Sunday, August 2, 2026
Sunday, August 2, 2026

K.S. Eshwarappa ನಿನಗೆ ಮಾತಾಡಲು ಯೋಗ್ಯತೆಯೇ ಇಲ್ಲ” ವಿಜಯೇಂದ್ರಗೆ ಏಕವಚನದಲ್ಲಿ ಈಶ್ವರಪ್ಪ ಮಾತಿನ ಪ್ರಹಾರ

Date:

K.S. Eshwarappa ಪುಗ್ಸಟ್ಟೆ ಮಾತುಗಳಿಗೆ ಮತ್ತು ಬಿ.ವೈ.ವಿಜಯೇಂದ್ರಗೆ ತಾನು ಬೆಲೆ ಕೊಡುವುದಿಲ್ಲ. ರಾಜ್ಯಾಧ್ಯಕ್ಷನಾಗಲು ಇರುವ ಯೋಗ್ಯತೆಯಾದರೂ ಅವನಿಗೇನಿದೆ. ೪೦ ವರ್ಷಗಳ ಕಾಲ ಪಕ್ಷಕ್ಕೆ ನಾನು ಶ್ರಮ ಹಾಕಿದ್ದೆನೆ. ನಿಮ್ಮಪ್ಪ (ಯಡಿಯೂರಪ್ಪ) ಹಾಕಿದ ಶ್ರಮದಿಂದ ರಾಜ್ಯಾಧ್ಯಕ್ಷನಾಗಿದ್ದಿಯಾ. ನಿನಗೆ ಮಾತನಾಡಲು ಯೋಗ್ಯತೆಯೇ ಇಲ್ಲ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ರೋಶಭರಿತ ಪ್ರತಿಕ್ರಿಯೆ ನೀಡಿದರು. ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
‘ಶಿವಮೊಗ್ಗ ನಗರಕ್ಕೆ, ಜಿಲ್ಲೆಗೆ ನಾನು ಏನು ಮಾಡಿದ್ದೇನೆ ಎನ್ನುವುದು ಜಿಲ್ಲೆಯ ಜನರಿಗೆ ಗೊತ್ತಿದೆ. ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ ೬೦ ಸಾವಿರ ಮತಗಳ ಲೀಡ್ ನಿಂದ ೧೦ ಸಾವಿರಕ್ಕೆ ಇಳಿದಿದೆ. ಮುಂದಿನ ಚುನಾವಣೆಯಲ್ಲಿ ಎಷ್ಟು ಲೀಡ್ ಸಿಗಲಿದೆ ಎನ್ನುವುದು ಗೊತ್ತಾಗಲಿದೆ. ಎಷ್ಟು ಕೋಟಿ ಮಾಡಿದ್ದೀಯಾ ಗೊತ್ತಿಲ್ಲ. ಹಗುರವಾಗಿ ಮಾತನಾಡಿದರೆ ಬೇರೆ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಇನ್ನೂ ನೀನು ಬಚ್ಚಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
K.S. Eshwarappa ನಿಮ್ಮಪ್ಪನ ಶ್ರಮದಿಂದ ರಾಜ್ಯಾಧ್ಯಕ್ಷನಾಗಿದ್ದಿಯಾ. ಇದನ್ನು ನೆನಪಿಟ್ಟುಕೊಂಡು ಮಾತಾಡು. ೪೦ ವರ್ಷಗಳ ಕಾಲ ಪಕ್ಷಕ್ಕಾಗಿ ಶ್ರಮ ಹಾಕಿದ್ದೆನೆ. ತಮ್ಮ ವಿರುದ್ದ ಟೀಕೆ ಮಾಡುವಷ್ಟು ಯೋಗ್ಯತೆ ಇಲ್ಲ. ೬ ತಿಂಗಳ ಕಾಲ ಒತ್ತಡ ಹಾಕಿ ರಾಜ್ಯಾಧ್ಯಕ್ಷನಾಗಿದ್ದಿಯಾ. ಮಾತನಾಡುವಾಗ ಹುಷಾರ್ ಎಂದು ಬಿ.ವೈ.ವಿಜಯೇಂದ್ರ ವಿರುದ್ದ ಹರಿಹಾಯ್ದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...