Kannada Rajyotsava ನವೆಂಬರ್ 1 ಕರ್ನಾಟಕ ಜನರಿಗೆ ಹಬ್ಬದ ದಿನ. ಕನ್ನಡಿಗರೆಲ್ಲರೂ ಸೇರಿ ಸಂಭ್ರಮಿಸುವ ಕನ್ನಡ ರಾಜ್ಯೋತ್ಸವ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದೇ ರೀತಿ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಗ್ರಾಮ ಪಂಚಾಯಿತಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಶೇಡ್ಗರ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶೇಡ್ಗಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ
ಯು ಎಂ ಚಂದ್ರಶೇಖರ್ ಅವರು ಮಾತನಾಡಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕನ್ನಡ ಎಂಬುವುದು ಬರೀ ಭಾಷೆಯಲ್ಲ ನಮ್ಮ ಉಸಿರು. ನವೆಂಬರ್ 1 ಬಂತೆಂದರೆ ಕರುನಾಡಿನ ಸಂಭ್ರಮ ಮನೆ ಮಾಡಿರುತ್ತದೆ ಎಂದರು.

Kannada Rajyotsava ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷರು ಮತ್ತು ಸದಸ್ಯರು, ಹಾಗೂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಮಕ್ಕಳು ಉಪಸ್ಥಿತರಿದ್ದರು.
