- Interesting Election News ಚುನಾವಣೆ ಸೀಸನ್ ಅಂದ್ರೆ ಅಕ್ರಮಗಳಿಗೂ ಅವಕಾಶ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈಗ ಮಧ್ಯಗಳದ್ದೇ ಕಾರುಬಾರು. ಜೊತೆಗೆ ಅಕ್ರಮವಾಗಿ ಸಾಧಿಸುತ್ತಿದ್ದ, ನಗದು ಚಿನ್ನಾಭರಣಗಳು ಸೇರಿವೆ. ಒಟ್ಟಾರೆ ಈಗ 36 ಕೋಟಿ ರೂಪಾಯಿ ಮೌಲ್ಯದ ಹಣ ಜಪ್ತಿ ಮಾಡಲಾಗಿದೆ ಎಂದು ಚಿಕ್ಕಮಗಳೂರು ಎಸ್ ಪಿ ಉಮಾ ಪ್ರಶಾಂತ್ ಅವರು ತಿಳಿಸಿದ್ದಾರೆ.
*ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಸೋಮಣ್ಣ ಅವರ ಸಂಗಡ ಕಿಚ್ಚ ಸುದೀಪ್ ಪ್ರಚಾರಕ್ಕೆ ನಿಂತಿದ್ದಾರೆ. ಆದರೆ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್ ಆಗಮಿಸಿರುವುದು ಅವರಿಗೆ ಇರಿಸು ಮುರಿಸಾಗಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 11ಮಂದಿ ಅಭ್ಯರ್ಥಿಗಳಿದ್ದಾರೆ. ಸ್ಪರ್ಧಿ ತೀವ್ರ ಬಿರುಸು ಅನ್ನುತ್ತೀರಾ! ಆದರೆ, ಸದ್ಯಸ್ಪರ್ಧೆ ಇರುವುದು ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ. ಮಿಕ್ಕ ಎಂಟು ಮಂದಿ ನಾಮಕಾವಸ್ಥೆ ಎಂದು ಜನರ ಅಭಿಪ್ರಾಯ.
*ಈ ಬಾರಿ ಸಾಗರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೀವ್ರತರ ಸ್ಪರ್ಧೆ ಕಂಡುಬಂದಿದೆ. ಹಾಲಿ ಶಾಸಕ ಹರತಾಳು ಹಾಲಪ್ಪ ಅವರೆದರು ಕಾಂಗ್ರೆಸ್ ನ ಬೇಳೂರು ಗೋಪಾಲಕೃಷ್ಣ ನಿಂತಿದ್ದಾರೆ.
ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ, ಬೇಳೂರು ಬೆಂಬಲಕ್ಕೆ ಇದ್ದಾರೆ. ಈ ನಡುವೆ ಆಮ್ ಆದ್ಮಿಯ ದಿವಾಕರ್ ಕೂಡ ಸ್ಪರ್ಧಿಸಿ ಚುನಾವಣೆಗೆ ಮತ್ತಷ್ಟು ಕುತೂಹಲಕರವಾಗುವಂತೆ ಮಾಡಿದ್ದಾರೆ.
- Interesting Election News ಶಿಕಾರಿಪುರ ಇಡೀ ರಾಜ್ಯದ ಇಡೀ ಗಮನ ಸೆಳೆದಿದೆ. ಈ ಸಾರಿ ಬಿ ಎಸ್ ವೈ ಸ್ಪರ್ಧಿಸಿಲ್ಲ. ಬಿ. ವೈ .ಎಸ್ ಅವರ ಪುತ್ರ ಬಿ ವೈ ವಿಜಯೇಂದ್ರ ಕಣದಲ್ಲಿದ್ದಾರೆ. ಕಾಂಗ್ರೆಸ್ ಹಳೆ ಅಭ್ಯರ್ಥಿ ಗೋಣಿ ಮಾಲ್ತೇಶ್ ಅವರಿಗೆ ಟಿಕೆಟ್ ನೀಡಿದೆ. ಅಂದರೆ ಜೆಡಿಎಸ್ ಅಭ್ಯರ್ಥಿ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಾಗರಾಜೇಗೌಡ ಕಣದಲ್ಲಿದ್ದಾರೆ. ಜೆಡಿಎಸ್ ನಾಗರಾಜೇಗೌಡ ಅವರಿಗೆ ಬೆಂಬಲಿಸಿದೆ.
*ರಾಜ್ಯದ ಚುನಾವಣಾ ಕಣದಲ್ಲಿ ಕಿರಿಯ ವಯಸ್ಸಿನ ಅಭ್ಯರ್ಥಿಗಳ ವಯಸ್ಸು 25 ವರ್ಷ. ಅತ್ಯಂತ ಹಿರಿಯ ಅಭ್ಯರ್ಥಿ ಎಂದರೆ 91 ವರ್ಷ ವಯಸ್ಸಿನ ಶ್ರೀ. ಶಾಮನೂರು ಶಿವಶಂಕರಪ್ಪ .
