Thursday, June 18, 2026
Thursday, June 18, 2026

Uttaradi Mutt ಜ್ಞಾನದ ಬಲದಿಂದ ದೇವರನ್ನು ಹೃದಯದಲ್ಲಿ ಆರಾಧಿಸಲು ಸಾಧ್ಯ- ಶ್ರೀ ಸತ್ಯಾತ್ಮ ತೀರ್ಥರು

Date:

Uttaradi Mutt ಎಲ್ಲ ಕಡೆ ದೇವರಿದ್ದಾನೆ ಎಂಬುದು ನಿಸ್ಸಂಶಯ. ಆದರೆ ಕೆಲವು ಅಧಿಷ್ಠಾನಗಳಲ್ಲಿ, ಸ್ಥಾನಗಳಲ್ಲಿ ವಿಶೇಷವಾಗಿದ್ದಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ವ್ಯಾಪ್ತನಾದ ಪರಮಾತ್ಮನ ಉಪಾಸನೆ ಮಾಡುವ ಸಾಧಕರಿದ್ದಾರೆ. ಆದರೆ ಇದು ಸಾಮಾನ್ಯರಿಗೆ ಅಸಾಧ್ಯವಾದುದು. ಹೀಗಾಗಿ ಗುರುಗಳಲ್ಲಿದ್ದು ಶಿಷ್ಯರಿಗೆ, ತಂದೆ-ತಾಯಿಯಲ್ಲಿದ್ದು ಮಕ್ಕಳಿಗೆ ದೇವರು ವಿಶೇಷ ಅನುಗ್ರಹ ಮಾಡುತ್ತಾನೆ. ಅದಕ್ಕಾಗಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ಎಂದರು.

ಶಾಸ್ತ್ರಗಳೆಂಬ ಬೆಳಕಿನಲ್ಲಿ ಇದ್ದರೆ ಮಾತ್ರ ಆ ಜ್ಞಾನದ ಬಲದಿಂದ ದೇವರನ್ನು ಹೃದಯದಲ್ಲಿ ಆರಾಧನೆ ಮಾಡಲು ಸಾಧ್ಯ. ಇಂತಹ ಪರಮಾತ್ಮನಿಗೆ ಹುಟ್ಟು ಮತ್ತು ಸಾವು ಎರಡೂ ಇಲ್ಲ. ಆನಂದಾದಿ ಗುಣ ಸ್ವರೂಪಿಯಾದ ದೇವರಿಗೆ ತಂದೆ – ತಾಯಿಯೂ ಇಲ್ಲ. ನನಗೆ ಅದರ ಅಗತ್ಯ ಇಲ್ಲ ಎಂದು ತೋರಿಸುವುದಕ್ಕಾಗಿಯೇ ನರಸಿಂಹಾವತಾರದಲ್ಲಿ ಸ್ತಂಭದಲ್ಲಿ ಅವತಾರ ಮಾಡಿದ. ಕೃಷ್ಣಾವತಾರದಲ್ಲಿ ವಸುದೇವ ದೇವಕಿಯರು ಕೇವಲ ನಿಮಿತ್ತ ಮಾತ್ರ ಎಂದರು.

Uttaradi Mutt ಸಭೆಯಲ್ಲಿ ಮೈಸೂರಿನ ಬಾದರಾಯಣಾಚಾರ್ಯ, ಪೂಜಾ ಕಾಲದಲ್ಲಿ ಅನಂತಾಚಾರ್ಯ ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...