Wednesday, May 6, 2026
Wednesday, May 6, 2026

Online Application Invitation ಅನುದಾನ ರಹಿತ ಕಾಲೇಜು ಆರಂಭಿಸಲು ಅನುಮತಿಗೆ ಕುವೆಂಪು ವಿವಿಯಿಂದ ಆನ್ ಲೈನ್ ಅರ್ಜಿ ಆಹ್ವಾನ

Date:


Online Application Invitation ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2023-24 ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ದೈಹಿಕ ಶಿಕ್ಷಣ, ಬಿ.ವೋಕ್ ವೃತ್ತಿಪರ ವಿಷಯಗಳು ಹಾಗೂ ಡಿಪ್ಲೋಮಾ ಕೋರ್ಸ್ ವಿಷಯಗಳ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಡೆಸಲು ಆರ್ಥಿಕ ಸಾಮರ್ಥ್ಯವುಳ್ಳ ನೋಂದಾಯಿತ ಶೈಕ್ಷಣಿಕ ಸೊಸೈಟಿ, ಸಾರ್ವಜನಿಕ ಟ್ರಸ್ಟ್/ ಸಂಸ್ಥೆ ಗಳಿಂದ ನವೀನ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೋಂದಾಯಿತ ಶೈಕ್ಷಣಿಕ ಸೊಸೈಟಿ, ಸಾರ್ವಜನಿಕ ಟ್ರಸ್ಟ್/ ಸಂಸ್ಥೆಗಳಿಂದ ನವೀನ ಸಂಯೋಜನೆಗಾಗಿ ಅರ್ಜಿಗಳನ್ನು UUCMS  ತಂತ್ರಾAಶದಲ್ಲಿ http://uucms.karnataka.gov.in ಮೂಲಕ ಸಲ್ಲಿಸಿ, ನಂತರ ಡೌನ್‌ಲೋಡ್ ಮಾಡಿಕೊಂಡ ಹಾರ್ಡ್ ಪ್ರತಿಯನ್ನು ಪೂರಕ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ನಿರ್ದೇಶಕರು, ಕಾಲೇಜು ಅಭಿವೃದ್ಧಿ ಪರಿಷತ್ ವಿಭಾಗ,  ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451 ಇವರಿಗೆ ಸಲ್ಲಿಸಬೇಕು. 


Online Application Invitation ದಂಡಶುಲ್ಕವಿಲ್ಲದೆ ಮೇ-13 ರೊಳಗಾಗಿ ಹಾಗೂ ರೂ. 15,000 ದಂಡಶುಲ್ಕದೊAದಿಗೆ ಮೇ 15ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಷ್ಕೃತ ಸಂಯೋಜನೆ ಶುಲ್ಕವನ್ನು UUCMS ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಹಣಕಾಸು ಅಧಿಕಾರಿಗಳು, ಕುವೆಂಪು ವಿವಿ, ಶಂಕರಘಟ್ಟ, ಸಂಯೋಜನಾ ಖಾತೆ ಸಂ.: 54023035811 ಎಸ್.ಬಿ.ಐ, ಜ್ಞಾನ ಸಹ್ಯಾದ್ರಿ ಶಾಖೆ, ಶಂಕರಘಟ್ಟ, ಇಲ್ಲಿಗೆ ಜಮಾ ಮಾಡುವಂತೆ ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ 577451 ಶಿವಮೊಗ್ಗ ಜಿಲ್ಲೆ. ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಾಹಿತಿಗಳನ್ನು ವಿಶ್ವವಿದ್ಯಾಲಯದ ಸಿಬ್ಬಂದಿ ಡಾ.ಕೆ.ಎನ್.ಶ್ರೀಕಾಂತ್ -9980377886 ನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. R. Periyakaruppan ಒಂದೇ ಒಂದು ಮತದ ಅಂತರದಲ್ಲಿ ಸೋತ (ಮಂತ್ರಿ) ಡಿಎಂಕೆ ಅಭ್ಯರ್ಥಿ ಪೆರಿಯಾಕರುಪ್ಪನ್.

ಒಂದು ಮತ ತಾನೆ. ಎಂಬ ನಿರ್ಲಕ್ಷ್ಯ ಬಹಳ ಅಭ್ಯರ್ಥಿಗಳಲ್ಲಿದೆ. ಆದರೆ ಆ...

Ballari News ಪಾರಾಗುವ ಬಗೆ ಹೇಗೆ?. ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ನೀಡಿರುವ ಮಾಹಿತಿ ಎಲ್ಲರಿಗೂ ಅನ್ವಯ

Ballari News ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ...

S.N. Channabasappa ಪಶುವೈದ್ಯಕೀಯ ಮತ್ತು‌ ಮೀನುಗಾರಿಕೆ ವಿಜ್ಞಾನ ವಿವಿಗಳ ನೌಕರರಿಗೆ ನೀಡುತ್ತಿರುವ ಎನ್ ಪಿ ಎ ಕಡಿತ: ಶಾಸಕ ಚೆನ್ನಿ ಅವರಿಂದ ಖಂಡನೆ

S.N. Channabasappa "ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ...

Summer ಬೇಸಿಗೆಯ ಬಿರುಬಿಸಿಲು!. ಜಾನುವಾರು ರಕ್ಷಣೆಗೆ ಪಶುವೈದ್ಯಕೀಯ ಕಾಲೇಜಿನ ತಜ್ಞರ ಮಾರ್ಗದರ್ಶನ – ಮಾಹಿತಿ ಇಲ್ಲಿದೆ.

Summer ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲ ಧಗೆ ಹೆಚ್ಚಾಗುವ...