Friday, April 3, 2026
Friday, April 3, 2026

Monkey Attack ಚಿಕ್ಕಮಗಳೂರು ತಾಲ್ಲೂಕು ಮಾಗಡಿಯಲ್ಲಿ ಕೋತಿಗಳ ಕಾಟ

Date:

Monkey Attack ಚಿಕ್ಕಮಗಳೂರು, ತಾಲ್ಲೂಕಿನ ಮಾಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗನ ಹಾವಳಿಯಿಂದ ಓರ್ವ ಬಾಲಕ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಪ್ರಕರಣ ಸೋಮವಾರ ವರದಿಯಾಗಿದೆ.
ಈ ಸಂಬoಧ ಬಾಲಕ ತಂದೆ ಹಾಗೂ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತ ನಾಡಿ ಶಾಲೆಯ ಸುತ್ತಮುತ್ತಲು ಸುಮಾರು 40-50 ಮಂಗಗಳು ಶಾಲಾವರಣದಲ್ಲಿ ಅತ್ತಿತ್ತ ಅಲೆದಾಡುತ್ತಿದ್ದು ಇದರಿಂದ ಪ್ರತಿನಿತ್ಯ ಶಾಲೆಗೆ ತೆರಳುವ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ ಎಂದರು.

ಶಾಲೆಯಲ್ಲಿ 6 ರಿಂದ 11 ವರ್ಷದ ಬಾಲಕ-ಬಾಲಕಿಯರು ವಿದ್ಯಾಭ್ಯಾಸದಲ್ಲಿದ್ದಾರೆ. ಕೆಲವು ಬಿಡುವಿನ ಸಮ ಯದಲ್ಲಿ ಆಟೋಟ ಅಥವಾ ಸಸಿಗಳಿಗೆ ಪೋಷಿಸುವ ವೇಳೆ ಮಂಗಗಳು ಏಕಾಏಕಿ ದಾಳಿ ನಡೆಸಿ ಹಲ್ಲೆಗೊಳಿಸುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

Monkey Attack ಮಂಗಗಳ ಹಾವಳಿ ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಮನವಿ ಮಾಡಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪತ್ರ ನೀಡಿದರೆ ಮಾತ್ರ ಎನ್ನುತ್ತಾರೆ. ಈ ಕುರಿತು ಬಿಇಓ ಅಧಿಕಾರಿಗಳ ಗಮನಕ್ಕೆ ತಂದಿದ್ದು ಸದ್ಯದಲ್ಲೇ ಮಕ್ಕಳ ಯಾವುದೇ ಹಾನಿಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆಂದರು.
ಮoಗಗಳನ್ನು ಸ್ಥಳಾಂತರಿಸುವ ಸಂಬoಧ ಶಾಲಾ ಶಿಕ್ಷಕರಿಗೆ ವಿಚಾರಿಸಿದರೆ ಕಳೆದ ಎರಡು ವರ್ಷಗಳ ಹಿಂ ದೆಯೇ ಬಿಇಓ ಹಾಗೂ ಪಂಚಾಯಿತಿ ಮನವಿ ಮಾಡಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದು ಆ ನಿಟ್ಟಿನಲ್ಲಿ ಸಂಬoಧಿಸಿದ ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...