Youth Hostel Association of India ಯೂತ್ ಹಾಸ್ಟೆಲ್ ಸಂಸ್ಥೆಯು ಅಮೃತ ಮಹೋತ್ಸವ ಆಚರಣೆ ಸಂಭ್ರಮದಲ್ಲಿದ್ದು, ಚಾರಣ, ಆರೋಗ್ಯ ತಪಾಸಣೆ ಸೇರಿದಂತೆ ಸೇವಾ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಚೇರ‍್ಮನ್ ಎಸ್.ಎಸ್.ವಾಗೇಶ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ 1949ರ ಜುಲೈ 12 ರಂದು ಮೈಸೂರಿನ ಮಹರಾಜ ಕಾಲೇಜಿನಲ್ಲಿ ನಾಲ್ಕು ಜನ ಪ್ರಾಧ್ಯಾಪಕರು ಪ್ರಾರಂಭಿಸಿದ ಯೂತ್ ಹಾಸ್ಟೆಲ್ಸ್ ಎಪ್ಪತ್ತೈದನೇ ವರ್ಷದಲ್ಲಿದೆ ಎಂದು ತಿಳಿಸಿದರು.
ತರುಣೋದಯ ಘಟಕವು ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ 75 ಕಾರ್ಯಕ್ರಮ ಆಯೋಜಿಸುವ ಮೂಲಕ ಅಮೃತ ಮಹೋತ್ಸವ ನೆನೆಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲರ ಸಹಕಾರ ಅಗತ್ಯ. ಚಾರಣ ಮಾತ್ರವಲ್ಲದೆ ಯೂತ್ ಹಾಸ್ಟೆಲ್ಸ್ ಸಾಮಾಜಿಕ ಕಾರ್ಯಗಳಲ್ಲಿಯೂ ಸದಸ್ಯರು ತೊಡಗಿಸಿ ಕೊಳ್ಳಬೇಕು ಎಂದರು.
ಕೇಂದ್ರ ಕಚೇರಿ ಸೂಚನೆಯಂತೆ ಆರೋಗ್ಯ ತಪಾಸಣೆ, ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯಕ್ರಮದ ಪ್ರಯುಕ್ತ ಆರ್.ಎಂ.ಸಿ. ಸ್ಕೇಟಿಂಗ್ ಯಾರ್ಡ್ ನಲ್ಲಿ ರಂಗೋಲಿ ಸ್ವರ್ಧೆ ಹಮ್ಮಿ ಕೊಳ್ಳಲಾಗಿದೆ. ಮಕ್ಕಳಿಗೆ ಚಿತ್ರಕಲಾ ಸ್ವರ್ಧೆ, ದಂತ ಕುಳಿ ಪರೀಕ್ಷೆ, ಆಯುರ್ ಚಿಕಿತ್ಸಾ ವಿಧಾನ ಬಗ್ಗೆ ಮಾಹಿತಿ, ರಕ್ತದಾನ ಶಿಬಿರ, ಗ್ರಾಮೀಣ ಪ್ರದೇಶದಲ್ಲಿ ದೃಷ್ಟಿ ಚಿಕಿತ್ಸಾ ಶಿಬಿರ, ವಿವಿಧ ಭಾರತೀಯ ಕ್ರೀಡಾ ಸ್ವರ್ಧೆ ಏರ್ಪಡಿಸಲು ತೀರ್ಮಾನಿಸಿದೆ. ಈ ದಿನ ಸೈಕಲ್ ಸವಾರಿಯನ್ನು 60 ಕಿ.ಮೀ. ಏರ್ಪಡಿಸಿದೆ. ಭಾಗವಹಿಸಿದ 30 ಸದಸ್ಯರಿಗೆ ಧನ್ಯವಾದ ಎಂದು ಹೇಳಿದರು.
Youth Hostel Association of India ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಪ್ರತಿ ವರ್ಷ ನೂರಾರು ಸದಸ್ಯರು ಹಿಮಾಲಯ ಚಾರಣ ಮಾಡಲು ನಮ್ಮ ಘಟಕ ಸಹರಿಸುತ್ತಿದೆ. ಪ್ರಕೃತಿ ಪ್ರಿಯರಿಗಾಗಿ ಸ್ಥಳೀಯ ಚಾರಣಗಳನ್ನು ಏರ್ಪಡಿಸಿ ಯಶಸ್ವಿಯಾಗಿದೆ. ಈಗ ಸಾಮಾಜಿಕ ಕಾರ್ಯಗಳಲು ತೊಡಗಿಸಿ ಕೊಂಡಿದ್ದು, ಸಮಾಜಕ್ಕು ಕೊಡುಗೆ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನು ಪೂರೈಸಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದರು. ಆಗಮಿಸಿದ ಎಲ್ಲರನ್ನು ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿದರು. ಗಿರೀಶ್ ಕಾಮತ್ ವಂದಿಸಿದರು.