Wednesday, April 23, 2025
Wednesday, April 23, 2025

Milk Price Hike ಆಗಸ್ಟ್ 1ರಿಂದ ನಂದಿನಿ ಹಾಲು & ಮೊಸರು ಲೀ.ಗೆ₹ 3 ಹೆಚ್ಚಳ

Date:

Milk Price Hike ದಿನನಿತ್ಯ ಬಳಸುವ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅದೇನೆಂದರೆ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಿಸಲಾಗಿದೆ. ಹೌದು ಆಗಸ್ಟ್ 1 ರಿಂದ ಈ ಪರಿಷ್ಕೃತ ದರವನ್ನು ಜಾರಿಗೆ ತರಲಾಗಿದೆ.

ನಾಳೆಯಿಂದಲೇ ಅನ್ವಯಗೊಳ್ಳುವಂತೆ ನಂದಿನಿ ಹಾಲು, ಮೊಸರು, ಮೊಜ್ಜಿಗೆ ಸ್ವಿಟ್ ಲಸ್ಸಿ ಸೇರಿದಂತೆ ಹಾಲಿನ ಉತ್ಪನ್ನಗಳ ದರವನ್ನು ಪ್ರತಿ ಲೀ.ಗೆ 3 ರೂ.ಗಳನ್ನು ಹೆಚ್ಚಿಸಿದೆ.

ಗ್ರಾಹಕರು ಸಹಕರಿಸಿ, ರೈತರು ಮತ್ತು ಹೈನೋದ್ಯಮಿಗಳಿಗೆ ನೆರವಾಗುವಂತೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ಅವರು ಹೇಳಿದರು.

ಅವರು ಇಂದು ಮಾಚೇನಹಳ್ಳಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭಾಂಗಣದಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಹಾಲಿನ ದರದ ಹೆಚ್ಚಳಕ್ಕೆ ಸಂಬoಧಿಸಿದoತೆ ರಾಜ್ಯದ 14 ಹಾಲು ಒಕ್ಕೂಟಗಳ ಆಡಳಿತ ಮಂಡಳಿಯ ಸದಸ್ಯರ ನಿಯೋಗ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಲಾಗಿತ್ತು.

ಅದರ ಫಲಶೃತಿಯಾಗಿ ಮಾನ್ಯ ಮುಖ್ಯಮಂತ್ರಿಗಳು ಸಂಬ0ಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ.

ಹಾಲು ಬೆಲೆ ಹೆಚ್ಚಳ ಮಾಡುವಲ್ಲಿ ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳು, ಸಹಕಾರ ಸಚಿವರು, ಪಶು ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಹಾಲು ಒಕ್ಕೂಟಕ್ಕೆ ಪ್ರತಿನಿತ್ಯ 6.70,000 ಲೀ. ಹಾಲು ಶೇಖರಣೆಯಾಗುತ್ತಿದ್ದು, ಸುಮಾರು 1.50ಲಕ್ಷ ರೈತರ ಕುಟುಂಬಗಳು ಈ ದರ ಹೆಚ್ಚಳದ ಲಾಭ ಪಡೆದುಕೊಳ್ಳಲಿದ್ದಾರೆ ಎಂದ ಅವರು ಈ ಹಿಂದಿನ0ತೆ ರೈತರಿಗೆ ಬೆಂಬಲ ಬೆಲೆಯೂ ಮುಂದುವರೆಯಲಿದೆ ಎಂದವರು ತಿಳಿಸಿದರು.

Milk Price Hike ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿಗೆ ಉತ್ತಮ ದರವನ್ನು ನೀಡುವುದರ ಜೊತೆಗೆ ಪಶು ವೈದ್ಯಕೀಯ ಶಿಬಿರ, ತುರ್ತು ಪಶುವೈದ್ಯಕೀಯ ಸೇವೆ, ರಾಸುಗಳಿಗೆ ವಿಮೆ, ಮೇವಿನ ಬೀಜ ಮತ್ತು ಪಶು ಆಹಾರ ಸರಬರಾಜು, ಕೃತಕ ಗರ್ಭಧಾರಣೆ ಹಾಗೂ ಇತರೆ ತಾಂತ್ರಿಕ ಪರಿಕರಗಳು ಸೇರಿದಂತೆ ವಿವಿಧ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಸಕಾಲದಲ್ಲಿ ಹಾಲು ಉತ್ಪಾದಕರಿಗೆ ಒದಗಿಸಲಾಗುತ್ತಿದೆ ಎಂದವರು ನುಡಿದರು.

ಪ್ರಸ್ತುತ ಹಾಲಿನ ಬೆಲೆ ಹೆಚ್ಚಾಗಿರುವುದರಿಂದ ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರವನ್ನು ಪ್ರತಿ ಕೆ.ಜಿ.ಗೆ 33.71ರೂ.ಗಳಿಂದ 36.83 ರೂ.ಗಳಿಗೆ ಹಾಗೂ ಸಂಘದಿ0ದ ಉತ್ಪಾದಕರಿಗೆ ಹಾಲಿ ನೀಡಲಾಗುತ್ತಿರುವ ದರವನ್ನು 31.85 ರೂ.ಗಳಿಂದ 34.97 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದವರು ತಿಳಿಸಿದರು.

1ಲೀ. ಟೋನ್ಡ್ ಹಾಲು ರೂ.39.00ರಿಂದ ರೂ. 42.00 510ಮಿ.ಲೀ., ಟೋನ್ಡ್ ಹಾಲು ರೂ. 20.00ರಿಂದ ರೂ. 22.00, 1ಲೀ. ಶುಭಂ ಸ್ಟಾಂಡರ್ಡ್ ರೂ.45 ರಿಂದ ರೂ.49.

510ಮಿ.ಲೀ. ಶುಭಂ ಸ್ಟಾಂಡರ್ಡ್ ರೂ.23 ರಿಂದ ರೂ.25.

1ಲೀ. ಹೊಮೋಜಿನೈಸ್ಡ್ ಶುಭಂ ಹಾಲು ರೂ.46ರಿಂದ ರೂ.49, 510ಮಿ.ಲೀ. ಹೊಮೋಜಿನೈಸ್ಡ್ ಶುಭಂ ಹಾಲು ರೂ.23 ರಿಂದ ರೂ.25.

500 ಗ್ರಾಂ. ಮೊಸರು ರೂ.24 ರಿಂದ ರೂ.26.

200ಗ್ರಾಂ. ಮೊಸರು ರೂ.11ರಿಂದ ರೂ.12ಗಳಿಗೆ ಹೆಚ್ಚಿಸಲಾಗಿದೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ಹೆಚ್.ಕೆ.ಬಸಪ್ಪ, ಸಿ.ವೀರಭದ್ರಬಾಬು, ಡಿ.ಆನಂದ, ವಿದ್ಯಾಧರ, ಟಿ.ಶಿವಶಂಕರಪ್ಪ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಕೆ.ಎ.ತಾರನಾಥ, ಕೆ.ಎನ್.ಸೋಮಶೇಖರಪ್ಪ, ಜಿ.ಪಿ.ಯಶವಂತರಾಜು, ಶ್ರೀಮತಿ ಎನ್.ಹೆಚ್.ಭಾಗ್ಯ, ಎನ್.ಡಿ.ಹರೀಶ್, ಕೆ.ಪಿ.ರುದ್ರೇಗೌಡ, ಎಸ್.ಜಿ.ಶೇಖರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...