Sunday, October 11, 2026
Sunday, October 11, 2026

ಗೀಸರ್ ನೀರಿನಿಂದ ಜಳಕ: ಆರೋಗ್ಯಕ್ಕೆ ಹಾನಿಯೆ?

Date:

ಹಳ್ಳಿ ಜೀವನ ಸ್ವರ್ಗ ಅನ್ನೋದು ನಮಗೆಲ್ಲ ಗೊತ್ತಿರುವ ವಿಚಾರ. ಹಳ್ಳಿಗರ ಜೀವನ ಪದ್ಧತಿ ಕೂಡ ಅಷ್ಟೇ ಚೆನ್ನ. ಯಾಕ್ ಈ ವಿಚಾರ ಹೇಳುತ್ತಿದ್ದೇವೆ ಎಂದರೆ, ಚುಮು ಚುಮು ಮಳೆಯಲ್ಲಿ ಹಂಡೆ ಯಲ್ಲಿ ಕಾದ ಬಿಸಿ ನೀರನ್ನು ಸ್ನಾನ ಮಾಡುವುದು ಹಳ್ಳಿಗರ ಅಭ್ಯಾಸ. ಆದರೆ, ಈ ಭಾಗ್ಯ ನಗರದಲ್ಲಿ ವಾಸಿಸುವ ಜನರಿಗೆ ಸಿಗಬೇಕೆ?

ಅಲ್ಲಿ ವಾಸಿಸುವ ಜನರ ಜೀವನ ಪದ್ಧತಿ ಎಲ್ಲವೂ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದೆ. ಸಿಟಿ ಜನರು ಹೆಚ್ಚಾಗಿ ಗಿಜರ್‌ ಬಳಸಿ ಸ್ನಾನ ಮಾಡೋದನ್ನು ಹೆಚ್ಚಾಗಿ ರೂಢಿಸಿಕೊಂಡಿರುತ್ತಾರೆ.

ಇದರಿಂದ ಎಷ್ಟು ಉಳಿತಾಯವೋ! ಅಷ್ಟೇ ಅಪಾಯಕಾರಿ. ಹೌದು, ಗೀಜರ್ ನೀರು ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಗ್ಯಾಸ್ ಸಿಲಿಂಡರ್ ಆಧಾರಿತ ಗೀಜರ್ ನಿಂದ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತಲೆ ಸುತ್ತು ಬರಬಹುದು ಎಂದು ಎ ಸಂಶೋಧನೆಯಿಂದ ತಿಳಿದು ಬಂದಿದೆ.

ಸಂಶೋಧಕರ ಪ್ರಕಾರ ಯಾರು ಗ್ಯಾಸ್ ಸಿಲಿಂಡರ್ ಕನೆಕ್ಟ್ ಮಾಡಿದ ಗೀಸರ್ ನಿಂದ ನೀರು ಕಾಯಿಸಿ ಸ್ನಾನ ಮಾಡುತ್ತಾರೋ, ಅವರಿಗೆ ಕೇವಲ ಜ್ಞಾನ ತಪ್ಪುವುದು ಮಾತ್ರವಲ್ಲ. ಜೊತೆಗೆ ಪಾರ್ಶ್ವವಾಯು, ಎಪಿಲೆಪ್ಸಿ, ಕಾರ್ಡಿಯಾಕ್ ಅರೆಸ್ಟ್, ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಎರಡು ವರ್ಷಗಳಿಂದ ನಿರಂತರವಾಗಿ 26 ಜನರ ಮೇಲೆ ಈ ಪ್ರಯೋಗವನ್ನು ಮಾಡಲಾಗಿದೆ. ಈ ಪ್ರಯೋಗದಿಂದ ತಿಳಿದುಬಂದಿರುವ ಅಂಶ ಇದಾಗಿದೆ.

ಕೆಲವು ಸಂಶೋಧಕರು ಹೇಳುವ ಹಾಗೆ ಗ್ಯಾಸ್ ಗೀಜರ್ ಇನ್ಸ್ಟಾಲೇಷನ್ ಮಾಡುವಾಗ ಅದರ ಮಾನದಂಡಗಳನ್ನು ಸರಿಯಾಗಿ ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ.

ಅಧ್ಯಯನ ಹೇಳುವ ಹಾಗೆ ಸಾಕಷ್ಟು ಪಾರ್ಶ್ವವಾಯು ಸಮಸ್ಯೆಗೆ ಗುರಿಯಾದ ರೋಗಿಗಳನ್ನು ಕೂಲಂಕು ಷವಾಗಿ ಅಧ್ಯಯನ ಮಾಡಿದಾಗ ಇದೊಂದು ಆಘಾತ ಸಂಗತಿ ಹೊರ ಬಂದಿದೆ. ಕೆಲವರ ದೇಹದಲ್ಲಿ ಕಾರ್ಬನ್ ಮಾನಾಕ್ಸೈಡ್ ಪಾಯಿಸನ್ ರೂಪದಲ್ಲಿ ಸೇರಿಕೊಂಡು, ಕಾರ್ಡಿಯಾಕ್ ಅರೆಸ್ಟ್ ಆದಂತಹ ಉದಾಹರಣೆಗಳು ಕೂಡ ಇವೆ.

*ಪಾರ್ಕಿನ್ಸನ್ ರೋಗಲಕ್ಷಣಗಳು ಏನೆಂದು ತಿಳಿದುಕೊಳ್ಳುವುದಾದರೆ,
ಇದಕ್ಕೆ ಕಾರಣ ಏನೆಂದು ಪತ್ತೆಹಚ್ಚಿದಾಗ, ಕೆಲವರ ಮನೆಗಳಲ್ಲಿ ತಾರಸಿಗೆ ಚಿಮಣಿ ಹಾಕದೆ ಗ್ಯಾಸ್ ಗೀಜರ್ ಇನ್ಸ್ಟಾಲ್ ಮಾಡಿರುತ್ತಾರೆ. ಇದರಿಂದ ಕಾರ್ಬನ್ ಮಾನಾಕ್ಸೈಡ್ ಅಲ್ಲೇ ಉಳಿದು ಜನರ ದೇಹ ಸೇರುವ ಸಾಧ್ಯತೆ ಇರುತ್ತದೆ. ಕೆಲವು ಜನರಿಗೆ ಪಾರ್ಕಿನ್ಸನ್ ಪ್ರಕಾರದ ರೋಗಲಕ್ಷಣಗಳು ಕಂಡುಬಂದಿದ್ದವು.
ಯಾವಾಗ ಸಿಲಿಂಡರ್ ಗ್ಯಾಸ್ ನಿಂದ ಬಿಡುಗಡೆಯಾದ ಗ್ಯಾಸ್ ಸ್ನಾನದ ಕೊಠಡಿಯಲ್ಲಿ ಇರುವಂತಹ ಗಾಳಿಯನ್ನು ತೆಗೆದುಕೊಂಡು ಬಳಿಕ ಕಾರ್ಬನ್ ಮಾನಾಕ್ಸೈಡ್ ಬಿಡುಗಡೆ ಮಾಡುತ್ತದೆ. ಅಲ್ಲಿಂದ ಮನುಷ್ಯರಿಗೆ ಕಾಯಿಲೆಗಳು ಹಾಗೂ ರೋಗಲಕ್ಷಣಗಳು ಆರಂಭವಾಗುತ್ತವೆ.

ಗ್ಯಾಸ್ ಗೀಜರ್ ಗಳಿಂದ ಉಂಟಾಗುವ ಸಮಸ್ಯೆ ಪ್ರಮುಖವಾಗಿ ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ಹೆಚ್ಚಾಗುವಂತೆ ಮಾಡುತ್ತದೆ. ಇದು ಸಾಮಾನ್ಯವಾಗಿ ತಲೆನೋವು, ತಲೆಸುತ್ತು ಮತ್ತು ಮರೆವು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.
ಕೆಲವರಿಗೆ ಇದರಿಂದ ಕೋಮ ಕೂಡ ಬರುವಂತಹ ಸಾಧ್ಯತೆ ಇರುತ್ತದೆ.

ಆದ್ದರಿಂದ ಗ್ಯಾಸ್ ಗೀಜರ್ ಇನ್ಸ್ಟಾಲೇಷನ್ ಪ್ರಕ್ರಿಯೆಯಲ್ಲಿ ಸರಿಯಾದ ಮಾನದಂಡಗಳನ್ನು ಅನುಸರಿಸುವುದು ಒಳಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...