Saturday, October 10, 2026
Saturday, October 10, 2026

MP Raghavendra ಮಾನ್ಯ ಲೋಕಸಭಾ ಸ್ಪೀಕರ್ ನೇತೃತ್ವದಲ್ಲಿ ಗಾಂಧೀಜಿ & ಶಾಸ್ತ್ರೀಜಿ ಜಯಂತಿ

Date:

MP Raghavendra ಸಂವಿಧಾನ ಸದನ (ಹಳೆಯ ಸಂಸತ್ ಭವನ)ದ ಸೆಂಟ್ರಲ್ ಹಾಲ್ ನಲ್ಲಿ ನೆನ್ನೆ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಶ್ರೀ ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಸಂಭ್ರಮ. ದೇಶದ ಮೂಲೆಮೂಲೆಗಳಿಂದ ಬಂದಿದ್ದ ಆಯ್ದ ವಿದ್ಯಾರ್ಥಿಗಳ ಜೊತೆ ಲೋಕಸಭೆ ಸ್ಪೀಕರ್ ಶ್ರೀ ಓಂಪ್ರಕಾಶ್ ಬಿರ್ಲಾ ಅವರು ನಡೆಸಿದ ಕಾರ್ಯಕ್ರಮ ಅದು.

ಶ್ರೀ ಬಿರ್ಲಾ ಅವರು ಮಕ್ಕಳಿಗೆ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದ ಐತಿಹಾಸಿಕ ಮಹತ್ವದ ಬಗ್ಗೆ ಹಾಗೂ ಶಾಸ್ತ್ರೀಜಿಯವರ ಸ್ವಾವಲಂಬನೆಯ ಸೂತ್ರ ಭಾರತವನ್ನು ಹೇಗೆ ಬಲಶಾಲಿ ಮಾಡಿತು ಎಂಬ ಬಗ್ಗೆ ವಿಷದವಾಗಿ ತಿಳಿಸಿಕೊಟ್ಟರು.

MP Raghavendra ಮಕ್ಕಳೂ ಕೂಡ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರುಗಳನ್ನು ತಾವು ಕಂಡ ಬಗೆಯಲ್ಲಿ ವಿವರಿಸಿದರು.

ಇಬ್ಬರು ಮಹಾನ್ ಚೇತನಗಳ ಜನ್ಮದಿನ ಹೀಗೊಂದು ವಿಶೇಷ ಸ್ಫೂರ್ತಿಯ ದಿನವಾಗಿ, ಸಾರ್ಥಕ ದಿನವಾಗಿ ಕಳೆಯಿತು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಟ್ವಿಟ್ಟರ್ ಖಾತೆಯಲ್ಲಿ ಅವರು ಹಂಚಿಕೊಂಡ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...