Thursday, July 9, 2026
Thursday, July 9, 2026

ಕಾಂಗ್ರೆಸ್ ಗೆ ಕಾಯಕಲ್ಪ ನೀಡಲುಹಿರಿಯ ಕಾಗೋಡು ತಿಮ್ಮಪ್ಪ ಕರೆ

Date:

ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದ ಪರಿಣಾಮ ಕಾರ್ಯಕರ್ತರಲ್ಲಿ ಬೇಜವಾಬ್ದಾರಿತನ ಬಂದಿದೆ.‌
ಇದರಿಂದ ಪಕ್ಷವನ್ನು ಈಗ ಬೂತ್ ಮಟ್ಟದಿಂದ ಕಟ್ಟಬೇಕಿದೆ. ಪ್ರಮುಖ ಕಾರ್ಯಕರ್ತರಿಗೆ ತಿಳಿವಳಿಕೆ ಮತ್ತು ಜಾಗೃತಿ ನೀಡುವ ಉದ್ದೇಶದಿಂದ ಶಿಬಿರ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿದೆ. ಇದರಿಂದ ಪಕ್ಷವನ್ನು ಸದೃಢಗೊಳಿಸಲು ನವ ಸಂಕಲ್ಪ ಚಿಂತನಾ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಸಾಗರದಲ್ಲಿ ನಡೆದ ಜಿಲ್ಲಾಮಟ್ಟದ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ‌ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ತೀರ ಕೆಳಮಟ್ಟದಿಂದ ಸಂಘಟಿಸುವ ಅವಶ್ಯಕತೆ ಇದೆ.‌ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷವಾಗಿದೆ. ಸ್ವಾತಂತ್ರ್ಯದ ಬಳಿಕ ದೇಶವನ್ನು ಸದೃಢವಾಗಿ ಕಟ್ಟಿದೆ. ಆದರೆ, ಇತ್ತೀಚೆಗೆ ಪಕ್ಷ ದುರ್ಬಲವಾಗುತ್ತಿದೆ ಎಂದರು.

ಈ ಬಗ್ಗೆ ಕಾರ್ಯಕರ್ತರಲ್ಲಿ ಚಿಂತನೆಯನ್ನುಂಟು ಮಾಡಬೇಕಿದೆ.‌ ಕಾಂಗ್ರೆಸ್ ಬಹಳ ವರ್ಷಗಳ ಕಾಲ ಆಡಳಿತ ನಡೆಸಿದ ಪರಿಣಾಮ ಕಾರ್ಯಕರ್ತರಲ್ಲಿ ಬೇಜವಾಬ್ದಾರಿತನ ಬಂದಿದೆ.‌ ಇದರಿಂದ ಪಕ್ಷವನ್ನು ಈಗ ಬೂತ್ ಮಟ್ಟದಿಂದ ಕಟ್ಟಬೇಕಿದೆ. ಪ್ರಮುಖ ಕಾರ್ಯಕರ್ತರಿಗೆ ತಿಳಿವಳಿಕೆ ಮತ್ತು ಜಾಗೃತಿ ನೀಡುವ ಉದ್ದೇಶದಿಂದ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಮಾತನಾಡಿದ ಮಾಜಿ ಶಾಸಕ ಮಧು ಬಂಗಾರಪ್ಪ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಳೀಯವಾಗಿ ಪ್ರಣಾಳಿಕೆಯನ್ನು ತಯಾರು ಮಾಡುತ್ತಿದೆ. ರಾಜ್ಯದ ಪ್ರಣಾಳಿಕೆ ಬೇರೆ ಆಗಿರುತ್ತದೆ. ಸ್ಥಳೀಯ ಸಮಸ್ಯೆಗಳನ್ನು ಒಳಗೊಂಡ ಪ್ರಣಾಳಿಕೆ ಇದಾಗಿರುತ್ತದೆ. ಮಲೆನಾಡಿನಲ್ಲಿ ಭೂಹಕ್ಕು, ಅರಣ್ಯ ಸಮಿತಿ ಬಗರ್ ಹುಕುಂ ಸಮಸ್ಯೆಯನ್ನು ಪ್ರಣಾಳಿಕೆಯಲ್ಲಿ‌ ಸೇರ್ಪಡೆ‌ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...