Sunday, September 27, 2026
Sunday, September 27, 2026

S. Rudregowda ಶ್ರಮದಿಂದ ಸಾರ್ಥಕತೆಯೇಡೆಗೆ ವಿಚಾರಗೋಷ್ಠಿಗೆ ಚಾಲನೆ

Date:

S. Rudregowda ಖ್ಯಾತ ಕೈಗಾರಿಕೋದ್ಯಮಿಗಳು, ಸಜ್ಜನ ರಾಜಕಾರಣಿಗಳು ಹಾಗೂ ವಿಧಾನ ಪರಿಷತ್ ಶಾಸಕರಾದ ಶ್ರೀ ಎಸ್. ರುದ್ರೇಗೌಡ ಅವರು 75ನೇ ವಸಂತಕ್ಕೆ ಕಾಲಿಟ್ಟ ಸಂತಸದ ಕ್ಷಣವನ್ನು ಸಂಭ್ರಮಿಸಲು “ರುದ್ರೇಗೌಡ ಅಭಿನಂದನಾ ಸಮಿತಿ” ನಗರದ ಸರ್ಜಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ “ಅಮೃತ ಮಹಿ” ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉದ್ಘಾಟಿಸಲಾಯಿತು.
ಇದೇ ವೇಳೆಯಲ್ಲಿ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ರುದ್ರೇಗೌಡ ಅಭಿನಂದನಾ ಸಮಿತಿ ಹಾಗೂ ರುದ್ರೇಗೌಡ ಅಭಿಮಾನಿ ಬಳಗದ ಆಶ್ರಯದಲ್ಲಿ ನಗರದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಚಿಂತನೆ ನಡೆಸಿ ಸುಮಾರು ನಾಲ್ಕು ಸಾವಿರ ತಟ್ಟೆ ಮತ್ತು ನಾಲ್ಕು ಸಾವಿರ ಲೋಟಗಳನ್ನು ಉಚಿತವಾಗಿ ವಿತರಿಸಲು ತೆರೆದಿರುವ “ಪ್ಲೇಟ್ ಬ್ಯಾಂಕ್” ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ನಂತರ ಕಾರ್ಯಕ್ರಮದ ಮೊದಲ ಅವಧಿಯಲ್ಲಿ ಏರ್ಪಡಿಸಿದ್ದ “ಶ್ರಮದಿಂದ ಸಾರ್ಥಕತೆಯೇಡೆಗೆ” ವಿಚಾರ ಗೋಷ್ಠಿಗೆ ಚಾಲನೆ ಕೊಡಲಾಯಿತು.
ಈ ಸಂದರ್ಭದಲ್ಲಿ ರುದ್ರೇಗೌಡ ಅಭಿನಂದನಾ ಸಮಿತಿ ಅಧ್ಯಕ್ಷ ರಾದ ಶ್ರೀ ಡಿ.ಜಿ. ಬೆನಕಪ್ಪ ಅವರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ S. Rudregowda ಡಾ|| ಧನಂಜಯ ಸರ್ಜಿ ಅವರು, ಪ್ರಮುಖರಾದ ಶ್ರೀ ರಮೇಶ್ ಹೆಗ್ಡೆ ಅವರು, ಶ್ರೀ ರಾಜಶೇಖರ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...