Friday, April 18, 2025
Friday, April 18, 2025

Kannada Sahitya Parishath: ಬುದ್ಧ ತತ್ವಗಳನ್ನ ಅರ್ಥೈಸುತ್ತಾಹೋದಾಗ ಸ್ವಯಂ ವಿವೇಕ ಪಡೆಯಲು ಸಾಧ್ಯ-ಸಿರಾಜ್

Date:

Kannada Sahitya Parishath: ನಮ್ಮೆಲ್ಲರ ಎದೆಗಳಲ್ಲಿ ಶೂಲಗಳು ಜಳಪಿಸುತ್ತಿವೆ. ಇನ್ನೊಬ್ಬರನ್ನು ಅಸಹನೆಯಿಂದ, ಆತಂಕದಿಂದ ನೋಡುವ ಸಂದರ್ಭದಲ್ಲಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಬುದ್ಧನನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಅಗತ್ಯವಿದೆ. ಬುದ್ಧನ ಪ್ರತಿಮೆಯ ಮುಂದೆ ನಿಂತು ಆ ಮುಖದಲ್ಲಿನ ಪ್ರಶಾಂತತೆ ಎಲ್ಲರೊಳಗೂ ಬೆಳಕಾಗುವ ಶಕ್ತಿ ಹೊಂದಿದೆ. ಜನರು ನಿತ್ಯ ಬಯಸುವುದು ಅದನ್ನೇ ಎಂದು ವಿವರಿಸಿದವರು.

ಪ್ರಾಧ್ಯಾಪಕರಾದ ಡಾ. ಸಿರಾಜ್ ಅಹಮದ್ ಅವರು ,ಶಿವಮೊಗ್ಗ ನಗರಕ್ಕೆ ಸಮೀಪವಿರುವ ಶಕ್ತಿಧಾಮ ಬಡಾವಣೆಯ ಎರಡನೇ ಹಂತದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಮತ್ತು ಶಕ್ತಿ ಧಾಮ ಬಡಾವಣೆಯ ಎರಡನೇ ಹಂತದ ನಿವಾಸಿಗಳ ಸಂಘದ ಸಹಯೋಗದಲ್ಲಿ 212 ನೆಯ ತಿಂಗಳ ಸಾಹಿತ್ಯ ಹುಣ್ಣಿಮೆ ಮತ್ತು ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬುದ್ಧನ ತತ್ವಗಳನ್ನು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಸ್ವಯಂ ವಿವೇಕ ಪಡೆಯಲು ಸಾಧ್ಯ. ಅವರೇ ಹೇಳುವಂತೆ ನೀನು ಯಾರ ಅನುಯಾಯಿ ಆಗಬೇಕಿಲ್ಲ. ನಿನ್ನನ್ನು ನೀನು ಅರಿಯುವಂತಾದರೆ ಅದೇ ಮೋಕ್ಷಪ್ರಾಪ್ತಿಯ ದಾರಿ ಆಗಲಿದೆ. ಸ್ವಯಂ ಅರಿವು ಪಡೆಯಬೇಕು. ಮೂಢನಂಬಿಕೆ ತೊರೆ ಎನ್ನುವ ಅವರ ಮಾತುಗಳನ್ನು ವಿವರಿಸಿ ಹೇಳಿದರು.

ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿದರು. ಕಡ್ಡಾಯ ಮತದಾನ ಮಾಡಿ ಎಂದು ಜಾಗೃತಿ ಗೊಳಿಸಿದವಳು‌ ಬಾಲಪ್ರತಿಭೆ ಅನುಷಾ ಹಿರೇಮಠ ಅವರು. ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡುವಾಗ ಸಂಬಂಧ ಹುಡುಕುವಂತೆ ನಮ್ಮ ದೇಶದ ಭವಿಷ್ಯ ಯಾರ ಕೈಗೆ ಕೊಡಬಹುದು ಎಂಬುದನ್ನು ಯೋಚನೆ ಮಾಡಬೇಕು. ಉತ್ತಮ ವ್ಯಕ್ತಿ, ಸಮರ್ಥ ಅಭ್ಯರ್ಥಿಗೆ ಮತನೀಡಿ ಎಂದು ವಿನಂತಿಸಿದಳು.

Kannada Sahitya Parishath: ಸಾಕೇತ್ ಶಾಸ್ತ್ರಿ, ಕೀರ್ತಿಕಾ ಕನ್ನಡ ಗೀತೆಗಳನ್ನು ಹಾಡಿದರು. ಅನ್ನಪೂರ್ಣ ಸತ್ಯನಾರಾಯಣ, ಅಮೃತ ಶಿಶಿರಾ, ಜಯಲಕ್ಷ್ಮಿ ಜಿ. ಅಣ್ಣಿಗೇರಿ ತಂಡದವರು ಭಜನೆ ಹಾಡಿದರು.

ಕವಿಗಳಾದ ಡಾ. ಕೆ.ಎಸ್. ಗಂಗಾಧರ, ಬಿ.ಟಿ. ಅಂಬಿಕಾ, ಶಾಹಿರಾ ಭಾನು, ಶ್ರೀನಿವಾಸ ನಗಲಾಪುರ, ಪಿ.ಕೆ. ಸತೀಶ್, ರಚಿತಾ ಚೇತನ ಕವನ ವಾಚಿಸಿದರು. ಪಂಕಜಾ ಗೋಪಾಳ ಹನಿಗವನ ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....