Advocate post ಸರ್ಕಾರದ ಸೂಚನೆಯನ್ವಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸರ್ಕಾರಿ ವಕೀಲರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
Advocate post ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ ಅರ್ಹ ನ್ಯಾಯವಾದಿಗಳು ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ದಪಡಿಸಿ ದಿನಾಂಕ: 14-08-2023 ರ ಸಂಜೆ 5 ಗಂಟೆಯೊಳಗೆ ಸರ್ಕಾರಿ ಅಭಿಯೋಜಕರು, ಸರ್ಕಾರಿ ಅಭಿಯೋಜಕರ ಕಚೇರಿ, 4ನೇ ಮಹಡಿ, ಹೆಚ್ಚುವರಿ ನ್ಯಾಯಾಲಯಗಳ ಸಂಕೀರ್ಣ, ಬಾಲರಾಜ ಅರಸ್ ರಸ್ತೆ, ಶಿವಮೊಗ್ಗ ಈ ಕಚೇರಿಗೆ ಸಲ್ಲಿಸಬೇಕು.
ಅರ್ಜಿಯ ಜೊತೆ ಸ್ವಯಂ ದೃಢೀಕರಿಸಿದ ಎಸ್‍ಎಸ್‍ಎಲ್‍ಸಿ/ತತ್ಸಮಾನ ಅಂಕಪಟ್ಟಿ ಪ್ರತಿ, ಎಲ್‍ಎಲ್‍ಬಿ ಪದವಿಯ ಪ್ರತೀ ವರ್ಷದ/ಸೆಮಿಸ್ಟರ್‍ನ ಅಂಕಪಟ್ಟಿಗಳ ಪ್ರತಿಗಳು, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲರಾಗಿ ನೋಂದಣಿ ಆದ ಬಾರ್ ಕೌನ್ಸಿಲ್‍ರವರು ನೀಡಿದ ಸನ್ನದಿನ ಪ್ರತಿ, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ವಕೀಲರ ಸಂಘದಿಂದ ಪಡೆದ ಪ್ರಮಾಣ ಪತ್ರದ ಪ್ರತಿ, ನ್ಯಾಯಾಲಯದ ಪೀಠಾಸೀನ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದ ಪ್ರತಿ, ಮೀಸಲಾತಿಗೆಸಂಬಂಧಿಸಿದ ಜಾತಿ/ಪ್ರವರ್ಗಕ್ಕೆ ಸೇರಿದ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರವು ನೀಡಿದ ಜಾತಿ/ಆದಾಯ ಪ್ರಮಾಣ ಪತ್ರ ಇತರೆ ದಾಖಲಾತಿಗಳನ್ನು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂ.ಸಂ: 9448544214/7892311800 ನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ