Thursday, February 13, 2025
Thursday, February 13, 2025

ಖಾಸಗಿ ಸಂಸ್ಥೆ ನೌಕರರ ನಿವೃತ್ತಿ ವಯೋಮಿತಿ ಏರಿಕೆಹೈಕೋರ್ಟ್ ಸಮ್ಮತಿ

Date:

ಖಾಸಗಿ ವಲಯದ ನೌಕರರ ನಿವೃತ್ತಿಯ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಾರವಾಡ ಹೈಕೋರ್ಟ್ ನ್ಯಾಯಪೀಠವು ಎತ್ತಿ ಹಿಡಿದಿದೆ. ಈ ಮೂಲಕ ಖಾಸಗಿ ನೌಕರರ ನಿವೃತ್ತಿಯ ವಯಸ್ಸು ಏರಿಕೆಗೆ ಅಸ್ತು ಎಂದಿದೆ.

ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ ನೌಕರರ ನಿವೃತ್ತಿ ವಯಸ್ಸು ಏರಿಸಿ, ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಕಂಪನಿಯು ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿತ್ತು.

ಕಂಪನಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು 2021, ಸೆಪ್ಟೆಂಬರ್ 17ರಂದು ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧದ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೇ 2018ರ ಮಾರ್ಚ್ 17 ಅಥವಾ ನಂತರದಲ್ಲಿ 59 ವರ್ಷಗಳನ್ನು ಪೂರೈಸಿ ನಿವೃತ್ತರಾದವರಿಗೆ ನಿವೃತ್ತಿ ದಿನಾಂಕ ಹಾಗೂ ಅವರು 60 ವರ್ಷ ತಲುಪಿದ ದಿನಾಂಕದ ನಡುವಿನ ಅವಧಿಗೆ ಶೇ.50ರಷ್ಟು ವೇತನವನ್ನು ಮರುಪಾವತಿ ಮಾಡಬೇಕು ಎಂದು ಮೇಲ್ಮನವಿದಾರರಿಗೆ ಸೂಚಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಫೆ.14. ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರದ ಆಲ್ಕೋಳ ವಿ.ವಿ.ಕೇಂದ್ರದಿಂದ ತುರ್ತು ಕಾಮಗಾರಿ ಇರುವುದರಿಂದ ಫೆ.14...

Shri Sewalal Jayanti ಶ್ರೀ ಸೇವಾಲಾಲ್ ಜಯಂತಿಗೆ ಸರ್ವ ಸಿದ್ಧತೆ

Shri Sewalal Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ,...

MESCOM ಫೆ.15. ಮಾಚೇನಹಳ್ಳಿ‌‌ ಸುತ್ತಮುತ್ತ ವಿದ್ಯುತ್ಸರಬರಾಜು ವ್ಯತ್ಯಯ

MESCOM ಫೆ. 15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6...

Rajnath Singh ರಕ್ಷಣಾ ಉತ್ಪನ್ನಗಳಲ್ಲಿ ನಮ್ಮದೇ ‌ಉತ್ಪಾದನೆ ಹೊಸ‌ಮೈಲಿಗಲ್ಲು- ರಕ್ಷಣಾ ಸಚಿವ‌ ರಾಜನಾಥ್ ಸಿಂಗ್

Rajnath Singh ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿ ನಾವೇ ಉತ್ಪಾದನೆ ಮಾಡುತ್ತಿದ್ದು, ಹೊಸ...