BR Ambedkar ಭಾರತೀಯರೆಲ್ಲರಿಗಾಗಿ ಸಂವಿಧಾನ ಭಾರತೀಯರೆಲ್ಲ ಬಾಬಾಸಾಹೇಬ
ನಮ್ಮ ಭಾರತೀಯ ಜಾತಿಗ್ರಸ್ಥ ಸಮಾಜ ಸಾಮಾನ್ಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೋಡುವ ದೃಷ್ಠಿಕೋನವು ಏಕಮುಖವಾದದ್ದು.
ಕೆಲವೇ ಸಂಕುಚಿತ ವಿಷಯಗಳಿಗೆ ಸೀಮಿತಗೊಳಿಸಿ ಅವರ ವ್ಯಕ್ತಿತ್ವವನ್ನು ಅಪಮೌಲ್ಯಗೊಳಿಸುವ ಕೆಲಸ ಸ್ವಾತಂತ್ರ್ಯ ನಂತರ ಅತ್ಯoತ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ನಮ್ಮ ಓದಿನ ವಿಸ್ತಾರವನ್ನು ಮಿತಿಗೊಳಿಸಿಕೊಂಡು ಅವರ ಮೇಲೆ ಸ್ವಜಾತಿ ಪ್ರೇಮವನ್ನುಆರೋಪಿಸಲಾಗಿದೆ.
ಅವುಗಳಲ್ಲಿ ಸರ್ವೇಸಾಮಾನ್ಯವಾಗಿ ಕೇಳಿಬರುವ ಆರೋಪಗಳೆಂದರೆ ಡಾ.ಬಿ.ಆರ್.ಅಂಬೇಡ್ಕರ್‌ದಲಿತರ ನಾಯಕ, ಮೀಸಲಾತಿಯಜನಕ, ಸಂವಿಧಾನ ಬರೆದರಂತೆ, ಸಂವಿಧಾನಕೇವಲ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮಾತ್ರವೇ ಅನುಕೂಲವಂತೆ. ಹೀಗೆ ಇನ್ನೂ ಅನೇಕ ತಪ್ಪು ಗ್ರಹಿಕೆಗಳನ್ನು ಭಾರತದ ಬಹುಪಾಲು ಜನವರ್ಗಅವರ ಮೇಲೆ ಆರೋಪಿಸಿದೆ. ಇಂಥದ್ದೇ ಒಂದು ತಪ್ಪುಗ್ರಹಿಕೆ ನನ್ನೊಳಗೂ ವಿದ್ಯಾರ್ಥಿ ದಿಸೆಯಲ್ಲಿಯೇ ಮೊಳಕೆಯೊಡೆದದ್ದು ನಿಜ… ನಮ್ಮ ಮನೆಗಳಲ್ಲಿ ಅಂಬೇಡ್ಕರರ ಹೆಸರು ಅಪ್ಪಿ ತಪ್ಪಿಯೂ ಎಂದೂ 2 ಸುಳಿದೇ ಇಲ್ಲ. ದಲಿತೇತರಳಾದ ನಾನು ಮೊದಲ ಬಾರಿಗೆಅಂಬೇಡ್ಕರ್‌ಅವರ ಹೆಸರನ್ನು ಕೇಳಿದ್ದು ನನ್ನ ಶಾಲಾ ದಿನಗಳಲ್ಲಿಯೇ. ನನ್ನಲ್ಲಿಯೂ ಮೇಲಿನ ಅಭಿಪ್ರಾಯಗಳೇ ಇದ್ದವು. ಇಂದು ಇನ್ನೂ ಎಷ್ಟೋ ಕೋಟ್ಯಾಂತರ ಯುವಜನತೆ ಇಂತಹದ್ದೇ ಅಪಾಯಕಾರಿ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನೆನೆದರೆ ಎದೆ ಒಂದುಕ್ಷಣ ಭೀತಿಗೊಳಗಾಗಿ ಕಂಪಿಸುತ್ತದೆ.
ಅoಬೇಡ್ಕರ್ ಎನ್ನುವ ಮೇರು ವ್ಯಕ್ತಿತ್ವದ ಚಿತ್ರಣವನ್ನು ಪರಿಚಯಿಸಿದ್ದು ಬಾಳ ಸಂಗಾತಿಯಾದ ರಂಗಸ್ವಾಮಿ.ಬಿ.ಆರ್.ನನ್ನಉನ್ನತ ಶಿಕ್ಷಣಕ್ಕಾಗಿಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಕೇಂದ್ರ, ಮೈಸೂರುಇಲ್ಲಿಸಂಶೋಧನೆಗೆ ಪ್ರವೇಶಪಡೆದೆ.
ಇಲ್ಲಿಅವರಬರಹಮತ್ತುಭಾಷಣಗಳ ಸಂಗ್ರಹವನ್ನುಅಧ್ಯಯನ ಮಾಡುವ ಅವಕಾಶ ಒದಗಿತು.ಈ ಅವಕಾಶ ನನ್ನಜೀವನದಮಹತ್ವದತೀರುವಾಗಿ ಪರಿಣಮಿಸಿತು. ಓದು ವಿಸ್ತಾರಗೊಂಡoತೆಲ್ಲಬಾಬಾಸಾಹೇಬರು ಕೇವಲ ದಲಿತರ ನಾಯಕಎನ್ನುವಅಭಿಪ್ರಾಯ, ಮನಸ್ಥಿತಿ ಬದಲಾಗುತ್ತಾ, ಹೋಯಿತು. ವರ ಮುಖ್ಯ ಕೊಡುಗೆಗಳಾದ 1942 ರಿಂದ 1946ವರೆಗೆ ಬ್ರಿಟಿಷ್ ವೈಸ್‌ರಾಯ್ ಸಚಿವ ಸಂಪುಟದಲ್ಲಿಕಾರ್ಮಿಕರ ಸಚಿವರಾಗಿದ್ದಾಗದೇಶದ ಸಕಲ ಕಾರ್ಮಿಕರ ಸ್ಥಿತಿಸುಧಾರಿಸಲು 14ಗಂಟೆಯ ಕೆಲಸದಸಮಯನ್ನು 8 ಗಂಟೆಗೆ ಇಳಿಸಿದರು.ಕಡ್ಡಾಯ ವಿಮೆ, ಕಾರ್ಮಿಕರಕಲ್ಯಾಣ ನಿಧಿ, ಫ್ಯಾಕ್ಟರಿಕಾಯ್ದೆ, ವೇತನ ಪರಿಷ್ಕರಣೆ, ವೇತನಸಹಿತರಜೆ, ಕನಿಷ್ಟ ಕೂಲಿ ಹೀಗೆ ಹಲವು ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕಕ್ರಾಂತಿಕಾರಿಕಾರ್ಮಿಕರ ನಾಯಕರಾದರು. 1947 ಮಾರ್ಚಿ 15ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಮುಂಬರುವ ಭಾರತದ ಸಂವಿಧಾನ ಏನ್ನೆಲ್ಲವನ್ನು ಒಳಗೊಂಡಿರಬೇಕು ಎಂದು‘ರಾಜ್ಯ ಮತ್ತುಅಲ್ಪಸಂಖ್ಯಾತರು’ ಎನ್ನುವ ಭಿನ್ನವತ್ತಳೆಯನ್ನು ಸಲ್ಲಿಸುವ ಮೂಲಕ ಭೂಮಿ, ಕೃಷಿ, ಕೈಗಾರಿಕೆಗಳರಾಷ್ಟ್ರೀಕರಣದಕಲ್ಪನೆಯನ್ನು ಪ್ರಸ್ತಾಪಿಸುತ್ತಾ, ದೇಶದಒಟ್ಟುಭೂಮಿ ಸರ್ಕಾರದಒಡೆತನದಲ್ಲಿರಬೇಕು, ಸಾಮೂಹಿಕ ಬೇಸಾಯ ಪದ್ಧತಿ, ಕೃಷಿಯು ಸರ್ಕಾರಿಉದ್ಯೋಗವಾಗಬೇಕುಎನ್ನುವ ಮೂಲಕ ಭಾರತದ ಸಮಸ್ತ ರೈತರ ನಾಯಕರಾದರು.
BR Ambedkar ಜಾತಿ ಮತ್ತುಧಾರ್ಮಿಕಅಲ್ಪಸಂಖ್ಯಾತರರಕ್ಷಣೆ ಬಗ್ಗೆ ಕಾಳಜಿವಹಿಸಿ ಅವರ ನಾಯಕರೂಆದರು. ಸ್ವಾತಂತ್ರ್ಯ ಭಾರತದ ಕಾನೂನು ಸಚಿವರಾಗಿದೇಶದ ಸಂವಿಧಾನರಚಿಸುವ ಮಹತ್ವದ ಕೆಲಸವನ್ನು ಹೆಗಲಿಗೇರಿಸಿಕೊಂಡು ದಿನಕ್ಕೆ 18ಗಂಟೆಗಳ ಕಾಲ ದುಡಿದು ಮೇಲಿನ ಎಲ್ಲ್ಲಾ ಕಾಯ್ದೆಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಿದರು.