Sunday, September 27, 2026
Sunday, September 27, 2026

JCI Shimoga Malnad ಶಿವಮೊಗ್ಗ ಪ್ರತಿಭೆಕಿಶನ್ ನಿರ್ದೇಶಿತ ಕಿರುಚಿತ್ರ “ತುಂಗ್ಸ್ ಆಫ್ ರಾಗುಡ್”ಟ್ರೈಲರ್ ಸಿದ್ಧ

Date:

JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಯ ಉಪಾಧ್ಯಕ್ಷ ಜೆಸಿ ಕಿಶನ್ ಅವರು ಪ್ರಸ್ತುತ ಪೆಸೇಟ್ ಕಾಲೇಜ್ ನ ವಿದ್ಯಾರ್ಥಿಯಾಗಿದ್ದು, ಸಾಕಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ.

ಇದೇ ತಿಂಗಳು ಜುಲೈ 8ನೇ ತಾರೀಖು ಶನಿವಾರ ನಟಿಸಿ, ನಿರ್ದೇಶಿಸಿ, ಹಣ ಹೂಡಿ ಚಿತ್ರಿಸಿರುವ ಕಿರು ಚಿತ್ರ “ತುಂಗ್ಸ್ ಆಫ್ ರಾಗುಡ್ ” ಶೀರ್ಷಿಕೆಯ ಕಿರುಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

ತಮ್ಮದೇ ಆದ ಕೆ ಎಸ್ ಎಸ್ ಕ್ರಿಯೇಷನ್ ಪ್ರೊಡಕ್ಷನ್ ಹೌಸ್ ಹೆಸರಿನ ಸಂಸ್ಥೆಯ ಮೂಲಕ ಕಿರು ಚಿತ್ರಗಳನ್ನೂ ಜೆಸಿ ಕಿಶನ್ ಅವರು ನಿರ್ಮಿಸಿದ್ದಾರೆ.

“ತುಂಗ್ಸ್ ಆಫ್ ರಾಗುಡ್ ” ಕಿರು ಚಿತ್ರವನ್ನು ನೂತನವಾಗಿ ನಿರ್ಮಿಸಿದ್ದು, ಕಥೆ – ಚಿತ್ರಕಥೆ | ನಿರ್ದೇಶನ – ಕಿಶನ್, ಛಾಯಗ್ರಹಣ | ಸಂಕಲನ | ಮ್ಯೂಸಿಕ್ – ಅನುಷ್ ಗೌಡ, ಸಂಭಾಷಣೆ – ಕಿಶನ್ | ಹೇಮಂತ್, ನಾಯಕಿಯಾಗಿ – ಪ್ರಾರ್ಥನ, ಮುಖ್ಯ ಪಾತ್ರ – ಪೃಥ್ವಿ ಗೌಡ , ಕಿರಣ್, ಸಯದ್ ನೌಮಾನ್, ಸಮೃದ್, ಥನುಷ್, ಹರ್ಷ, ಸುಜಿತ್, ಕಾರ್ಣಿಕ್, ಪಾರ್ಥ ಚಿರಂತನ್, ವಿನಯ್, ರಾಜು, ಹರೀಶ್ ಗೌಡ, ಸುಮುಖ, ಸೃಷ್ಠಿ, ಕಾರ್ತಿಕ್, ಕೀರ್ತನಾ,
40 ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ, 50 ಸಾವಿರ ವೆಚ್ಚದ ಕಿರು ಚಿತ್ರಯಿದಾಗಿದೆ, ಕಿರು ಚಿತ್ರಗಳಲ್ಲೇ ಹೊಸದೊಂದು ಪ್ರಯತ್ನ, ಈಗಾಗಲ್ಲೆ ಬಿಡುಗಡೆಯಾಗಿರುವ ಪೋಸ್ಟ್ ರ್ ಗಳಿಂದಲೇ ಸದ್ದು ಮಾಡುತ್ತಿದೆ.

ಸ್ಯಾಂಡಲ್ ವುಡ್ ನ ನಟ ನಟಿಯರು ಈ ಚಿತ್ರಕ್ಕೆ ಶುಭಕೋರಿದ್ದಾರೆ. ದಿಯಾ ಚಿತ್ರದ ನಟ ಪೃಥ್ವಿ ಅಂಬಾರ್ , ರಾಮಾಚಾರಿ ಮೂವಿ ಖ್ಯಾತಿಯ ಅಶ್ವಿತಿ ಶೆಟ್ಟಿ , ಲವ್ ಮಾಕ್ಟೆಲ್ ಮೂವಿಯ ಸುಶ್ಮ( ಖುಷಿ ಆಚಾರ್ ) , ಝೀ ಕನ್ನಡ ಖಾಮಿಡಿ ಕಿಲಾಡಿ ಯ ಸದಾನಂದ ಹಾರೈಸಿದ್ದಾರೆ.

 JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಪದಾಧಿಕಾರಿಗಳು ಹಾಗೂ ಮುಖ್ಯವಾಗಿ ಸಂಸ್ಥೆಯ ಉಪಾಧ್ಯಕ್ಷ ಜೆಸಿ ಕಿಶನ್ ಅವರು ನಿರ್ದೇಶಿಸಿ , ನಿರ್ಮಿಸಿರುವ , ಮುಖ್ಯ ನಟನಾಗಿ ಅಭಿನಯಿಸಿರುವ ಕಿರು ಚಿತ್ರ "ತುಂಗ್ಸ್ ಆಫ್ ರಾಗುಡ್ " ಎಲ್ಲಾ ಪ್ರೇಕ್ಷಕರಿಗೂ ತಲುಪಲಿ , ಮಲೆನಾಡಿನ ಪ್ರತಿಭೆಗಳಿಗೆ ನಮ್ಮ ಜೆಸಿಐ ಶಿವಮೊಗ್ಗ ಸ್ಟಾರ್ಸ್ ವೇದಿಕೆ ಕಲ್ಪಿಸುತ್ತದೆ ಎಂದು ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಮತ್ತು ಅವರ ತಂಡ "ತುಂಗ್ಸ್ ಆಫ್ ರಾಗುಡ್ " ಕಿರು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...