Wednesday, July 16, 2025
Wednesday, July 16, 2025

Nidhi Aapke Nikat Programme ಮೇ 29 ರಂದು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಸದಸ್ಯರಿಗೆ ನಿಧಿ ಆಪ್ ಕೆ ನಿಕಟ್ ಕಾರ್ಯಕ್ರಮ

Date:

Nidhi Aapke Nikat Programme ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಭವಿಷ್ಯ ನಿಧಿ ಸದಸ್ಯರು, ಪಿಂಚಣಿದಾರರು ಮತ್ತು ಉದ್ಯೋಗದಾತರುಗಳಿಗೆ ಮೇ.29 ರಂದು “ನಿಧಿ ಆಪ್ಕೆ ನಿಕಟ್ 2.00 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೇ 29 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 01 ರವರೆಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 04 ರವರೆಗೆ ಪಿಂಚಣಿದಾರರಿಗೆ ಶಿವಮೊಗ್ಗ ಜಿಲ್ಲೆಯ ಟೀಚರ್ಸ್
ಕೊ-ಆಪರೇಟಿವ್ ಸೊಸೈಟಿ, ಟಿ.ಎಸ್.ಟಿ ಹೈಪರ್ ಮಾರ್ಟ್, ಅಂಜನಾದ್ರಿ ಟವರ್, ಆಗುಂಬೆ ರಸ್ತೆ, ತೀರ್ಥಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಸಮುದಾಯ ಭವನ, ಕನ್ನಿಕಾಪರಮೇಶ್ವರಿ ಕೊ-ಆಪರೇಟಿವ್ ಬ್ಯಾಂಕ್, ರಾಂ & ಕೊ ಸರ್ಕಲ್ ಹತ್ತಿರ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ.

Nidhi Aapke Nikat Programme ನಿವೃತ್ತರಾದಾಗ ಸಾಮಾಜಿಕ ಭದ್ರತೆ ಪ್ರಯೋಜನಗಳು/ಉಳಿತಾಯಗಳಿಗೆ ಪ್ರವೇಶವನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದ್ದರಿಂದ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಅಗತ್ಯಗಳನ್ನು ಪೂರೈಸುವ ಇಪಿಎಫ್‍ಒ ಎಲ್ಲಾ ಜಿಲ್ಲೆಗಳಲ್ಲಿ ಹೆಜ್ಜೆಗುರುತು ಮತ್ತು ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದು ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರನ್ನು ಒಳಗೊಳ್ಳುವ, ಒಗ್ಗೂಡಿಸುವ, ವಿಶಾಲ ಆಧಾರಿತ ಭಾಗವಹಿಸುವಿಕೆಯ ಅರಿವು ಮತ್ತು ಔಟ್‍ರೀಚ್ ಕಾರ್ಯಕ್ರಮವಾಗಿದೆ ಮತ್ತು ಎಲ್ಲಾ ಮಧ್ಯಸ್ಥಗಾರರ ಕುಂದುಕೊರತೆ ಪರಿಹಾರ ವೇದಿಕೆಯಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಮಿಷನರ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...