Sunday, August 2, 2026
Sunday, August 2, 2026

Sandipani School ಸಾಂದೀಪನಿ ಶಾಲೆಯಲ್ಲಿ ವಿಜ್ಞಾನ, ಕಲೆ, ಭಾಷೆ & ಕ್ರೀಡಾ ವಸ್ತು ಪ್ರದರ್ಶನ

Date:

Sandipani School ಸಾಂದೀಪನಿ ಆಂಗ್ಲ ಶಾಲೆಯಲ್ಲಿ ನಡೆದ ವಿಜ್ಞಾನ, ಕಲೆ, ಭಾಷೆ, ಕ್ರೀಡಾ ವಸ್ತು ಪ್ರದರ್ಶನವನ್ನು ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ ಉದ್ಘಾಟಿಸಿದರು.

ರೇಡಿಯೋ ಶಿವಮೊಗ್ಗ 90.8FM ನ ಕಾರ್ಯಕ್ರಮ ನಿರ್ವಾಹಕ ಅಜೇಯ ಸಿಂಹ, ಮತ್ತು ರಂಗಭೂಮಿ ಕಲಾವಿದ ಪ್ರತೀಕ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರ್, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ವರ್ಮ ಅವರು ಉಪಸ್ಥಿತರಿದ್ದರು.

ವಿಜ್ಞಾನ, ಕಲಾ, ಭಾಷಾ, ಕಂಪ್ಯೂಟರ್ ವಿಜ್ಞಾನ ಮತ್ತು ಕ್ರೀಡೆಗೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಲ್ಲಿ ಅನೇಕ ಮಾದರಿಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳು ಭಾಗವಹಿಸಿದ್ದರು. ವಿಜ್ಞಾನ ವಿಭಾಗದಲ್ಲಿ ಶಾಲೆಯಲ್ಲಿ ಓದಿದ್ದ ಹಿರಿಯ ವಿದ್ಯಾರ್ಥಿಗಳೇ ತೀರ್ಪುಗಾರರಾಗಿ ಆಗಮಿಸಿದ್ದು ವಿಶೇಷವಾಗಿತ್ತು.

Sandipani School ಪೋಷಕರು, ಸಾರ್ವಜನಿಕರು ಮಕ್ಕಳ ವಿವಿಧ ಮಾದರಿಗಳನ್ನು ವೀಕ್ಷಿಸಿದರು, ಮಕ್ಕಳು ತಾವು ಮಾಡಿದ್ದ ಮಾದರಿಗಳ ಬಗ್ಗೆ ವಿವರಿಸುತ್ತಿದ್ದ ರೀತಿ ಆಕರ್ಷಕವಾಗಿತ್ತು. ಪ್ರತೀ ವಿಭಾಗದಲ್ಲಿ ಪ್ರತ್ಯೇಕ ಬಹುಮಾನವನ್ನು ನೀಡುವುದಾಗಿ ತಿಳಿಸಿದ್ದರಿಂದ ಎಲ್ಲಾ ಮಾದರಿಗಳು ಆಕರ್ಷಕವಾಗಿದ್ದವು‌.
ಮಕ್ಕಳಲ್ಲಿ ಈ ರೀತಿಯ ಆಲೋಚನೆಯನ್ನು ಹೆಚ್ಚಿಸುವಲ್ಲಿ, ಅವರನ್ನು ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ರೀತಿಯ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಜೇಯಸಿಂಹ ಅವರು ತಿಳಿಸಿದರು.

ಅನೇಕ ಕ್ರೀಡಾಂಗಣಗಳು, ಕಂಪ್ಯೂಟರ್ ಕಾರ್ಯ ವಿಧಾನಗಳು, ಕುವೆಂಪುರವರ ಮನೆ, ಜ್ಞಾನಪೀಠ ಪುರಸ್ಕೃತರು, ಕನ್ನಡ ಭಾಷೆ ಬೆಳೆದು ಬಂದ ಹಾದಿ, ರಾಮಮಂದಿರ, ಕೇದಾರನಾಥ ದೇವಸ್ಥಾನ, ಸಂಸತ್ ಭವನ, ಸ್ವಯಂ ಚಾಲಿತ ವಾಹನ, ಗಣಿತದ ವಿಶೇಷತೆ, ರಾಮಾನುಜನ್ ಅವರ ಬದುಕಿನ ಪರಿಚಯ ಹೀಗೆ ಹಲವಾರು ಮಾದರಿಗಳು ಆಕರ್ಷಕವಾಗಿದ್ದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...