Saturday, May 16, 2026
Saturday, May 16, 2026

ZP Chikkamagaluru ಮೂಗ್ತಿಹಳ್ಳಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶ‌ನ ನೀಡಲು ಆಗ್ರಹ

Date:

ZP Chikkamagaluru ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಮೀನು ಮಂಜೂರು ಮಾಡಿಕೊಡಬೇಕು ಎಂದು ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮನವಿ ಸಲ್ಲಿಸಿ ನಿವೇಶನ ರಹಿತರಿಗೆ ಗ್ರಾಮದಲ್ಲಿ ಗುರುತಿಸಿರುವ ಜಮೀನನ್ನು ಮಂಜೂರು ಮಾಡಿಕೊಟ್ಟು ಸುಗಮ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಉಮೇಶ್‌ಶೆಟ್ಟಿ ಮೂಗ್ತಿಹಳ್ಳಿ ವ್ಯಾಪ್ತಿಯ ಕದ್ರಿಮಿದ್ರಿ ಮತ್ತು ಕೆಸವಿನಮನೆ ಗ್ರಾಮಗಳಲ್ಲಿ ಸುಮಾರು ೨೦೦ ಮಂದಿ ನಿವೇಶನ ರಹಿತರು ನಿರಂತರವಾಗಿ ನಿವೇಶನ ಹಂಚಿಕೆ ಮಾ ಡಲು ಪಂಚಾಯಿತಿಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.

ZP Chikkamagaluru ಕದ್ರಿಮಿದ್ರಿ ವಾರ್ಡ್ ಹಾಗೂ ಗ್ರಾಮ ಸಭೆಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಅವಶ್ಯಕತೆಯಿರುವ ಜಮೀನಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ನಿವೇಶನ ರಹಿತರಿಗೆ ಜಾಗವನ್ನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಅಂಬಿಕಾ, ಸದಸ್ಯರುಗಳಾದ ನವೀನಕುಮಾರಿ, ಪ್ರಭಾಕರ್, ಮಂಜುನಾಥ್, ಕಮಲಾಕ್ಷಿ, ಮಾಜಿ ಸದಸ್ಯ ಜಗನ್ನಾಥ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಜ್‌ಕುಮಾರ್ ಹಾಗೂ ನಿವೇಶನ ರಹಿತರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...