ಶಿವಮೊಗ್ಗ ಕ್ಷೇತ್ರ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಅವರ ಸಾಮಾಜಿಕ ಜಾಲತಾಣದ ನಿರ್ವಾಹಕ ಪ್ರಸನ್ನ ಭಟ್ ಅವರು ವಿಧಿವಶರಾಗಿದ್ದಾರೆ. ಅವರ ಅಂತಿಮ ಯಾತ್ರೆಯು ಮಾವಿನಕೊಪ್ಪದಿಂದ ಹೊಸನಗರದ ನೆಹರು ಮೈದಾನದವರೆಗೆ ನಡೆಯಿತು. ನಂತರ ಪ್ರಸನ್ನ ಭಟ್ ಅವರ ಮನೆಯ ಹತ್ತಿರ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ಗಣ್ಯಾತಿಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು. ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಕೇಂದ್ರ ಕೃಷಿ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಇಡೀ ಗ್ರಾಮದ ತುಂಬಾ ದುಃಖ ಮಡುಗಟ್ಟಿತ್ತು.