. ಆ ಬಳಿಕ ಆಗಿದ್ದೇ ಬೇರೆ, ನಿಮಗೆ ಕೆಲಸ ಬೇಕು ಎಂದಾದರೆ, ಹಣ ಹಾಕಿ ಎಂಬ ಸಂದೇಶ ರವಾನೆಯಾಗಿದೆ.
ಈ ವೇಳೆ 15 ಸಾವಿರ, 40 ಸಾವಿರ, 80 ಸಾವಿರ 1 ಲಕ್ಷ ರೂ. ಹಣ ಹೀಗೆ ಬರೋಬ್ಬರಿ 11,57,208 ರೂ. ಹಣ ಪೀಕಿದ್ದು, ಆ ಬಳಿಕವಷ್ಟೇ ಈ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. ಇಷ್ಟೆಲ್ಲಾ ಆದ ಬಳಿಕ ಉದ್ಯೋಗ ನೀಡುವುದಾಗಿ ಹೇಳಿ, ನಂಬಿಸಿ, ಟೆಲಿಗ್ರಾಂ ಆ್ಯಪ್ ನಲ್ಲೇ ಕೆಲಸವೆಂಬಂತೆ ಟಾಸ್ಕ್ ಗಳನ್ನು ನೀಡಿ ಹಣ ಪೀಕಿದ ಬಳಿಕವಷ್ಟೇ ಯುವತಿಗೆ ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. ಜೊತೆಗೆ ತನ್ನ ಖಾತೆಯಲ್ಲಿರುವ 20,86,000 ಹಣ ವಿತ್ ಡ್ರಾ ಮಾಡಲು ಕೂಡ ಶೇ. 30 ರಷ್ಟು ಹಣ ಟ್ಯಾಕ್ಸ್ ಕಟ್ಟಲು ಹೇಳಿದಾಗ ದಿವ್ಯ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ಈ ವೇಳೆ, ಮೋಸ ಮಾಡಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿದಿದೆ. ಸಿಇಎನ್ ಠಾಣೆಗೆ ದೂರು ನೀಡಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...