Rotary Shivamogga ಹೊಸ ವಿಚಾರಗಳ ನಿರಂತರ ಕಲಿಕೆ ಹಾಗೂ ಗುಣಾತ್ಮಕ ನಾಯಕತ್ವ ಗುಣದಿಂದ ಸಂಸ್ಥೆಯು ಬೆಳವಣಿಗೆ ಹೊಂದಲು ಸಾಧ್ಯವಿದೆ. ಸಂಸ್ಥೆಯ ಎಲ್ಲ ಸದಸ್ಯರ ಪಾಲ್ಗೊಳ್ಳುವಿಕೆಯು ಮುಖ್ಯ ಎಂದು ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ವಿಲಿಯಂ ಡಿಸೋಜ ಹೇಳಿದರು.
ಶಿವಮೊಗ್ಗ ರಾಜೇಂದ್ರ ನಗರದಲ್ಲಿರುವ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸದಸ್ಯರು ಪರಸ್ಪರ ಒಡನಾಟ, ಸೇವಾ ಚಟುವಟಿಕೆ ಹಾಗೂ ಶಕ್ತಿ ಸಾಮರ್ಥ್ಯಗಳನ್ನು ಒಂದು ಸಂಸ್ಥೆಯಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುವುದರ ಜೊತೆಗೆ ವೈಯಕ್ತಿಕವಾಗಿಯೂ ಪ್ರಗತಿ ಕಾಣಬಹುದು ಎಂದು ತಿಳಿಸಿದರು.
Rotary Shivamogga ಸಂಸ್ಥೆಯಲ್ಲಿ ಎಲ್ಲ ರೀತಿಯ ಸದಸ್ಯರು, ಅತ್ಯಂತ ಗಣ್ಯರು ಹಾಗೂ ಸಾಧಕರು ಇರುತ್ತಾರೆ. ಅಂತಹ ಸದಸ್ಯರ ಜತೆಯಲ್ಲಿ ನಾವು ಸದಸ್ಯರಾಗಿ ಇರುವುದೇ ಉತ್ತಮ ಅವಕಾಶ. ರೋಟರಿ ಸಂಸ್ಥೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳು. ವಿಶ್ವದಲ್ಲೇ ಪಲ್ಸ್ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯು ಪ್ರಮುಖವಾಗಿದೆ ಎಂದರು.
ರೋಟರಿ ಸಂಸ್ಥೆಯ ಸದಸ್ಯರು ತಮ್ಮ ತಮ್ಮ ದೇಣಿಗೆಯನ್ನು ನೀಡಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ. ಒಂದು ಸಂಸ್ಥೆಯಲ್ಲಿ ಹೊಸ ವಿಚಾರ, ಪರಸ್ಪರ ಒಡನಾಟ, ಸೇವಾ ಮನೋಭಾವ, ನಮ್ಮ ಶಕ್ತಿ ಸಾಮರ್ಥ್ಯದ ಅರಿವು ಹಾಗೂ ಕಲಿಯಲು ಅನೇಕ ಅವಕಾಶಗಳು ಸಾಕಷ್ಟಿವೆ. ನಾಯಕನಾಗಿ ಆಸಕ್ತಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದು, ಸದಸ್ಯರ ಪ್ರಗತಿಗಾಗಿಯೂ ಕೂಡ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲಾ ಸದಸ್ಯರು ಸ್ನೇಹದಿಂದ ಮುನ್ನಡೆದರೆ ಸಮಾಜ ಸೇವೆಗೆ ಬಹಳ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ವಸಂತ ಹೋಬಳಿದಾರ್, ಮಂಜುನಾಥ್ ಕದಂ, ಡಾ. ಪರಮೇಶ್ವರ್ ಶಿಗ್ಗಾವ್, ಶ್ರೀಕಾಂತ್, ಮಹೇಶ್ ಎ ಓ, ವೀಣಾ ಕಿಶೋರ್, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.