DC Chikkamagaluru ದಲಿತ ಕುಟುಂಬಗಳಿಗೆ ಮಂಜೂರಾದ ಜಮೀನನ್ನು ಖರೀದಿಸಿ ಕೆಲವು ರಿಯಲ್ ಎಸ್ಟೆಟ್ ಉದ್ಯಮಿಗಳು ಸರ್ಕಾರಿ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದು ಕೂಡಲೇ ಇದನ್ನು ತಡೆ ಹಿಡಿಯುವಂತೆ ದಸಂಸ (ಅಂಬೇಡ್ಕರ್ ವಾದ) ಮುಖಂಡರುಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳಿಗೆ ಒತ್ತಾಯಿಸಿದರು.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣಕನಕರೆಡ್ಡಿ ಅವರ ಮೂಲಕ ಕಂದಾಯ ಇಲಾಖೆಗೆ ಸೋಮವಾರ ಮನವಿ ಸಲ್ಲಿಸಿದ ಮುಖಂಡರುಗಳು ಕಾನೂನು ಬಾಹಿರವಾಗಿ ಸರ್ಕಾರಿ ಜಮೀನನ್ನು ಕಬಳಿಸಿರುವು ದನ್ನು ತಡೆಹಿಡಿಯುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ನಗರ ಸಮೀಪದ ಗವನಹಳ್ಳಿ ಸರ್ವೆ ನಂ.92 ಮತ್ತು 93 ರಲ್ಲಿ ಸರ್ಕಾರಿ ಗೋಮಾಳವನ್ನು ಹಿಡುವಳಿ ಜಮೀನಿಗೆ ಕಾನೂನು ಬಾಹಿರವಾಗಿ ರಾಜ ಕೀಯ ಪ್ರಭಾವ ಬಳಸಿ ಸ್ಥಳ ಬದಲಾವಣೆ ಮಾಡಿ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
DC Chikkamagaluru ಕೂಡಲೇ ಈ ಬಗ್ಗೆ ಗಮನಹರಿಸಿ ಸರ್ಕಾರಿ ಭೂಮಿಯನ್ನಾಗಿಯೇ ಉಳಿಸಿ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿ ರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಮೈಲಿಮನೆ ಕೃಷ್ಣಮೂರ್ತಿ, ಸಿಪಿಐ ಮುಖಂಡ ಯಡದಾಳು ಕುಮಾರ್, ದಸಂಸ ಜಿಲ್ಲಾ ಖಜಾಂಚಿ ಸಂತೋಷ್‌ಲಕ್ಯಾ, ದಸಂಸ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ಹೊನ್ನಪ್ಪ, ಸುಜೇಂದ್ರ ಹಾಜರಿದ್ದರು.