Saturday, April 26, 2025
Saturday, April 26, 2025

Klive Special Article ಚುನಾವಣೆಯ ಪರ್ವ, ದೇಶದ ಗರ್ವ

Date:

ಬರಹ : ಅಜ್ಜಪ್ಪ ಅಂಗಡಿ, ಸಂಪನ್ಮೂಲ ಶಿಕ್ಷಕರು,(ಬಿ.ಆರ್.ಪಿ) ಬೈಲಹೊಂಗಲ

Klive Special Article ನಾವೆಲ್ಲರೂ ಈಗ 2024 ರ ಲೋಕಸಭಾ ಚುನಾವಣೆಯ ಕರ್ತವ್ಯದಲ್ಲಿ ಇದ್ದೇವೆ. ಈ ಚುನಾವಣೆಯು ಭಾರತಕ್ಕೆ ಶ್ರೇಷ್ಠ ಸುಭದ್ರ ಸರ್ಕಾರವನ್ನು ನೀಡಲು ಅತ್ಯವಶ್ಯಕವಾಗಿದ್ದು. ಭಾರತೀಯ ನಾಗರಿಕರಾದ ನಾವೆಲ್ಲರೂ ಸುಭದ್ರ ಉತ್ತಮ ಸರ್ಕಾರವನ್ನು ನೀಡಲು ಮತದಾನ ಎಂಬ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕಾಗಿದೆ. ಹಾಗಾದರೆ ಈ ಕರ್ತವ್ಯವನ್ನು ನಾವು ಹಬ್ಬದಂತೆ ವಿಜ್ರಂಬಣೆಯಿಂದ ಮಾಡಬೇಕು. ಯಾವ ರೀತಿ ಯುಗಾದಿ, ಬಸವ ಜಯಂತಿ, ಹೋಳಿ ಹಬ್ಬ, ರಂಜಾನ್ ಗ್ರಾಮದ ಗ್ರಾಮದೇವಿ ಜಾತ್ರೆ ಉರುಸು ಹೀಗೆ ಹಲವಾರು ಹಬ್ಬಗಳನ್ನು ಮತ್ತು ಜಾತ್ರೆಗಳನ್ನು ಊರಿನಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆಯೋ ಅದೇ ರೀತಿ ಪ್ರಜಾಪ್ರಭುತ್ವದ ಜಾತ್ರೆಯನ್ನು ಮತದಾನ ದಿನದಂದು ಎಲ್ಲರೂ ಭಾರತ ದೇಶದ ತುಂಬಾ ವಿಜ್ರಂಭಣೆಯಿಂದ ಮಾಡೋಣ. ಹಾಗಾದ್ರೆ ಈ ಚುನಾವಣೆ ಹಬ್ಬಕ್ಕೆ ತಾವೆಲ್ಲರೂ ಹೀಗೆ ಸಿದ್ದರಾಗಬೇಕಾಗಿದೆ.

1) ಮತದಾನ ದಿನದಂದು ರಂದು ಭಾರತದ ಪ್ರತಿಯೊಬ್ಬ ಪ್ರಜೆ ಬೆಳಿಗ್ಗೆ ಬೇಗನೆ ಎದ್ದು “ನಮ್ಮ ನಡೆ ಮತಗಟ್ಟೆಯ ಕಡೆ ನಮ್ಮ ಅಮೂಲ್ಯವಾದ ಮತದ ಹಕ್ಕನ್ನು ಚಲಾಯಿಸುವ ಕಡೆ” ಎಂಬ ಮನೋಭಾವನೆಯನ್ನು ಹೊಂದಿ ಮತ ಚಲಾಯಿಸಲು ಮತಗಟ್ಟೆಗೆ ಹೋಗೋಣ.

2) ನಮ್ಮ ಊರಿನ ಗ್ರಾಮದೇವಿ ಜಾತ್ರೆಗೆ ಬಂಧು ಬಳಗವನ್ನು ಯಾವ ರೀತಿ ಜಾತ್ರೆಗೆ ಆಹ್ವಾನ ನೀಡುತ್ತೇವೆಯೋ, ಆ ರೀತಿ ಪ್ರಜಾಪ್ರಭುತ್ವ ಹಬ್ಬಕ್ಕೆ ಅಂದರೆ ಮತದಾನ ಮಾಡಲಿಕ್ಕೆ ಮತಗಟ್ಟೆ ಕೇಂದ್ರದ ಕಡೆಗೆ ತಾವು ಬಂಧು ಮಿತ್ರರು ಹಾಗೂ ಬಳಗವನ್ನೆಲ್ಲವನ್ನು ಕರೆದುಕೊಂಡು ಹೋಗಿ ಒಮ್ಮೆಲೇ ಸಾಲಲ್ಲಿ ನಿಂತು ಪ್ರಜಾತಂತ್ರದ ಯಶಸ್ಸಿಗೆ ಬಟನ್ ಒತ್ತೋಣ. (ಅಂದರೆ ಮತದಾನ ಮಾಡಲು ಕರೆದುಕೊಂಡ ಹೋಗೋಣ)

3) ಜಾತ್ರೆಯಲ್ಲಿ ಎಲ್ಲರೂ ಸೇರಿ ತೇರನ್ನು ಎಳೆದಂತೆ ಇಲ್ಲಿ ಎಲ್ಲರೂ (ಭಾರತೀಯರು) ಪ್ರಜಾಪ್ರಭುತ್ವವೆಂಬ ತೇರನ್ನು ತಮ್ಮ ಊರಿನಲ್ಲಿಯೇ ಅತಿ ಹೆಚ್ಚಿನ ವೋಟ್ (ಮತದಾನ) ಮಾಡಿ. ಶೇಕಡ ಮತದಾನವನ್ನು ಹೆಚ್ಚಿಸುವ ಮೂಲಕ ಗೆಳೆಯರೆಲ್ಲ ಸೇರಿ ಎಳೆಯೋಣ.

4) ಮತದಾನದ ದಿನ ಎಲ್ಲ ಮತದಾರ ಪ್ರಭುಗಳು ಹೀಗೆ ಮಾಡಿ ಬೆಳಗ್ಗೆ ಬೇಗ ಏಳಿ ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬೇಗನೆ (ಬೆಳ್ಳಗ್ಗೆ 9 ರ ಒಳಗೆ) ಮತಗಟ್ಟೆ ಕಡೆಗೆ ಹೋಗಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಆ ದಿನವನ್ನು ಖುಷಿಯಿಂದ ಕುಟುಂಬದಲ್ಲಿ ಸಿಹಿಯಾಗಿ ಕಳೆಯೋಣ.

5) ಕುಟುಂಬ ಸಮೇತ ಯಾವುದೇ ಮೋಜು ಮಸ್ತಿ ಮನರಂಜನೆ ಪ್ರವಾಸಿ ತಾಣಗಳಿಗೆ ಹೋಗದೇ ಮನೆಯಲ್ಲಿಯೇ ಇದ್ದು, ಮತದಾನ ಮಾಡೋಣ.

6) ಅನ್ನದಾನ, ಅಕ್ಷರದಾನ, ನೇತ್ರದಾನ ಹೇಗೆ ಶ್ರೇಷ್ಠ ದಾನವೋ ಅದೇ ರೀತಿ ಮತದಾನವೂ ಸಹ ಶ್ರೇಷ್ಠ ಕಾರ್ಯ ಎಂದು ತಿಳಿದುಕೊಳ್ಳುವುದು.

7) ನಗರದ ಜನ ಮತದಾನ ದಿನ ಮನೆಯಿಂದ ಹೋರಗೆ ಬಂದು 100 ಕ್ಕೆ 100 ಮತದಾನ ಮಾಡುವ ಕಾಯಕ ಮಾಡುವುದು.

8) ಭಾರತೀಯ ಪ್ರಜೆಯ ಪ್ರತಿಯೊಬ್ಬರ ಮತ ಮೌಲ್ಯವಾದ್ದದ್ದು, ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಇರೋಣ.

9) ನೀವು ಮತ ಹಾಕಿದರೆ, ನೀವು ನಿಮ್ಮ ದೇಶದ ಹೀರೋ. ಮತ ಹಾಕದಿದ್ದರೆ ಜೀರೊ ಎಂದು ತಿಳಿಯೋಣ.

10) ಕೆಲವು ಸಾರಿ ಒಂದು ಮತದ ಅಂತರದಿಂದ ಗೆದ್ದ ಉದಾಹರಣೆ ಇದೆ. ಆ ನಿರ್ಣಾಯಕ ಮತ ನಿಮ್ಮದೇ ಆಗಿರಬಹುದು. ಆದ್ದರಿಂದ ತಡ ಯಾಕೆ? ಬೇಗ ಹೋಗಿ ಮತದಾನ ದಿನದಂದು ಮತ ಹಾಕೋಣ.

11) ಅಂಚೆ ಮತ ಪಡೆದವರು ಸರಿಯಾಗಿ ಎಲ್ಲ ನಿಯಮ ಪಾಲಿಸಿ ಜೂನ 4 ಮತ ಎಣಿಕೆಗೆ ಮೊದಲು ಚುನಾವಣಾಧಿಕಾರಿಗೆ ತಲುಪುವಂತೆ ಮತದಾನ ಮಾಡೋಣ.

12) ನಮ್ಮ ದೇಶದಲ್ಲಿ ಅಂದಾಜು 30% ಯುವ ಮತದಾರರು ಇದ್ದಾರೆ. ಇಂದಿನ ಯುವಕರ ನಾಳಿನ ನಾಯಕರು. ಆದ್ದರಿಂದ ನಮ್ಮ ನಾಯಕರನ್ನು ಕಾಯಾ, ವಾಚಾ, ಮನಸಾ ಯೋಗ್ಯತೆ ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಬೇಕಾಗಿದೆ, ಆದ್ದರಿಂದ ಯಾವುದೇ ಆಮಿಷಕ್ಕೆ ಒಳಗಾಗದೇ ನಮ್ಮ ಮತ ಹಾಕಬೇಕಾಗಿದೆ.

Klive Special Article ಯುವಜನರೇ, ನಮ್ಮ ದೇಶದ ಸ್ಥಿರ ಸರ್ಕಾರ ತಮ್ಮ ಮತದಾನದ ಮೇಲೆ ನಿರ್ಧಾರ ಆಗಬಹುದು, ಆದ್ದರಿಂದ ಮೊದಲ ಸಾರಿ ಮತದಾನದ ಮಾಡುವವರು ಉತ್ಸಾಹದಿಂದ ಮತಗಟ್ಟೆಗೆ ಬನ್ನಿ ನಿಮ್ಮ ಹಕ್ಕು ಚಲಾಯಿಸಿ. ದೈರ್ಯದಿಂದ ಹೇಳಿ.” ನನ್ನ ಮತ ನನ್ನ ಹಕ್ಕು” ಎಂದು. ನಾನು ಮತಗಟ್ಟೆಯತ್ತ ನನ್ನ ಕುಟುಂಬದ ಸಮೇತ ಹೋಗಿ ಮತಹಾಕಿ ನನ್ನ ಶ್ರೇಷ್ಠ ಕರ್ತವ್ಯ ಮಾಡುತ್ತೇನೆ. ನೀವು ಮಾಡಿ. ಬನ್ನಿ ಭಾರತೀಯರೆ ಎಲ್ಲರೂ ಸೇರಿ ಪ್ರಜಾಪ್ರಭುತ್ವದ ಹಬ್ಬ ಮಾಡೋಣ. ಮತಹಾಕಿ ಮತಗಟ್ಟೆಯಿಂದ ಹೊರಗೆ ಬಂದು, ಕುಟುಂಬದ ಸಮೇತ ಸೆಲ್ಪಿ ತೆಗೆದುಕೊಳ್ಳೋಣ. ಜವಾಬ್ದಾರಿಯುತ ನಾಗರಿಕನಾಗಿ ನಾವು ಮತದಾನ ದಿನದಂದು ನಮ್ಮ ಕರ್ತವ್ಯ ಮಾಡೋಣ. ಎನಂತೀರಾ ಮತದಾರ ಪ್ರಭುಗಳೆ….?

ಬರಹ : ಅಜ್ಜಪ್ಪ ಅಂಗಡಿ, ಸಂಪನ್ಮೂಲ ಶಿಕ್ಷಕರು,(ಬಿ.ಆರ್.ಪಿ) ಬೈಲಹೊಂಗಲ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...

Dr. Rajkumar ಡಾ.ರಾಜ್ ಅವರಿಗಿದ್ದಷ್ಟು ಅಭಿಮಾನಿಗಳು ಬೇರೆ ಯಾವ ನಟರಿಗೂ ಇಲ್ಲ: ವಿ.ಮೂರ್ತಿ

Dr. Rajkumar ವರನಟ ನಟಸಾರ್ವಭೌಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್...

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...