Wednesday, April 23, 2025
Wednesday, April 23, 2025

Mysuru Dasara Ambari Elephant Balarama no More ಅಂಬಾರಿ ಚಾಂಪಿಯನ್ ಬಲರಾಮ ಇನ್ನಿಲ್ಲ

Date:

Mysuru Dasara Ambari Elephant Balarama no More ನಮ್ಮ ಬಲರಾಮ ಹದಿನಾಲ್ಕು ದಸರೆಯ ಹಬ್ಬಗಳನ್ನ ನೋಡಿ ನಲಿದಿದ್ದ. ಅಂದರೆ ಅವನು ಮೊದಲು ದಸರೆಗೆ ಬಂದಾಗ ಅವನಿಗೆ ಐವತ್ಮೂರು ವರ್ಷ ವಯಸ್ಸು. ಮುಂಚಿನ ವರ್ಣಮಯ ನಾಡಹಬ್ಬದಲ್ಲಿ ನಾಡದೇವಿ ಶ್ರೀಚಾಮುಂಡೇಶ್ವರಿಯನ್ನ ಹೊತ್ತು ಅಂಬಾರಿ ಸೇವೆಗೈದ ಮಹಾಜೀವಿ,ಬಲರಾಮ.

ಈಗ್ಯೆ ಬಹಳ ದಿನಗಳಿಂದ ಆರೋಗ್ಯ ಕ್ಷೀಣಿಸಿ ನೆಲಹಿಡಿದಿದ್ದ. ವೈದ್ಯರೂ ಅವನ ಬಳಿಯೇ ಡೇರೆ ಹೂಡಿ ಚಿಕಿತ್ಸೆ ನೀಡುತ್ತಿದ್ದರು.
ಡಾ.ರಮೇಶ್ ಅವರು ಅವನ ಆಪ್ತ ವೈದ್ಯರು. ಬಾಯಿಯಲ್ಲಿ ಹುಣ್ಣಾಗಿತ್ತಂತೆ. ಅದು ಕ್ಷಯವಾಗಿರಬಹುದು ಎಂಬುದು ಅವರ ಹೇಳಿಕೆ.

ಆಹಾರ ನೀರು ಏನನ್ನೂ ಸೇವಿಸದ ಸ್ಥಿತಿಯಲ್ಲಿ ನಿತ್ರಾಣಗೊಂಡಿದ್ದ.
ದಸರೆಯಲ್ಲಿ ಅವನ ಗಜಗಾಂಭೀರ್ಯ
ನಡಿಗೆ ಮೆಚ್ಚದವರಿಲ್ಲ. ಎಲ್ಲರ ಕಣ್ಮನಗಳನ್ನ ಸೆಳೆದ ಬಲರಾಮ
ತೀರಿಕೊಂಡ ಸುದ್ದಿ ಕೇಳಿ ಬಹಳ ಬೇಸರವಾಯಿತು.

Mysuru Dasara Ambari Elephant Balarama no More ಬಲರಾಮ,ಆನೆಯಾದರೂ ಅವನೊಂದಿಗೆ
ಮನುಷ್ಯರ ಒಡನಾಟ ಮರೆಯುವಂತಿಲ್ಲ.
ಮಾವುತರೂ ಪಕ್ಕದಲ್ಲಿದ್ದರು.
ಮೃತ್ಯು ಬಂದಾಗ ಯಾರಿದ್ದರೇನು ?
ಬಲರಾಮ ಕೊನೆಯುಸಿರೆಳೆದ.
ಬಲರಾಮನ ಆತ್ಮಕ್ಕೆ ಚಿರಶಾಂತಿ ಸಿಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...