ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಹೈದರಾಬಾದ್‌ನಲ್ಲಿ ಟಿ-ಹಬ್ ನ ಎಂಬ ಹೊಸ ಐಟಿ ಹಬ್ ಅನ್ನು ಉದ್ಘಾಟಿಸಿದ್ದಾರೆ.
ಇದು ಸ್ಟಾರ್ಟ್ ಅಪ್‌ಗಳಿಗಾಗಿ ನಿರ್ಮಿಸಲಾದ ವಿಶ್ವದ ಅತಿದೊಡ್ಡನಾವೀನ್ಯತೆ ಕ್ಯಾಂಪಸ್ ಎಂದು ಸರ್ಕಾರ ಹೇಳಿಕೊಂಡಿದೆ.
ಬರೋಬ್ಬರಿ 5.82 ಲಕ್ಷ ಚದರ ಅಡಿ ವಿಸ್ತೀರ್ಣದ ಕ್ಯಾಂಪಸ್ ಅನ್ನು ಟಿ ಆಕಾರದಲ್ಲಿ ನಿರ್ಮಿಸಲಾಗಿದೆ. ಈ ಕಾರಣಕ್ಕೆ ಇದನ್ನು ಟಿ ಹಬ್ ಎನ್ನಲಾಗ್ತಿದೆ. ಇನ್ನೊಂದು ಅರ್ಥದಲ್ಲಿ ಟೆಕ್ನಿಕಲ್ ಹಬ್ ಎಂದೂ ಹೇಳಬಹುದು.
ಒಟ್ಟು10 ಮಹಡಿಗಳ ಟಿ ಹಬ್ ಕಟ್ಟಡದಲ್ಲಿ, ಇವಿಎಂಗಳು, ಮೊಬಿಲಿಟಿ, ಡೀಪ್ ಟೆಕ್ನಿಕ್ ಮತ್ತು ಗೇಮಿಂಗ್ ಸೇರಿದಂತೆ ಹಲವು ತಂತ್ರಜ್ಞಾನ ಸೌಲಭ್ಯಗಳು ಇವೆ. ಮುಂದಿನ 5
ವರ್ಷಗಳಲ್ಲಿ 20,000 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.