ರಾಜಸ್ಥಾನದ ಉದಯಪುರದಲ್ಲಿ ಜಿ20 ದೇಶಗಳ ಮೊದಲ ಹಂತದ ಶೆರ್ಪಾಗಳ ಸಭೆಯನ್ನು ಭಾರತ ಮುಗಿಸಿದೆ.
ಈಗ 2ನೇ ಹಂತದಲ್ಲಿ ಬೆಂಗಳೂರಿನಲ್ಲಿ ಜಿ20 ದೇಶಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್‌ಗಳ ಪ್ರತಿನಿಧಿಗಳ ಸಭೆ ನಡೆಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ನೇತೃತ್ವದ ಜಿ-20 ಫೈನಾನ್ಸ್ ಟ್ರ್ಯಾಕ್ ಬಂಡವಾಳ ಮತ್ತು ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮ ಕಾರಿ ವೇದಿಕೆ ಒದಗಿಸಲಿದೆ.
2023ರ ಫೆ. 23ರಿಂದ 25ರ ವರೆಗೆ ಬೆಂಗಳೂರಿನಲ್ಲಿ ಹಣ ಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆ ನಡೆಯಲಿದೆ.ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಫೈನಾನ್ಸ್ ಟ್ರ್ಯಾಕ್ ನ ಕಾರ್ಯಸೂಚಿಯ ಮೇಲಿನ ಚರ್ಚೆಗಳ ಆರಂಭವನ್ನು ಸೂಚಿಸುವ ಈ ಸಭೆಯನ್ನು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜಂಟಿಯಾಗಿ ಆಯೋಜಿಸಿವೆ.
ಭಾರತವು ಈ ಶೃಂಗಸಭೆಯ ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ಅನಂತರ ನಡೆಯಲಿರುವ ಸಭೆಗಳ ಪೈಕಿ ಎರಡು ಸಭೆಗಳು ಉದ್ಯಾನ ನಗರಿಯಲ್ಲಿ ನಿಗದಿಯಾಗಿವೆ. ಇದರಲ್ಲಿ ಎಫ್ಸಿಬಿಡಿ ಸಭೆ ಡಿ. 13ರಿಂದ 15ರ ವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.