Monday, May 4, 2026
Monday, May 4, 2026

Manipur Incident ಮಣಿಪುರದಲ್ಲಿ ಮಹಿಳೆ ಅಪಮಾನ ಪ್ರಸಂಗ: ಆರೋಪಿಗಳಿಗೆ ಮರಣ ದಂಡನೆ ಕೊಡಲು ಆಗ್ರಹ

Date:

Manipur Incident ಮಣಿಪುರ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿರುವ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ಮೂಲಕ ನಿರ್ದಾಕ್ಷ್ಯೀಣ ಕ್ರಮ ಕೈಗೊ ಳ್ಳಬೇಕು ಎಂದು ಜಿಲ್ಲಾ ಅಂಬೇಡ್ಕರ್ ಸೇನೆ ಬುಧವಾರ ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಸೇನೆಯ ಪದಾಧಿಕಾರಿಗಳು ಹೆಣ್ಣುಮಕ್ಕಳ ಮೇಲೆ ಅಮಾನುಷಕೃತ್ಯವೆಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತೊಮ್ಮೆ ಇಂತಹ ದುರ್ಘಟನೆಗೆ ಯಾರು ಕೈಹಾಕದಂತೆ ಕ್ರಮ ವಹಿಸಬೇಕು ಎಂದರು.

ಈ ವೇಳೆ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್ ಮಣ ಪುರದ ರಾಜ್ಯದ ಬುಡಕಟ್ಟು ಸಮುದಾ ಯದ ಇಬ್ಬರು ಮಹಿಳೆಯರನ್ನು ಬಹಿರಂಗವಾಗಿ ವಿವಸ್ತçಗೊಳಿಸಿ ಲೈಂಗಿಕ ಕಿರುಕುಳ ನೀಡಿರುವುದು ದುರಾದೃಷ್ಟಕರ ಸಂಗತಿ. ಇಂತಹ ವಿಕೃತ ಮನಸ್ಸು ಹೊಂದಿರುವ ಆರೋಪಿಗಳಿಗೆ ಯಾವುದೇ ದಯೆ ತೋರದೇ ಮರಣ ದಂಡನೆ ನೀಡಿ ಮಹಿಳೆಯರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದರು.

Manipur Incident ದೇಶದ ಹೆಣ್ಣುಮಕ್ಕಳ ಮೇಲೆ ಇಷ್ಟೆಲ್ಲಾ ಪೈಶಾಚಿಕ ಕೃತ್ಯಗಳು ನಡೆದರೂ ಸಹ ಮಣ ಪುರ ರಾಜ್ಯಸರ್ಕಾರ ವೀಡಿಯೋ ವೈರಲ್ ಆದ ಬಳಿಕ ಕ್ರಮ ಕೈಗೊಂಡಿರುವುದು ದುರ್ದೈವದ ವಿಷಯ. ಕೂಡಲೇ ರಾಷ್ಟ್ರಪತಿಗಳಿಗೆ ಅಲ್ಲಿನ ರಾಜ್ಯಸರ್ಕಾರದ ವಿಸರ್ಜಿಸಬೇಕು ಎಂದರು.

ಸಂತ್ರಸ್ಥ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಧನ, 10 ಎಕರೆ ಭೂಮಿ ಮಂಜೂರು ಮಾಡಬೇಕು. ಮಣ ಪುರದ ರಾಜ್ಯಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೇನೆಯ ಕಾರ್ಯದರ್ಶಿಗಳಾದ ಬಸವರಾಜ್, ಸುರೇಶ್, ದಲಿತ ಮುಖಂಡರುಗಳಾದ ಜಗದೀಶ್, ಪ್ರೇಮ್‌ಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...