Environmental Awareness ಪರಿಸರ ಸಂರಕ್ಷಣೆಗಾಗಿ ಜಾರಿಗೆ ಬಂದ ದಿನವನ್ನು ಭೂಮಿ ದಿನ ಎಂದು ಕರೆಯಲಾಗುತ್ತದೆ. ವರ್ಷ ಏಪ್ರಿಲ್ 22ರಂದು ಹೊಸದಾದ್ಯಂತ ಆಚರಿಸಲಾಗುತ್ತದೆ. 1970ರಲ್ಲಿ ಪ್ರಥಮ ಭೂಮಿ ದಿನವನ್ನು ಪ್ರಾರಂಭಿಸಲಾಗಿದೆ. ಇದೀಗ ಸುಮಾರು 193 ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಹಾಗೆಯೇ ವಿಶೇಷವಾಗಿ ಪರಿಸರ ವಿಜ್ಞಾನ ಧ್ವಜವನ್ನು ಸಹ ಜಾನ್ ಮೆಕ್ಕಾನೆಲ್ ಅವರಿಂದ ಹಾರಿಸಲ್ಪಟ್ಟಿತ್ತು. ಈ ದಿನದ ಸೂಕ್ತ ಮಹತ್ವವೆಂದರೆ ಪರಿಸರ ರಕ್ಷಣೆಗಾಗಿ ಬೆಂಬಲ ನೀಡಲು. ಮೂಲತಹ ಈ ದಿನ ಆರಂಭಿಸಲು ನಿಲುವು ತೆಗೆದುಕೊಂಡ ರಾಷ್ಟ್ರ ಅಮೆರಿಕ. ಕಾರಣವೇನೆಂದರೆ ಹೆಚ್ಚಾಗುತ್ತಿರುವ ಕೈಗಾರಿಕೆಗಳಿಂದ ವಾತಾವರಣ ಕೆಡುತ್ತಿದೆ.ಮೊದಲು ಪರಿಸರ ಪ್ರೇಮಿಗಳಿಂದ ಚಳುವಳಿ ನಡೆಯಿತು. ನಂತರದ ದಿನಗಳಲ್ಲಿ ಅಪಾರ ಮಹತ್ವವನ್ನು ಪಡೆದು ಭೂಮಿ ದಿನವೂ. ನಾಗರಿಕರೆಲ್ಲರೂ ಸಹ ಪರಿಸರದ ಕಡೆಗೆ ಗಮನ ನೀಡದಿದ್ದರೆ ಭೂಮಿಯ ಮೇಲೆ ಉಳಿಗಾಲವಿಲ್ಲ ಎಂದು ಅರಿತುಕೊಂಡು ಎಲ್ಲೆಡೆ ಆಚರಣೆ ಮಾಡಲು ಪ್ರಾರಂಭಿಸಿದರು. ಮಾಲಿನ್ಯ ತಡೆಗಾಗಿ ಸರ್ಕಾರವು ನಿಯಮಗಳನ್ನು ರಚಿಸಿ ಪರಿಸರ ರಕ್ಷಣೆ. ಭೂಮಿ ಸಂರಕ್ಷಣೆಗೆ ಒತ್ತು ನೀಡಿತ್ತು.
ಹೀಗೆ ಉದ್ದೇಶಪೂರ್ವಕವಾಗಿ ಜಾರಿಗೆ ಬಂದ ಭೂಮಿ ದಿನವೂ ಕೊನೆಗೆ ಕೇವಲ ಏಪ್ರಿಲ್ 22ರಂದು ಮಾತ್ರ ಆಚರಿಸುವ ದುರ್ದೇವ ಮನಸ್ಥಿತಿ. ಆಧುನಿಕ ಜನತೆಯ ಮನಸ್ಸಿಗೆ ತಲುಪಿದೆ. ಆದರೆ ಸಾಮಾನ್ಯರು ಆಚರಿಸುವ ಎಲ್ಲಾ ಆಚರಣೆಗಳಲ್ಲಿಯೂ ಹುಡುಗರ ನೀಡುವ ಬದಲು ಒಂದು ಮರದ ಗಿಡ ನೀಡಬಹುದಲ್ಲವೇ.
ನಾವು ನಾಗರಿಕರು ದೊಡ್ಡ ದೊಡ್ಡ ನಿಲುವುಗಳನ್ನು ತೆಗೆದುಕೊಳ್ಳಬೇಕೆಂದಿಲ್ಲ. ಸಣ್ಣ ಬದಲಾವಣೆ ಕೂಡ ಪರಿಸರದ ಒಳತಿಗಾಗಿ ಕಾರಣ ಆಗುತ್ತದೆ. ವ್ಯಾಪಾರ ದೃಷ್ಟಿಯಲ್ಲಿ ಕೈಗಾರಿಕಾ ವ್ಯವಹಾರ ಮತ್ತು ಆಧುನಿಕರಣಕ್ಕಾಗಿ ಪರಿಸರವನ್ನೇ ಬಳಸುತ್ತಿರುವುದು. ಒಂದು ರೀತಿಯಲ್ಲಿ ಒಪ್ಪುವಂತಹ ವಿಷಯ. ಆದರೆ ಸ್ವಲ್ಪ ಕಾಳಜಿಯನ್ನು ನಮ್ಮ ಪರಿಸರ ನಾವು ಬದುಕುತ್ತಿರುವ ಆವಾಸವಿದೆ ಎಂದು ಯೋಚಿಸುವ ಅವಶ್ಯಕತೆ ಇದೆ.
ಪರಿಸರ ಕಾಪಾಡಿಕೊಳ್ಳದಿದ್ದರೆ ಪ್ರತಿಯೊಬ್ಬರೂ ಸಹ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಕಡಿಮೆ ಮಳೆ ಯಾಗುವುದು ತಾಪಮಾನವು ಊಹೆ ಗಿಂತ ಹೆಚ್ಚಾಗಿರುವುದು. ಅರಣ್ಯ ನಾಶಗಳಾಗಿವೆ. ನಿಮ್ಮೆಲ್ಲರಿಗೂ ಸಹ ಈಗಿನ ಭೂತಕಾಲದಲ್ಲಿ ಕಾಣಬಹುದಾಗಿದೆ. ನಾಗರಿಕನ ಸಾಮಾನ್ಯ ಕೊಡುಗೆ ಭೂಮಿಗೆ ನೀಡುವುದಾದರೆ. ದೈನಂದಿನ ದಿನಗಳಲ್ಲಿ ಕಡಿಮೆ ಮಾಡುವುದು. ಮರುಬಳಕೆಯಾಗುವಂತಹ ವಸ್ತುಗಳನ್ನು ಬಳಸುವುದು. ಕಸದಿಂದ ಸಾವಯವ ಗೊಬ್ಬರ ತಯಾರಿಸುವುದು. ನಿವಾಸದ ಮುಂದೆ ಚಿಕ್ಕದಾದರೂ ಗಾರ್ಡನ್ ಮಾಡಿ. ವಾಹನ ಬಳಕೆ ಕಡಿಮೆ ಮಾಡುವುದು ಸಹವಾಯಿ ಮಾಲಿನ್ಯಕ್ಕೆ ಅನುಕೂಲವಾಗುತ್ತದೆ.
Environmental Awareness ಈ ಭೂಮಿಯ ಜೀವಿಗಳಾದ ನಾವು ಪಾಲುದಾರರು ಸಹ ಆಗಿರುವುದರಿಂದ ” ಪರಿಸರ ಸಂರಕ್ಷಣೆ. ಪ್ರತಿಯೊಬ್ಬ ನಾಗರಿಕನ ಕರ್ತವ್ಯದ ಹೊಣೆ”.
ಬರಹ : ಭಾರ್ಗವಿ , ವಿದ್ಯಾರ್ಥಿನಿ , ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗ